ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವಿರ ರುಪಾಯಿ ನೋಟು ಮತ್ತೆ ಚಲಾವಣೆಗೆ ಬರಲ್ಲ, ಇದು ಅಧಿಕೃತ

1000 ರುಪಾಯಿ ನೋಟುಗಳನ್ನು ಚಲಾವಣೆಗೆ ತರುವ ಯಾವ ಆಲೋಚನೆಯೂ ಕೇಂದ್ರ ಸರಕಾರಕ್ಕೆ ಇಲ್ಲ ಎಂಬುದು ಇದೀಗ ಅಧಿಕೃತವಾಗಿದೆ. ಸದ್ಯದಲ್ಲೇ ಸಾವಿರ ರುಪಾಯಿ ನೋಟು ಚಲಾವಣೆಗೆ ಬರುತ್ತದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.ಇದಕ್ಕೆ ಸ್ಪಷ್ಟನೆ ನೀಡಲಾಗಿದೆ

|
Google Oneindia Kannada News

ನವದೆಹಲಿ, ಫೆಬ್ರವರಿ 22: ಸಾವಿರ ರುಪಾಯಿ ನೋಟುಗಳನ್ನು ಚಲಾವಣೆಗೆ ತರುವ ಯಾವ ಆಲೋಚನೆಯೂ ಕೇಂದ್ರ ಸರಕಾರಕ್ಕೆ ಇಲ್ಲ. ಕಡಿಮೆ ಮುಖಬೆಲೆಯ ನೋಟುಗಳ ಚಲಾವಣೆ ಬಗ್ಗೆ ಮಾತ್ರ ಗಮನ ಕೇಂದ್ರೀಕರಿಸಲಾಗುವುದು ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಬುಧವಾರ ಹೇಳಿದ್ದಾರೆ.

1000 ರುಪಾಯಿ ನೋಟು ಬಿಡುಗಡೆ ಮಾಡುವ ಆಲೋಚನೆ ಇಲ್ಲ. 500 ಹಾಗೂ ಅದಕ್ಕಿಂತ ಕಡಿಮೆ ಮುಖಬೆಲೆಯ ನೋಟುಗಳ ಮುದ್ರಣ ಹಾಗೂ ಚಲಾವಣೆ ಕಡೆಗೆ ಗಮನ ಕೇಂದ್ರೀಕರಿಸುತ್ತೇವೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಸಾವಿರ ರುಪಾಯಿ ನೋಟುಗಳ ಬಿಡುಗಡೆಗೆ ಆರ್ ಬಿಐ ಸಿದ್ಧತೆ ನಡೆಸಿದೆ ಎಂಬ ಮಾಧ್ಯಮಗಳಲ್ಲಿ ವರದಿಯಾಗಿದ್ದಕ್ಕೆ ಅವರು ಸ್ಪಷ್ಟನೆ ನೀಡಿದರು.[2 ಲಕ್ಷ ರುಪಾಯಿ ಮೇಲಿನ ಆಭರಣದ ನಗದು ಖರೀದಿಗೆ ಶೇ 1ರಷ್ಟು ತೆರಿಗೆ]

No plans to introduce 1000 notes: Shaktikanta Das

ಕಪ್ಪು ಹಣದ ನಿಯಂತ್ರಣಕ್ಕೆ ಹಾಗೂ ಭಯೋತ್ಪಾದನೆ ಕೃತ್ಯಗಳಿಗೆ ಹಣಕಾಸು ನೆರವು ಸಿಗಬಾರದು ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಕಳೆದ ನವೆಂಬರ್ 8ರಂದು 1000, 500 ರುಪಾಯಿಗಳ ನೋಟನ್ನು ಚಲಾವಣೆಯಿಂದ ಹಿಂಪಡೆಯುವ ನಿರ್ಧಾರ ಘೋಷಿಸಿದ್ದರು.[ಮತಾಂತರಕ್ಕಾಗಿ ಕ್ರಿಶ್ಚಿಯನ್ ಸಂಘಟನೆಗಳಿಂದ ಎನ್ ಜಿಒಗಳಿಗೆ 17 ಸಾವಿರ ಕೋಟಿ]

ಅದಾಗಿ ನೂರು ದಿನಗಳ ನಂತರ ಕೂಡ ಎಟಿಎಂಗಳಲ್ಲಿ ಅಗತ್ಯ ಪ್ರಮಾಣದ ಹಣ ಸಿಗುತ್ತಿಲ್ಲ ಎಂಬ ಜನ ಸಾಮಾನ್ಯರ ದೂರುಗಳಿಗೆ ಪ್ರತಿಕ್ರಿಯಿಸಿರುವ ಶಕ್ತಿಕಾಂತ್ ದಾಸ್, ಎಷ್ಟು ಹಣ ಅಗತ್ಯವಿದೆಯೋ ಅಷ್ಟನ್ನು ಮಾತ್ರ ಡ್ರಾ ಮಾಡಿ ಎಂದಿದ್ದಾರೆ.

English summary
The central government has no plans to re-introduce Rs 1,000 currency notes and will focus on lower denominations, Economic Affairs Secretary Shaktikanta Das said on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X