ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೂಲ್‌ಕಿಟ್ ವಿವಾದ: ದಿಶಾ ರವಿ ಬಂಧನದ ಬಳಿಕ ವಕೀಲೆ ನಿಕಿತಾ ಜೇಕಬ್ ವಿರುದ್ಧ ವಾರಂಟ್

|
Google Oneindia Kannada News

ನವದೆಹಲಿ, ಫೆಬ್ರವರಿ 15: ರೈತರ ಪ್ರತಿಭಟನೆ ಬೆಂಬಲಿಸುವ ವೇಳೆ ಬಹಿರಂಗವಾದ ಟೂಲ್‌ಕಿಟ್‌ಗೆ ಸಂಬಂಧಿಸಿದಂತೆ 22 ವರ್ಷದ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರನ್ನು ಬೆಂಗಳೂರಿನಲ್ಲಿ ಬಂಧಿಸಿದ ಬಳಿಕ ದೆಹಲಿ ಪೊಲೀಸರು, ಇನ್ನು ಇಬ್ಬರು ಕಾರ್ಯಕರ್ತರಾದ ನಿಕಿತಾ ಜೇಕಬ್ ಮತ್ತು ಶಂತನು ಅವರ ವಿರುದ್ಧ ವಾರಂಟ್ ಹೊರಡಿಸಿದೆ.

ನಿಕಿತಾ ಮತ್ತು ಶಂತನು ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ. ನಿಕಿತಾ ಜೇಕಬ್ ವೃತ್ತಿಯಿಂದ ವಕೀಲೆಯಾಗಿದ್ದು, ಅವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

5 ದಿನಗಳ ಪೊಲೀಸ್ ವಶಕ್ಕೆ ದಿಶಾ ರವಿ, ಕೋರ್ಟ್‌ನಲ್ಲಿ ಕಣ್ಣೀರಿಟ್ಟ ಪರಿಸರ ಹೋರಾಟಗಾರ್ತಿ5 ದಿನಗಳ ಪೊಲೀಸ್ ವಶಕ್ಕೆ ದಿಶಾ ರವಿ, ಕೋರ್ಟ್‌ನಲ್ಲಿ ಕಣ್ಣೀರಿಟ್ಟ ಪರಿಸರ ಹೋರಾಟಗಾರ್ತಿ

ಗ್ರೆಟಾ ಥನ್‌ಬರ್ಗ್ ಹಂಚಿಕೊಂಡ ಟೂಲ್‌ಕಿಟ್ ಹಿಂದೆ ಇರುವ ಸಂಘಟನೆ 'ಪಾಯಿಂಟ್ ಫಾರ್ ಜಸ್ಟೀಸ್' ಗಣರಾಜ್ಯೋತ್ಸವ ದಿನದ ರೈತರ ಪ್ರತಿಭಟನೆಗೂ ಮುನ್ನ ಟ್ವಿಟ್ಟರ್‌ನಲ್ಲಿ ಬಿರುಗಾಳಿ ಎಬ್ಬಿಸುವ ಸಲುವಾಗಿ ನಿಕಿತಾ ಜೇಕಬ್ ಅವರನ್ನು ಸಂಪರ್ಕಿಸಿತ್ತು ಎಂದು ಪೊಲೀಸರು ಆರೋಪಿಸಿದ್ದಾರೆ.

Non Bailable Warrants Issued Against Nikita Jacob And Shantanu In Toolkit Controversy

ಪಾಯಿಂಟ್ ಫಾರ್ ಜಸ್ಟೀಸ್‌ನ ಮುಖ್ಯಸ್ಥ ಎಂಓ ದಲಿವಾಲ್ ಅವರು ನಿಕಿತಾ ಜೇಕಬ್, ದಿಶಾ ರವಿ ಮತ್ತು ಇತರರ ಜತೆ ಜೂಮ್ ಮೂಲಕ ಸಭೆ ನಡೆಸಿದ್ದರು. ಅಲ್ಲಿ ಯೋಜನೆಯನ್ನು ಸಿದ್ಧಪಡಿಸಲಾಗಿತ್ತು. ಪ್ರತಿಭಟನೆಯನ್ನು ತೀವ್ರಗೊಳಿಸುವುದು ಮತ್ತು ಪ್ರತಿಭಟನಾಕಾರರ ನಡುವೆ ಅಸಮಾಧಾನ ಹಾಗೂ ಸುಳ್ಳು ಮಾಹಿತಿಗಳನ್ನು ಹರಡಿಸಲು ಪ್ರಯತ್ನಿಸುವುದರ ಬಗ್ಗೆ ಇದರಲ್ಲಿ ಚರ್ಚಿಸಲಾಗಿತ್ತು ಎಂದು ತಿಳಿಸಿದ್ದಾರೆ.

 ಬಂದೂಕಿನೊಂದಿಗೆ ಓಡಾಡುವ ಜನರಿಗೆ ನಿರಾಯುಧ ಹುಡುಗಿ ಕಂಡರೇಕೆ ಭಯ; ದಿಶಾಗೆ ವಿಪಕ್ಷಗಳ ಬೆಂಬಲ ಬಂದೂಕಿನೊಂದಿಗೆ ಓಡಾಡುವ ಜನರಿಗೆ ನಿರಾಯುಧ ಹುಡುಗಿ ಕಂಡರೇಕೆ ಭಯ; ದಿಶಾಗೆ ವಿಪಕ್ಷಗಳ ಬೆಂಬಲ

ಗ್ರೆಟಾ ಟೂಲ್‌ಕಿಟ್‌ಅನ್ನು ಆಕಸ್ಮಿಕವಾಗಿ ಬಹಿರಂಗಪಡಿಸಿದ ಬಳಿಕ ನಿಕಿತಾ ತಮ್ಮ ಟ್ವಿಟ್ಟರ್ ಖಾತೆಯನ್ನು ಡಿಲೀಟ್ ಮಾಡಿದ್ದಾರೆ.

English summary
Delhi police have issued non bailable warrants against lawyer Nikita Jacob and Shantanu in the case involving a toolkit controversy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X