ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೊಬೆಲ್ ಪುರಸ್ಕೃತ ಕೈಲಾಸ್ ಸತ್ಯಾರ್ಥಿ ಮನೆಯಲ್ಲಿ ಕಳ್ಳತನ

ನೊಬೆಲ್ ಪಾರಿತೋಷಕ ಪುರಸ್ಕೃತ ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಸ್ ಸತ್ಯಾರ್ಥಿ ಅವರ ಮನೆಯಲ್ಲಿ ಮಂಗಳವಾರ ಕಳ್ಳತನವಾಗಿದೆ. ದೆಹಲಿಯಲ್ಲಿರುವ ಮನೆಯಲ್ಲಿ ಚಿನ್ನಾಭರಣ ಸೇರಿದಂತೆ ನೊಬೆಲ್ ಪಾರಿತೋಷಕ ಪ್ರಮಾಣ ಪತ್ರ ಕಳುವಾಗಿದೆ.

By Mahesh
|
Google Oneindia Kannada News

ನವದೆಹಲಿ, ಫೆಬ್ರವರಿ 07: ನೊಬೆಲ್ ಪಾರಿತೋಷಕ ಪುರಸ್ಕೃತ ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಸ್ ಸತ್ಯಾರ್ಥಿ ಅವರ ಮನೆಯಲ್ಲಿ ಮಂಗಳವಾರ ಕಳ್ಳತನವಾಗಿದೆ. ದೆಹಲಿಯಲ್ಲಿರುವ ಮನೆಯಲ್ಲಿ ಚಿನ್ನಾಭರಣ ಸೇರಿದಂತೆ ನೊಬೆಲ್ ಪಾರಿತೋಷಕ ಪ್ರಮಾಣ ಪತ್ರ ಕಳುವಾಗಿದೆ.

ದೆಹಲಿಯ ಅಲಕ್ ನಂದಾ ಕಾಲೋನಿಯಲ್ಲಿರುವ ಅರಾವಳಿ ಆಪಾರ್ಟ್ಮೆಂಟ್ ನಲ್ಲಿರುವ ಸತ್ಯಾರ್ಥಿ ಅವರ ಮನೆಯ ಬೀಗ ಮುರಿದು ನೊಬೆಲ್ ಪ್ರಶಸ್ತಿಯ ಪ್ರತಿಕೃತಿ ಹಾಗೂ ಪ್ರಮಾಣ ಪತ್ರವನ್ನ ಕದ್ದೊಯ್ಯಲಾಗಿದೆ. ಸತ್ಯಾರ್ಥಿ ಅವರು ನೊಬೆಲ್ ಪ್ರಶಸ್ತಿ ವಿಜೇತರ ವಿಶ್ವ ಸಮ್ಮೇಳನಕ್ಕಾಗಿ ಲ್ಯಾಟಿನ್ ಅಮೆರಿಕ ಪ್ರವಾಸದಲ್ಲಿದ್ದಾರೆ. ಸದ್ಯ ಬೊಗೊಟಾ ನಗರದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

Nobel Prize replica stolen from Kailash Satyarthi's home

ಮಕ್ಕಳ ಹಕ್ಕು, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಬಚ್ಪನ್ ಬಚಾವೋ ಆಂದೋಲನ್ ಸ್ಥಾಪಿಸಿದ ಕೈಲಾಶ್ ಸತ್ಯಾರ್ಥಿ ಅವರಿಗೆ 2014ರಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಲಭಿಸಿತ್ತು. ನೊಬೆಲ್ ಪಾರಿತೋಷಕ ಮೂಲ ಪ್ರಶಸ್ತಿಯನ್ನು ರಾಷ್ಟ್ರಪತಿ ಭವನದಲ್ಲಿ ಇರಿಸಲಾಗುತ್ತದೆ. ಪ್ರತಿಕೃತಿಯನ್ನು ವಿಜೇತರಿಗೆ ನೀಡಲಾಗುತ್ತದೆ.

English summary
A group of intruders have broken into the house of Nobel Laureate & social activist Kailash Satyarthi in the early hours of Tuesday. Many things including Nobel Prize replica has been stolen from his home. However, the original has been kept at Rashtrapati Bhawan as per protocol.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X