ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್-19 ಭಯಬೇಡ; ಹಾಟ್ ಸ್ಪಾಟ್ ನಲ್ಲೇ ಒಬ್ಬರೂ ಸತ್ತಿಲ್ಲ!

|
Google Oneindia Kannada News

ಮುಂಬೈ, ಜೂನ್.08: ಏಷ್ಯಾಖಂಡದ ಅತಿದೊಡ್ಡ ಸ್ಲಂ. ಒಂದು ವಾರದ ಹಿಂದೆಯಷ್ಟೇ ನೊವೆಲ್ ಕೊರೊನಾ ವೈರಸ್ ಹಾಟ್ ಸ್ಪಾಟ್ ಎನಿಸಿಕೊಂಡಿದ್ದ ಮುಂಬೈನ ಧಾರಾವಿ ಪ್ರದೇಶದಲ್ಲಿ ಚಿತ್ರಣ ಸಂಪೂರ್ಣ ಬದಲಾಗಿದೆ. ಕಳೆದ ಏಳು ದಿನಗಳಿಂದ ಧಾರಾವಿ ಪ್ರದೇಶದಲ್ಲಿ ಒಬ್ಬರೇ ಒಬ್ಬರು ಸೋಂಕಿನಿಂದ ಪ್ರಾಣ ಬಿಟ್ಟಿಲ್ಲ.

Recommended Video

ಮುಗಿಲು ಮುಟ್ಟಿದ ಧೃವ ಸರ್ಜಾ ಆಕ್ರಂದನ | Chiranjeevi Sarja | Dhruva Sarja | O

ಮುಂಬೈ ಮಹಾನಗರ ಪಾಲಿಕೆ ನೀಡಿರುವ ಅಂಕಿ-ಅಂಶಗಳ ಪ್ರಕಾರ ಜೂನ್.01ರಂದು ಧಾರಾವಿ ಪ್ರದೇಶದಲ್ಲಿ 34 ಕೊರೊನಾ ವೈರಸ್ ಸೋಂಕಿತರ ಪ್ರಕರಣಗಳು ಪತ್ತೆಯಾಗಿದ್ದವು. ಅದಾಗಿ ಜೂನ್.06ರವರೆಗೂ ಒಬ್ಬರಲ್ಲೂ ಸೋಂಕು ಪತ್ತೆಯಾಗಿರಲಿಲ್ಲ. ಜೂನ್.06ರಂದು 10 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಜೂನ್.07ರಂದು 13 ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿತ್ತು.

ಕೊರೊನಾ ಪೀಡಿತ ಮುಂಬೈನಿಂದ ಹೊರಬಿದ್ದ ಗುಡ್ ನ್ಯೂಸ್ಕೊರೊನಾ ಪೀಡಿತ ಮುಂಬೈನಿಂದ ಹೊರಬಿದ್ದ ಗುಡ್ ನ್ಯೂಸ್

ಜೂನ್.05ರಂದು 17 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ಜೂನ್.04ರಂದು 23 ಜನರಿಗೆ ಸೋಂಕು ದೃಢಪಟ್ಟಿತ್ತು. ಈ ಅಂಕಿ-ಅಂಶಗಳು ಧಾರಾವಿ ಪ್ರದೇಶದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ ಕ್ರಮೇಣ ಇಳಿಕೆಯಾಗುತ್ತಿರುವುದನ್ನು ಸ್ಪಷ್ಟವಾಗಿ ಹೇಳುತ್ತದೆ.

ಒಬ್ಬರೂ ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿಲ್ಲ

ಒಬ್ಬರೂ ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿಲ್ಲ

ಜೂನ್.07ರ ಅಂಕಿ-ಅಂಶಗಳ ಪ್ರಕಾರ ಧಾರಾವಿ ಸ್ಲಂ ಪ್ರದೇಶದಲ್ಲಿ ಒಟ್ಟು 1,912 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಕಳೆದ ಮೇ.30ರಿಂದ ಜೂನ್.07ರವರೆಗೂ ಮಹಾಮಾರಿಗೆ ಒಬ್ಬರೇ ಒಬ್ಬರು ಪ್ರಾಣ ಬಿಟ್ಟಿಲ್ಲ ಎಂದು ಮುಂಬೈ ಮಹಾನಗರ ಪಾಲಿಕೆ ಆಯುಕ್ತ ಕಿರಣ್ ದಿಗ್ವಾಕರ್ ತಿಳಿಸಿದ್ದಾರೆ.

ಧಾರಾವಿಯಲ್ಲಿ 6 ರಿಂದ 7 ಲಕ್ಷ ಜನರಿಗೆ ಸ್ಕ್ರೀನಿಂಗ್

ಧಾರಾವಿಯಲ್ಲಿ 6 ರಿಂದ 7 ಲಕ್ಷ ಜನರಿಗೆ ಸ್ಕ್ರೀನಿಂಗ್

ಕೊರೊನಾ ವೈರಸ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಾಂತಿಕಾರಿಯಾಗಿ ಕಾರ್ಯವನ್ನು ಮಾಡಲಾಯಿತು. ಧಾರಾವಿ ಸ್ಲಂನಲ್ಲಿ ಇರುವ ಪ್ರತಿಯೊಂದು ಮನೆ ಮನೆಗೆ ತೆರಳಿ ವೈದ್ಯಕೀಯ ತಪಾಸಣೆ ನಡೆಸಲಾಯಿತು. 6 ರಿಂದ 7 ಲಕ್ಷ ಜನರನ್ನು ಇದುವರೆಗೂ ಸ್ಕ್ರೀನಿಂಗ್ ಗೆ ಒಳಪಡಿಸಲಾಗಿದೆ ಎಂದು ಈ ಪ್ರದೇಶದಲ್ಲಿ ಕೊರೊನಾ ವೈರಸ್ ನಿಯಂತ್ರಣದ ಉಸ್ತುವಾರಿ ವಹಿಸಿಕೊಂಡಿರುವ ಮುಂಬೈ ಮಹಾನಗರ ಪಾಲಿಕೆ ಆಯುಕ್ತ ಕಿರಣ್ ದಿಗ್ವಾಕರ್ ತಿಳಿಸಿದ್ದಾರೆ.

ಧಾರಾವಿಯಲ್ಲಿ ಅತಿಹೆಚ್ಚು ವೈದ್ಯಕೀಯ ತಪಾಸಣೆ

ಧಾರಾವಿಯಲ್ಲಿ ಅತಿಹೆಚ್ಚು ವೈದ್ಯಕೀಯ ತಪಾಸಣೆ

ಕೊರೊನಾ ವೈರಸ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಜ್ವರ, ಶೀತ, ಉಸಿರಾಟದ ಪ್ರಮಾಣದಲ್ಲಿ ವ್ಯತ್ಯಾಸ ಕಂಡು ಬಂದ ಪ್ರತಿಯೊಬ್ಬರನ್ನು ಪ್ರಾಥಮಿಕವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿತ್ತು. ಇದರಿಂದ ಸೋಂಕು ಬೇರೆಯವರಿಗೆ ಹರಡುವ ಮುನ್ನವೇ ನಿಯಂತ್ರಣ ಸಾಧಿಸಲು ಸಾಧ್ಯವಾಯಿತು ಎನ್ನುತ್ತಾರೆ ಬಿಎಂಸಿ ಕಮೀಷನರ್ ಕಿರಣ್ ದಿಗ್ವಾಕರ್.

ಧಾರಾವಿಯ 8,500 ಸೋಂಕಿತರು ಕ್ವಾರೆಂಟೈನ್

ಧಾರಾವಿಯ 8,500 ಸೋಂಕಿತರು ಕ್ವಾರೆಂಟೈನ್

ಮುಂಬೈನ ಧಾರಾವಿ ಸ್ಲಂನಲ್ಲಿ 8.50 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, ಬಹುತೇಕ ಎಲ್ಲರನ್ನೂ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ 8,500 ಜನರನ್ನು ಪ್ರತ್ಯೇಕವಾಗಿ ಸರ್ಕಾರದ ಕ್ವಾರೆಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ. ಮೊದಲ ಕೊರೊನಾ ವೈರಸ್ ಸೋಂಕಿತ ಪ್ರಕರಣ ಪತ್ತೆಯಾದಾಗಿಂತ ಇತ್ತೀಚಿನವರೆಗೂ ಮುಂಬೈನ ಧಾರಾವಿ ಸ್ಲಂ ಕೊರೊನಾ ವೈರಸ್ ನ ಹಾಟ್ ಸ್ಪಾಟ್ ಎಂದೇ ಗುರುತಿಸಿಕೊಂಡಿತ್ತು.

English summary
No one has died of coronavirus in Mumbai's dharavi area in the last 7 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X