ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

251 ರೂಗೆ ಸ್ಮಾರ್ಟ್ ಫೋನ್ ಆಯ್ತು, ಈಗ ಡ್ರೈಫ್ರೂಟ್ ಮಾರಾಟದಲ್ಲಿ ಕೋಟ್ಯಂತರ ರೂಪಾಯಿ ವಂಚನೆ

|
Google Oneindia Kannada News

ನವದೆಹಲಿ, ಜನವರಿ 12: ಕೇವಲ 251 ರೂಪಾಯಿಗೆ ಸ್ಮಾರ್ಟ್ ಫೋನ್ ಮಾರಾಟ ಮಾಡುತ್ತೇವೆಂದು ಸಾವಿರಾರು ಜನರಿಗೆ ವಂಚನೆ ಎಸಗಿ ಬಂಧಿತನಾಗಿದ್ದವ ಈಗ ಮತ್ತೆ ಡ್ರೈಫ್ರೂಟ್ ಮಾರಾಟದಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿ ಸಿಕ್ಕಿಬಿದ್ದಿದ್ದಾನೆ.

2017ರಲ್ಲಿ ರಿಂಗಿಂಗ್ ಬೆಲ್ಸ್ ಎಂಬ ಹೆಸರಿನ ಕಂಪನಿ ಶುರು ಮಾಡಿ, 251 ರೂಪಾಯಿಗೆ ಸ್ಮಾರ್ಟ್ ಫೋನ್ ಪರಿಚಯಿಸುವುದಾಗಿ ಹೇಳಿ ಎಷ್ಟೋ ಜನರಿಂದ ಹಣ ಪೀಕಿದ್ದ ನೋಯ್ಡಾ ಮೂಲದ ಮೋಹಿತ್ ಗೋಯಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆದರೂ ಈತ ತನ್ನ ವಂಚನೆಯ ಚಾಳಿಯನ್ನು ಬಿಟ್ಟಿಲ್ಲ. ಇದೀಗ ಡ್ರೈಫ್ರೂಟ್ ಗಳ ಮಾರಾಟದಲ್ಲಿ ಎಷ್ಟೋ ವ್ಯಾಪಾರಿಗಳಿಗೆ ವಂಚನೆ ಮಾಡಿ ಸಿಕ್ಕಿಬಿದ್ದಿದ್ದಾನೆ.

ಆನ್‌ಲೈನ್ ಲೋನ್ ಆಪ್‌ಗಳಿಂದ ಪಡೆದ ಸಾಲ ಮನ್ನಾ: ಪೊಲೀಸರು ಏನಂತಾರೆ?ಆನ್‌ಲೈನ್ ಲೋನ್ ಆಪ್‌ಗಳಿಂದ ಪಡೆದ ಸಾಲ ಮನ್ನಾ: ಪೊಲೀಸರು ಏನಂತಾರೆ?

ಡ್ರೈಫ್ರೂಟ್ ಮಾರಾಟದಲ್ಲಿ ಈತ ಸುಮಾರು 200 ಕೋಟಿ ರೂ ವಂಚನೆ ಎಸಗಿರುವುದಾಗಿ ತಿಳಿದುಬಂದಿದೆ. ದುಬೈ ಡ್ರೈಫ್ರೂಟ್ ಮತ್ತು ಸ್ಪೈಸ್ ಹಬ್ ಎಂಬ ಕಂಪನಿ ನಡೆಸುತ್ತಿರುವ ಮೋಹಿತ್, ಹೆಚ್ಚಿನ ಬೆಲೆ ನೀಡುತ್ತೇವೆಂದು ಸಗಟು ವ್ಯಾಪಾರಿಗಳಿಂದ ಡ್ರೈಫ್ರೂಟ್ ಗಳನ್ನು ಖರೀದಿಸುತ್ತಿದ್ದ. ಅವರ ನಂಬಿಕೆ ಗಳಿಸಲು ಆರಂಭದಲ್ಲಿ ಹಣವನ್ನೂ ನೀಡುತ್ತಿದ್ದ. ಆದರೆ ಖರೀದಿ ನಂತರ ವಂಚನೆ ಮಾಡಲು ಶುರು ಮಾಡಿದ್ದ. ಆ ಡ್ರೈಫ್ರೂಟ್ ಗಳನ್ನು ಮಾರಾಟ ಮಾಡಿ ಕೋಟ್ಯಂತರ ರೂಪಾಯಿ ಗಳಿಸಿದ್ದ ಎನ್ನಲಾಗಿದೆ.

Noida: Rs 251 Smartphone Man Now Accused Of Rs 200 Crore Dry Fruits Fraud Arrested

ಇದೇ ರೀತಿ ಸುಮಾರು 500 ಮಂದಿಗೆ ವಂಚನೆ ನಡೆಸಿರುವುದಾಗಿ ತಿಳಿದುಬಂದಿದೆ. ಈತನ ವಿರುದ್ಧ 40 ಮಂದಿ ದೂರು ದಾಖಲಿಸಿದ್ದಾರೆ. ಪಂಜಾಬ್, ಹರಿಯಾಣ, ರಾಜಸ್ಥಾನ, ಮಹಾರಾಷ್ರ, ಕರ್ನಾಟಕ, ತಮಿಳುನಾಡಿನಲ್ಲಿ ಡ್ರೈಫ್ರೂಟ್ ಖರೀದಿ ಮಾಡಿ ವಂಚಿಸಿದ್ದಾನೆ ಎಂದು ತಿಳಿದುಬಂದಿದೆ.

ಈತನ ಕಂಪನಿಯಲ್ಲಿ 56 ಮಂದಿ ಕೆಲಸ ಮಾಡುತ್ತಿದ್ದಾರೆ. ಸದ್ಯಕ್ಕೆ ಮೋಹಿತ್ ಗೋಯಲ್ ಹಾಗೂ ಆತನ ಸ್ನೇಹಿತ ಓಂಪ್ರಕಾಶ್ ಜಂಗಿದ್ ಎಂಬುವರನ್ನು ವಂಚನೆ ಪ್ರಕರಣದಲ್ಲಿ ನೋಯ್ಡಾ ಪೊಲೀಸರು ಬಂಧಿಸಿದ್ದಾರೆ.

English summary
Noida based enterprenuer who had arrested in smartphone fraud case now arrested again for cheating dryfruit traders,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X