ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಟೋಲ್‌ ಬೂತ್‌ಗಳು ಬಂದ್ ಆಗುತ್ತಾ?

|
Google Oneindia Kannada News

ನವದೆಹಲಿ, ಜನವರಿ 24: ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಟೋಲ್‌ ಬೂತ್‌ಗಳು ರದ್ದಾಗುವ ಸಾಧ್ಯೆ ಇದೆ. ಹಾಗೆಂದ ಮಾತ್ರಕ್ಕೆ ಹಣ ಉಳಿಯಿತು ಎಂದು ಆಲೋಚಿಸುವುದು ತಪ್ಪು, ಟೋಲ್ ಸಂಗ್ರಹಕ್ಕೆ ವಾಹನದಲ್ಲೇ ಸಾಧನವನ್ನು ಅಳವಡಿಸಲು ಮುಂದಾಗಿದೆ.

ನವಯುಗ ಟೋಲ್ ಗೆ ಪೊಲೀಸ್ ಭದ್ರತೆ ಕಲ್ಪಿಸುವಂತೆ ಹೈಕೋರ್ಟ್ ಸೂಚನೆ ನವಯುಗ ಟೋಲ್ ಗೆ ಪೊಲೀಸ್ ಭದ್ರತೆ ಕಲ್ಪಿಸುವಂತೆ ಹೈಕೋರ್ಟ್ ಸೂಚನೆ

ಈಗ ಫಾಸ್ಟ್‌ ಟ್ಯಾಗ್‌ಗಳಿದ್ದರೂ ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತಿಲ್ಲ, ಫಾಸ್ಟ್‌ ಟ್ಯಾಗ್ ಲೈನಿನಲ್ಲಿ ಹಣ ಕೊಟ್ಟು ಹೋಗುವವರೂ ಕೂಡ ಬಂದು ನಿಲ್ಲುತ್ತಿದ್ದಾರೆ. ಆದರೆ ಶೀಘ್ರ ಎಲ್ಲಾ ವಾಹನಗಳಿಗೂ ಹೊಸ ಸಾಧನ ಅಳವಡಿಸಿದರೆ ಈ ಚಿಂತೆ ತಪ್ಪಲಿದೆ.

ಒಂದು ಬದಲಿ ಮಾರ್ಗ ಎರಡು ಲಾಭ: ಟ್ರಾಫಿಕ್ , ಟೋಲ್ ಇಲ್ ಒಂದು ಬದಲಿ ಮಾರ್ಗ ಎರಡು ಲಾಭ: ಟ್ರಾಫಿಕ್ , ಟೋಲ್ ಇಲ್

ವಾಹನಗಳ ಮ್ಯೂಸಿಕ್ ಸಿಸ್ಟಂ ಬಳಿ ಈ ಸಾಧನ ಇರಲಿದೆ. ಈ ಸಾಧನ ವಾಹನ ಮಾಲೀಕರ ಬ್ಯಾಂಕ್ ಖಾತೆಗೆ ಜೋಡಣೆ ಆಗಿರುತ್ತದೆ. ವಾಹನ ಸವಾರ ಒಂದು ನಿರ್ದಿಷ್ಟ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿದರೆ ಅದಕ್ಕೆ ತಗುಲುವ ಶುಲ್ಕ ನೇರವಾಗಿ ಆತ/ಆಕೆಯ ಬ್ಯಾಂಕ್ ಖಾತೆಯಿಂದ ಕಡಿತಗೊಳ್ಳುತ್ತದೆ.

No toll booth in National highway soon

ಈಗ ದೆಹಲಿ- ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಉಪಕರಣದ ಪ್ರಯೋಗ ನಡೆಯುತ್ತಿದ್ದು, ಈ ಪ್ರಯೋಗ ಯಶಸ್ವಿಯಾದರೆ ದೇಶಾದ್ಯಂತ ವಿಸ್ತರಿಸಲು ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಧಿಸೂಚನೆ ಹೊರಡಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈಗಾಗಲೇ ಟೋಲ್‍ಗಳಲ್ಲಿ ವಾಹನಗಳು ನಿಮಿಷಗಟ್ಟಲೇ ಕಾಯುವುದನ್ನು ತಡೆಯಲು ಫಾಸ್ಟ್ ಟ್ಯಾಗ್ ಅನ್ನು ಸರ್ಕಾರ ಪರಿಚಯಿಸಿದೆ.

English summary
Union government is planning to introduce new system for toll collection. with this passengers no need to wait in booths.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X