ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್‌ 5.0: ಅಂತರರಾಜ್ಯ, ಅಂತರ ಜಿಲ್ಲೆ ಪ್ರಯಾಣಕ್ಕೆ ನಿರ್ಬಂಧ ಇಲ್ಲ

|
Google Oneindia Kannada News

ದೆಹಲಿ, ಮೇ 30: ಭಾರತ ದೇಶಾದ್ಯಂತ ಜೂನ್ 31ರವರೆಗೂ ಲಾಕ್‌ಡೌನ್‌ ವಿಸ್ತರಣೆ ಮಾಡಲಾಗಿದೆ. ಈ ಕುರಿತು ಶನಿವಾರ ಸಂಜೆ ಕೇಂದ್ರ ಗೃಹ ಸಚಿವಾಲಯದಿಂದ ಹೊಸ ಮಾರ್ಗಸೂಚಿ ಹೊರಡಿಸಿದ್ದು, ಅಂತರ ಜಿಲ್ಲೆ ಮತ್ತು ಅಂತರ ರಾಜ್ಯ ಪ್ರಯಾಣಕ್ಕೆ ಮುಕ್ತ ಅವಕಾಶ ಕಲ್ಪಿಸಿದೆ.

Recommended Video

ಉಡುಪಿಯಲ್ಲಿ 18 ಮಕ್ಕಳು ಕೊರೋನಾ‌ ಗೆದ್ದಿದ್ದು ಹೇಗೆ? | Udupi 18 Children recovered

ಕೊರೊನಾ ವೈರಸ್ ಭೀತಿಯಲ್ಲಿ ಹಲವು ರಾಜ್ಯ ಸರ್ಕಾರಗಳು ಅಂತರರಾಜ್ಯ ಪ್ರಯಾಣ ಮತ್ತು ಅಂತರ ಜಿಲ್ಲೆಯ ಪ್ರಯಾಣವನ್ನು ನಿಷೇಧಿಸಿದೆ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಮುಕ್ತವಾಗಿ ಸಂಚರಿಸುವಂತಿರಲಿಲ್ಲ. ಪಾಸ್ ಇಲ್ಲದೆ, ಅನುಮತಿ ಇಲ್ಲದೇ ಸಂಚಾರ ಮಾಡುವಂತಿರಲಿಲ್ಲ.

ಬ್ರೇಕಿಂಗ್ ನ್ಯೂಸ್ ; ಒಂದು ತಿಂಗಳ ಕಾಲ ಲಾಕ್ ಡೌನ್ ವಿಸ್ತರಣೆಬ್ರೇಕಿಂಗ್ ನ್ಯೂಸ್ ; ಒಂದು ತಿಂಗಳ ಕಾಲ ಲಾಕ್ ಡೌನ್ ವಿಸ್ತರಣೆ

ಆದ್ರೀಗ, ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಯಲ್ಲಿ ಅಂತರ ರಾಜ್ಯ ಪ್ರಯಾಣಕ್ಕೆ ಪಾಸ್ ಅಗತ್ಯ ಇಲ್ಲ ತಿಳಿಸಿದೆ. ಇನ್ನು ಲಾಕ್‌ಡೌನ್‌ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಪೂರ್ಣ ಪ್ರಮಾಣದ ಅಧಿಕಾರ ಇದೆ ಎಂದು ತಿಳಿಸಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ಅಂತರ ರಾಜ್ಯ ಪ್ರಯಾಣಕ್ಕೆ ಅಥವಾ ಬೇರೆ ರಾಜ್ಯದಿಂದ ಬರುವ ಜನರಿಗೆ ನಿರ್ಬಂಧ ಹೇರಿದರೆ ಅಚ್ಚರಿ ಇಲ್ಲ.

 No Restrictions On Inter state And Intra District Travel

ಈ ವಿಚಾರದಲ್ಲಿ ಕರ್ನಾಟಕ ಸರ್ಕಾರ ಐದು ರಾಜ್ಯಗಳ ಜನರಿಗೆ ನಿರ್ಬಂಧ ಹೇರಿತ್ತು. ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನದಿಂದ ಬರುವ ರೈಲು, ವಿಮಾನ, ವಾಹನಗಳಿಗೆ ನಿಬಂಧನೆಗಳನ್ನು ಹಾಕಿತ್ತು.

English summary
Lockdown 5.0 guidelines: No restriction on interstate and intra state travel. States to have local procedures and conditions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X