ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದಿಯನ್ನು ಮುಖ್ಯ ಭಾಷೆಯನ್ನಾಗಿ ಮಾಡುವ ಪ್ರಸ್ತಾಪವಿಲ್ಲ: ಕೇಂದ್ರ ಸ್ಪಷ್ಟನೆ

|
Google Oneindia Kannada News

ನವ ದೆಹಲಿ, ನವೆಂಬರ್ 21: ಹಿಂದಿಯನ್ನು ರಾಷ್ಟ್ರದ ಮುಖ್ಯ ಭಾಷೆಯನ್ನಾಗಿ ಮಾಡುವ ಯಾವ ಪ್ರಸ್ತಾಪವೂ ಕೇಂದ್ರ ಸರ್ಕಾರದ ಮುಂದೆ ಇಲ್ಲ. ಅದೇ ರೀತಿ ಎಲ್ಲಾ ಉಪಯೋಗಗಳಿಗಾಗಿ ಒಂದೇ ಕಾರ್ಡ್ ಅನ್ನು ಜಾರಿಗೊಳಿಸುವ ಯೋಜನೆಗಳಿಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಸಂಸತ್ತಿನಲ್ಲಿ ತಿಳಿಸಿದೆ.

Recommended Video

Shahin Afridi accused of showing private parts on video cal with TikTok Star

ಗೃಹ ಸಚಿವ ಅಮಿತ್ ಶಾ ತಮ್ಮ ಹಿಂದಿನ ಭಾಷಣಗಳಲ್ಲಿ ಮಾತನಾಡಿದ್ದರು, ಆದರೆ ಅವರ ಸಚಿವಾಲಯವೇ ಪ್ರಶ್ನಾವಳಿ ಸಮಯದಲ್ಲಿ ರಾಜ್ಯಸಭೆಗೆ ಸ್ಪಷ್ಟಪಡಿಸಿದೆ.

ಕೇಂದ್ರ ಸರ್ಕಾರಕ್ಕೆ ಶಹಬ್ಬಾಶ್ ಎಂದ ಯೋಗ ಗುರು ರಾಮ್ ದೇವ್!ಕೇಂದ್ರ ಸರ್ಕಾರಕ್ಕೆ ಶಹಬ್ಬಾಶ್ ಎಂದ ಯೋಗ ಗುರು ರಾಮ್ ದೇವ್!

ಒಂದು ದೇಶ, ಒಂದು ಭಾಷೆ ಮತ್ತು ಹಿಂದಿ ಏಕೈಕ ಭಾಷೆ ಎಂದು ಸಚಿವರು ಹೇಳಿದ್ದಾರಲ್ಲಾ ಎಂದು ತಮಿಳುನಾಡು ಸಂಸದ ವೈಕೊ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ,"ಒಂದು ದೇಶ, ಒಂದು ಭಾಷೆಯ ಪ್ರಸ್ತಾಪವಿಲ್ಲ" ಎಂದರು.

No proposal to make Hindi main language: Govt

"ಭಾರತದ ಸಂವಿಧಾನವು ದೇಶದ ಎಲ್ಲಾ ಭಾಷೆಗಳಿಗೆ ಸಮಾನ ಪ್ರಾಮುಖ್ಯತೆಯನ್ನು ನೀಡುತ್ತದೆ. ಭಾಷಾ ವಿಷಯಗಳು ಭಾರತದ ಸಂವಿಧಾನದ ಏಕಕಾಲೀನ ಪಟ್ಟಿಯಲ್ಲಿವೆ ಮತ್ತು ಅವು ಕೇಂದ್ರ ಹಾಗೂ ಆಯಾ ರಾಜ್ಯ ಸರ್ಕಾರಗಳ ಕಾರ್ಯಕಾರಿ ಕ್ಷೇತ್ರಗಳಲ್ಲಿವೆ." ಎಂದು ರೆಡ್ಡಿ ಹೇಳಿದರು.

ಎಲ್ಲಾ ಉಪಯೋಗಗಳಿಗೂ ಒಂದೇ ಕಾರ್ಡ್ ತರಲು ಸರ್ಕಾರ ಯೋಚಿಸುತ್ತಿದೆಯೇ ಎಂಬ ಇನ್ನೊಂದು ಪ್ರಶ್ನೆಗೆ, ರೆಡ್ಡಿ ಉತ್ತರಿಸುತ್ತಾ ಪ್ರಸ್ತುತ ಎಲ್ಲಾ ಉಪಯುಕ್ತತೆಗಳಿಗೆ ಒಂದೇ ಕಾರ್ಡ್ ತರುವ ಪ್ರಸ್ತಾಪವಿಲ್ಲ ಎಂದರು.

No proposal to make Hindi main language: Govt

ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಆಧಾರ್, ಪಾಸ್ ಪೋರ್ಟ್, ಪಡಿತರ ಚೀಟಿ, ಚಾಲನಾ ಪರವಾನಗಿ ಮತ್ತು ಇತರ ಎಲ್ಲ ಉಪಯೋಗಗಳನ್ನು ಹೊಂದಿರುವ ನಾಗರೀಕರಿಗೆ ವಿವಿಧೋದ್ದೇಶ ಕಾರ್ಡ್ ಕಲ್ಪನೆಯನ್ನು ಅಮಿತ್ ಶಾ ಪ್ರಸ್ತಾಪಿಸಿದ್ದರು.

"ನಾವು ಆಧಾರ್, ಪಾಸ್ ಪೋರ್ಟ್, ಪಡಿತರ ಚೀಟಿ, ಚಾಲನಾ ಪರವಾನಗಿ, ಮತದಾರ ಕಾರ್ಡ್ ನಂತಹ ಎಲ್ಲಾ ಉಪಯುಕ್ತತೆಗಳಿಗೆ ಒಂದು ಕಾರ್ಡ್ ಹೊಂದಬಹುದು. ಇದು ಸಂಭಾವ್ಯ ಎಂದು ಹೇಳಿದರು.

English summary
There is Neither Any Proposal To Promote Hindi As The Countrys Main Language Nor Any Plans To Usher In One Card For All Utilities, The Government Told Parliament On Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X