ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಂ ಸಂಘಟನೆಗಳ ಮನವಿ ತಿರಸ್ಕರಿಸಿದ ಚುನಾವಣಾ ಆಯೋಗ

|
Google Oneindia Kannada News

ನವದೆಹಲಿ, ಮೇ 6: ರಂಜಾನ್ ಹಿನ್ನೆಲೆಯಲ್ಲಿ ಮತದಾನ ಸಮಯ ಬದಲಾಯಿಸಬೇಕು ಎಂದು ಮುಸ್ಲಿಂ ಸಂಘಟನೆಗಳು ಸಲ್ಲಿಸಿದ್ದ ಮನವಿಯನ್ನು ಕೇಂದ್ರ ಚುನಾವಣಾ ಆಯೋಗ ತಿರಸ್ಕರಿಸಿದೆ.

ರಂಜಾನ್ ಹಿನ್ನೆಲೆಯಲ್ಲಿ ಬೆಳಗ್ಗೆ 4.30 ಅಥವಾ 5ಗಂಟೆಯಿಂದ ಮತದಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮುಸ್ಲಿಂ ಸಂಘಟನೆಗಳು ಮನವಿ ಮಾಡಿದ್ದವು. ರಂಜಾನ್ ಹಾಗೂ ಬೇಸಿಗೆ ಕಾಲದ ಕಾರಣದಿಂದ2 ಗಂಟೆ ಮೊದಲು ಮತದಾನ ಆರಂಭಿಸಬೇಕು ಎನ್ನುವುದು ಈ ಸಂಘಟನೆಗ ಆಗ್ರಹವಾಗಿತ್ತು. ಈ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲೂ ಅರ್ಜಿ ಸಲ್ಲಿಕೆಯಾಗಿತ್ತು. ಅರ್ಜಿ ಪರಿಗಣಿಸಿ ಆದೇಶ ನೀಡುವಂತೆ ಆಯೋಗಕ್ಕೆ ಕೋರ್ಟ್‌ ಸೂಚಿಸಿತ್ತು.

5ನೇ ಹಂತದ ಚುನಾವಣೆ LIVE: ಘಟಾನುಘಟಿಗಳ ಭವಿಷ್ಯ ಇಂದು ನಿರ್ಧಾರ5ನೇ ಹಂತದ ಚುನಾವಣೆ LIVE: ಘಟಾನುಘಟಿಗಳ ಭವಿಷ್ಯ ಇಂದು ನಿರ್ಧಾರ

ಸಂಘಟನೆಗಳ ಮನವಿ ಆಧರಿಸಿ ಆದೇಶ ನೀಡಿರುವ ಆಯೋಗ, ಬೆಳಗ್ಗೆ 5 ಗಂಟೆಯಿಂದಲೇ ಮತದಾನಕ್ಕೆ ವ್ಯವಸ್ಥೆ ಮಾಡುವುದು ಅಸಾಧ್ಯ. ಈ ಕುರಿತು ಸಿದ್ಧತೆ ಮಾಡಲು ಈಗ ಅವಕಾಶವಿಲ್ಲ. ಹೀಗಾಗಿ ಮೇ 6, 12 ಹಾಗೂ 19ರಂದು ಎಂದಿನಂತೆ ಬೆಳಗ್ಗೆ 7ರಿಂದಲೇ ಮತದಾನ ನಡೆಯಲಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.

No Ramzan voting relief for Muslims

ಚುನಾವಣಾ ಆಯೋಗವು ಮತದಾನದ ವೇಳಾಪಟ್ಟಿ ಪ್ರಕಟಿಸಿದ ಸಂದರ್ಭದಲ್ಲಿಯೂ ಈ ವಿಚಾರ ಪ್ರಸ್ತಾಪವಾಗಿತ್ತು. ಮುಸ್ಲಿಂ ಮತದಾರರು ಮತಗಟ್ಟೆಗೆ ಬರದಿರಲಿ ಎಂದು ಉದ್ದೇಶಪೂರ್ವಕವಾಗಿ ಬಿಜೆಪಿ ಒತ್ತಡಕ್ಕೆ ಮಣಿದು ಆಯೋಗ ಈ ರೀತಿ ವೇಳಾಪಟ್ಟಿ ಪ್ರಕಟಿಸಿದೆ ಎಂದು ಪಶ್ಚಿಮಬಂಗಾಳದಲ್ಲಿ ಟಿಎಂಸಿ ನಾಯಕರು ಆರೋಪಿಸಿದ್ದರು. ಇದನ್ನು ಆಯೋಗ ಅಲ್ಲಗಳೆದಿತ್ತು. ಇದಲ್ಲದೇ ಕೆಲ ಮುಸ್ಲಿಂ ಮುಖಂಡರು ಕೂಡ ಟಿಎಂಸಿ ಹೇಳಿಕೆ ಖಂಡಿಸಿ, ರಂಜಾನ್ ಉಪವಾಸ ಹಾಗೂ ಮತದಾನಕ್ಕೆ ಸಂಬಂಧವಿಲ್ಲ ಎಂದು ತಿಳಿಸಿದ್ದರು.

English summary
Election commission rejects plea seeking rescheduling of the commencement of voting from. 4.30 or 5 am during the month of Ramzan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X