ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಪಟಾಕಿ ಬ್ಯಾನ್ : ಸುಪ್ರೀಂಕೋರ್ಟ್ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ

ದೆಹಲಿ ಮತ್ತು NCR (ನೋಯ್ಡಾ, ಗುರುಗ್ರಾಮ, ಫರೀದಾಬಾದ್) ಪ್ರದೇಶಗಳಲ್ಲಿ ಪಟಾಕಿ ನಿಷೇಧಗೊಳಿಸಿ ಸುಪ್ರ್ರೀಂಕೋರ್ಟ್ ಆದೇಶ.

|
Google Oneindia Kannada News

ಪಟಾಕಿಯಿಂದ ಶಬ್ದಮಾಲಿನ್ಯ, ವಾಯುಮಾಲಿನ್ಯ, ಹಣಮಾಲಿನ್ಯ ಎಲ್ಲಾ ಆಗುವುದು ಹೌದು ಎಂದು ಪ್ರಜ್ಞಾವಂತ ಸಮಾಜ ಒಪ್ಪಿಕೊಳ್ಳುವುದಾದರೂ, ದೀಪಾವಳಿಯಂದು ಕೊನೇ ಪಕ್ಷ ಒಂದು ಸರಪಟಾಕಿಯನ್ನಾದರೂ ಢಮ್ ಅನಿಸದಿದ್ದರೆ, ದೀಪಾವಳಿ ಆಚರಣೆ ಅಪೂರ್ಣವಾಗುತ್ತದೆ.

ಎರಡು ವರ್ಷದ ಹಿಂದೆ ಪಟಾಕಿ ನಿಷೇಧಿಸಬೇಕೆಂದು ಸರ್ವೋಚ್ಚ ನ್ಯಾಯಲಯದಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ ವಿಚಾರಣೆ ನಡೆಸುತ್ತಿದ್ದ ನ್ಯಾಯಪೀಠ, ಪಟಾಕಿಗೂ ದೀಪಾವಳಿಗೂ ಅವಿನಾವಭಾವ ಸಂಬಂಧವಿದೆ. ನಿಷೇಧಗೊಳಿಸುವ ಬದಲು ಪಟಾಕಿಯಿಂದಾಗುವ ತೊಂದರೆಗಳೇನು ಎನ್ನುವುದನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿ ಎಂದು ತೀರ್ಪು ನೀಡಿತ್ತು.

ದೀಪಾವಳಿಗೂ ಮುನ್ನ ದೆಹಲಿಯಲ್ಲಿ ಪಟಾಕಿ ಮಾರಾಟ ನಿಷೇಧದೀಪಾವಳಿಗೂ ಮುನ್ನ ದೆಹಲಿಯಲ್ಲಿ ಪಟಾಕಿ ಮಾರಾಟ ನಿಷೇಧ

ಸೋಮವಾರ (ಅ 9) ಇದೇ ರೀತಿಯ ಅರ್ಜಿಯ ವಿಚಾರಣೆ ನಡೆಸುತ್ತಿದ್ದ ನ್ಯಾಯಾಲಯ, ದೆಹಲಿ ಮತ್ತು NCR (ನೋಯ್ಡಾ, ಗುರುಗ್ರಾಮ, ಫರೀದಾಬಾದ್) ಪ್ರದೇಶಗಳಲ್ಲಿ ಪಟಾಕಿ ನಿಷೇಧಗೊಳಿಸಿ ಆದೇಶ ನೀಡಿದೆ.

ಸುಪ್ರೀಂಕೋರ್ಟ್ ಆದೇಶಕ್ಕೆ ಸಹಮತಕ್ಕಿಂತ ಆಕ್ರೋಶವೇ ಹೆಚ್ಚಾಗುತ್ತಿದೆ. ಜೊತೆಗೆ, #Delhi-NCR ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ನಲ್ಲಿದ್ದು, ಸರ್ವೋಚ್ಚ ನ್ಯಾಯಾಲಯದ ಆದೇಶ ಏನೇ ಇದ್ದರೂ, ಪಟಾಕಿ ಸಿಡಿಸುವುದಾಗಿ ಟ್ವಿಟ್ಟಿಗರು ಹೇಳುತ್ತಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪಿಗೆ ಜಾತಿಮತದ ಬಣ್ಣ ಹಚ್ಚಲಾಗುತ್ತಿದ್ದು, ಅಲ್ಲಲ್ಲಿ ಮೇಕೆ, ಆಡು, ಬಕ್ರೀದ್ ಹಬ್ಬದ ಆಚರಣೆಯನ್ನೂ ಎಳೆದು ತರಲಾಗುತ್ತಿದೆ. ಪಟಾಕಿ ನಿಷೇಧಗೊಳಿಸುವ ಬದಲು, ದೆಹಲಿ ಭಾಗದಲ್ಲಿನ ಅಕ್ರಮ ಕಟ್ಟಡಗಳಿಂದ ಆಗುತ್ತಿರುವ ಮಾಲಿನ್ಯಕ್ಕೆ ಬ್ರೇಕ್ ಹಾಕಿ ಎನ್ನುವ ಆಕ್ರೋಶವೂ ವ್ಯಕ್ತವಾಗುತ್ತಿದೆ. ಮುಂದೆ ಓದಿ..

ದೆಹಲಿ ಹಾಗೂ NCR ಪ್ರದೇಶದಲ್ಲಿ ಪಟಾಕಿ ಮಾರಾಟ ನಿಷೇಧ

ದೆಹಲಿ ಹಾಗೂ NCR ಪ್ರದೇಶದಲ್ಲಿ ಪಟಾಕಿ ಮಾರಾಟ ನಿಷೇಧ

ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ದೆಹಲಿ ಹಾಗೂ NCR ಪ್ರದೇಶದಲ್ಲಿ ಪಟಾಕಿ ಮಾರಾಟವನ್ನು ನಿಷೇಧಿಸಿ, ಸುಪ್ರೀಂ ಇಂದು ಆದೇಶ ಹೊರಡಿಸಿತ್ತು, ನವೆಂಬರ್ 1ರ ತನಕ ಈ ಆದೇಶ ಜಾರಿಯಲ್ಲಿರಲಿದೆ. ಸುಪ್ರೀಂಕೋರ್ಟ್ ನೀಡಿದ ಆದೇಶದಂತೆ ಮಾರಾಟಗಾರರು ಪಟಾಕಿ ಮಾರಾಟ ಮಾಡುವುದು ಕಂಡು ಬಂದರೆ ಮಾರಾಟ ಲೈಸನ್ಸ್ ಹಕ್ಕು ರದ್ದಾಗಲಿದೆ. ಜತೆಗೆ ದಂಡ ಕೂಡಾ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಬಿರಿಯಾನಿ ತಿನ್ನುತ್ತಾ ಸಿಗರೇಟ್ ಸೇದುತ್ತಾ, ನ್ಯಾಯಮೂರ್ತಿ ಆದೇಶ

ಬಿರಿಯಾನಿ ತಿನ್ನುತ್ತಾ ಸಿಗರೇಟ್ ಸೇದುತ್ತಾ, ನ್ಯಾಯಮೂರ್ತಿ ಆದೇಶ

ಸುಪ್ರೀಂ, ಪಟಾಕಿ ನಿಷೇಧಿಸುವ ಆದೇಶ ಹೊರಡಿಸಿದೆ, ಬಿರಿಯಾನಿ ತಿನ್ನುತ್ತಾ ಸಿಗರೇಟ್ ಸೇದುತ್ತಾ, ನ್ಯಾಯಮೂರ್ತಿ ಈ ಆದೇಶ ನೀಡಿದ್ದಾರೆ. ಸಂಭ್ರಮಾಚರಣೆ, ಮಾಲಿನ್ಯಕ್ಕೂ ಯಾಕೆ ಸಂಬಂಧ ಕಲ್ಪಿಸುತ್ತೀರಾ? ಬಕ್ರೀದ್ ದಿನ ಕುರಿಗಳನ್ನು ಬ್ಯಾನ್ ಮಾಡುವ ಗಟ್ಟಿತನ ಇವರಿಗೆ ಇದೆಯಾ ಎನ್ನುವ ಟ್ವೀಟ್.

ಗೋಧ್ರಾ ಮತ್ತು ಪಟಾಕಿ ಮಾರಾಟದ ಬಗ್ಗೆ ಸುಪ್ರೀಂ ತೀರ್ಪು

ಗೋಧ್ರಾ ಮತ್ತು ಪಟಾಕಿ ಮಾರಾಟದ ಬಗ್ಗೆ ಸುಪ್ರೀಂ ತೀರ್ಪು

ಎರಡು ಮಹತ್ವದ ತೀರ್ಪು ಕೋರ್ಟಿನಲ್ಲಿಂದು. ಒಳಗಡೆ ಪ್ರಯಾಣಿಕರು ಇದ್ದರೂ ರೈಲಿಗೆ ಬೆಂಕಿ ನೀಡಿದ್ದು ಸರಿ ಎನ್ನುವ ಒಂದು ತೀರ್ಪು, ಇನ್ನೊಂದು ಪಟಾಕಿಗೆ ಬೆಂಕಿ ಹಚ್ಚುವುದು ತಪ್ಪು ಎನ್ನುವ ತೀರ್ಪು. ನಾಸಾದ ದೀಪಾವಳಿ ದೃಶ್ಯದಲ್ಲಿ ಈ ಬಾರಿ ದೆಹಲಿಯ ಚಿತ್ರ ಇರುವುದಿಲ್ಲ. ಪ್ರತೀ ಬಾರಿಯೂ ಹಿಂದೂಗಳನ್ನೇ ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ.

ಈದ್ ಹಬ್ಬದಂದು ಬಕ್ರಾ ಬಲಿ ನಿಲ್ಲಿಸುವ ತಾಕತ್ತು ಇದೆಯಾ

ಈದ್ ಹಬ್ಬದಂದು ಬಕ್ರಾ ಬಲಿ ನಿಲ್ಲಿಸುವ ತಾಕತ್ತು ಇದೆಯಾ

1667ರಲ್ಲಿ ಔರಂಗಜೇಬ್ ಪಟಾಕಿ ಬ್ಯಾನ್ ಮಾಡಿದ್ದ, ಈಗ 2017ರಲ್ಲಿ - Aurangjeb is back. ಈದ್ ಹಬ್ಬದಂದು ಬಕ್ರಾ ಬಲಿ ನಿಲ್ಲಿಸುವ ತಾಕತ್ತು ಸರ್ವೋಚ್ಚ ನ್ಯಾಯಾಲಯಕ್ಕೆ ಇದೆಯಾ ಎನ್ನುವ ಟ್ವೀಟ್.

ಪಟಾಕಿ ಹೊಡೆದು ಹಬ್ಬ ನಾವು ಆಚರಿಸುತ್ತೇವೆ

ಪಟಾಕಿ ಹೊಡೆದು ಹಬ್ಬ ನಾವು ಆಚರಿಸುತ್ತೇವೆ

ದೆಹಲಿ ಭಾಗದ ಪಟಾಕಿ ವ್ಯಾಪಾರಿಗಳಿಗೆ ಪರಿಹಾರ ಕೊಟ್ಟು, ಪಟಾಕಿಯಿಟ್ಟುಕೊಳ್ಳಿ. ಗೋಧ್ರಾದಲ್ಲಿ ರೈಲಿಗೆ ಬೆಂಕಿ ಹಚ್ಚಿದವರಿಗೆ ಮರಣದಂಡನೆ ನೀಡಲಿಲ್ಲ. ಪ್ರಾಣಿಗಳನ್ನು ಬಲಿಕೊಟ್ಟು ಹಬ್ಬ ಆಚರಿಸುವ ಬದಲು, ಪಟಾಕಿ ಹೊಡೆದು ಹಬ್ಬ ನಾವು ಆಚರಿಸುತ್ತೇವೆ.

English summary
Supreme Court decision of NO Sale of fire crackers in Delhi and in NCR: Twitterite angry on SC verdict
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X