ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಅಧಿಕಾರವಿಲ್ಲದ ರಾಜ್ಯದಲ್ಲಿ ವೇತನ ಕಡಿತ - ಜಿತೇಂದ್ರ ಸಿಂಗ್

|
Google Oneindia Kannada News

ನವದೆಹಲಿ, ಏಪ್ರಿಲ್ 27: ಬಿಜೆಪಿ ಪಕ್ಷ ಅಧಿಕಾರದಲ್ಲಿ ಇಲ್ಲದ ಕಾಂಗ್ರೆಸ್‌ ಹಾಗೂ ಇತರ ಪಕ್ಷಗಳ ಆಡಳಿತದ ರಾಜ್ಯದಲ್ಲಿ ಉದ್ಯೋಗಿಗಳ ವೇತನ ಖಡಿತ ಮಾಡಲಾಗಿದೆ. ವೇತನ ಕಡಿತವನ್ನು ಕೇಂದ್ರ ಸರ್ಕಾರ ಮಾಡಿಲ್ಲ ಎಂದು ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

''ಕಾಂಗ್ರೆಸ್ ಆದೇಶವನ್ನು ಸರಿಯಾಗಿ ಓದಿಲ್ಲ ಮತ್ತು ಅವರಿಗೆ ಇತಿಹಾಸದ ಪರಿಚಯವಿಲ್ಲ. ನಾವಲ್ಲ.. ಕಾಂಗ್ರೆಸ್ ಮತ್ತು ಬಿಜೆಪಿ ಅಲ್ಲದ ಆಡಳಿತದ ರಾಜ್ಯಗಳು ತಮ್ಮ ನೌಕರರ ವೇತನದಲ್ಲಿ ಕಡಿತ / ಮುಂದೂಡಲು ಆದೇಶಿಸಿವೆ.'' ಎಂದು ಹೇಳುವ ಮೂಲಕ ಜಿತೇಂದ್ರ ಸಿಂಗ್ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿದ್ದಾರೆ.

ಕೊರೊನಾ: ಕೇರಳ ಸರ್ಕಾರಿ ನೌಕರರ ಒಂದು ತಿಂಗಳ ವೇತನ ಕಡಿತಕ್ಕೆ ನಿರ್ಧಾರಕೊರೊನಾ: ಕೇರಳ ಸರ್ಕಾರಿ ನೌಕರರ ಒಂದು ತಿಂಗಳ ವೇತನ ಕಡಿತಕ್ಕೆ ನಿರ್ಧಾರ

''ಮಹಾರಾಷ್ಟ್ರ, ಆಂಧ್ರ ಪ್ರದೇಶ, ರಾಜಸ್ಥಾನ, ಕೇರಳ ರಾಜ್ಯಗಳಲ್ಲಿ ಸರ್ಕಾರಿ ನೌಕರರ ವೇತನ ಕಡಿತ ಮಾಡಲಾಗಿದೆ. 1963 ಮತ್ತು 1974 ರಲ್ಲಿ ಕಾಂಗ್ರೆಸ್ ಸರ್ಕಾರವು ಇತರ ಆದಾಯಗಳಿಗೆ ಮಾತ್ರವಲ್ಲದೆ ಕೃಷಿ ಆದಾಯಕ್ಕೂ ಲಾಕ್-ಇನ್ ಮಾಡಲು ಆದೇಶಗಳನ್ನು ನೀಡಿತು'' ಎಂದು ಅವರು ಹೇಳಿದ್ದಾರೆ.

Non BJP Ruled States Have Slashed Employee Salaries Says Jitendra Singh

ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ 50 % ರಷ್ಟು ವೇತನವನ್ನು ಮುಂದೂಡಲು ಆದೇಶಿಸಿದೆ. ಕೇರಳವು ಪ್ರತಿ ತಿಂಗಳು 6 ದಿನಗಳ ವೇತನವನ್ನು 5 ತಿಂಗಳವರೆಗೆ ಕಡಿತಗೊಳಿಸಲು ಆದೇಶಿಸಿದೆ.

Fake: ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯೋಮಿತಿ ಇಳಿಕೆFake: ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯೋಮಿತಿ ಇಳಿಕೆ

ಕಾಂಗ್ರೆಸ್‌ ಸರ್ಕಾರ ನೌಕರರ ವೇತನ ಕಡಿತದ ಬಗ್ಗೆ ಪ್ರಶ್ನೆ ಮಾಡಿದ್ದು, ಅದಕ್ಕೆ ಸಚಿವ ಜಿತೇಂದ್ರ ಸಿಂಗ್ ಉತ್ತರ ನೀಡಿದ್ದಾರೆ.

English summary
Union Minister Jitendra Singh said that not the Central government, Congress/non-BJP ruled states have slashed the salaries of their employees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X