ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ರೈತರಿಂದ ಯಾರೂ ಭೂಮಿ ಕಸಿದುಕೊಳ್ಳಲು ಸಾಧ್ಯವಿಲ್ಲ; ಮೋದಿ

|
Google Oneindia Kannada News

ನವದೆಹಲಿ, ಫೆಬ್ರುವರಿ 04: "ನಾವು ನಮ್ಮ ರೈತರು ಹಾಗೂ ಗ್ರಾಮಗಳನ್ನು ಬಲಿಷ್ಠಗೊಳಿಸಿದ್ದೇವೆ. ಹೀಗಾಗಿ ನಮ್ಮ ರೈತರಿಂದ ಯಾರೂ ಭೂಮಿಯನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಉತ್ತರ ಪ್ರದೇಶದ ಗೋರಖ್ ಪುರದ ಚೌರಿ ಚೌರಾದಲ್ಲಿ "ಚೌರಿ ಚೌರಾ" ಶತಮಾನೋತ್ಸವ ಸಮಾರಂಭವನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಚೌರಿ ಚೌರಾ ಇತಿಹಾಸವನ್ನು ಮೆಲುಕು ಹಾಕಿದರು. "ಈ ಘಟನೆ ಸ್ವಾತಂತ್ರ್ಯ ಹೋರಾಟದ ಹೆಗ್ಗುರುತು. "ಚೌರಿ ಚೌರಾ" ಗೆ 100 ವರ್ಷಗಳು ತುಂಬುತ್ತಿದೆ. ಆದರೆ ಈ ಘಟನೆಯಲ್ಲಿ ಹುತಾತ್ಮರಾದವರಿಗೆ ಭಾರತದ ಇತಿಹಾಸದಲ್ಲಿ ಸರಿಯಾದ ಗೌರವ ದೊರೆತಿಲ್ಲ. ಈ ಘಟನೆ ದೇಶಕ್ಕೆ ಕೊಟ್ಟ ಸಂದೇಶ ದೊಡ್ಡದು" ಎಂದು ಹೇಳಿದರು. ಮುಂದೆ ಓದಿ...

ಅಭಿವೃದ್ಧಿ ಮಂತ್ರ ಜಪಿಸುತ್ತಾ ಅಸ್ಸಾಂನತ್ತ ಮೋದಿ ಪ್ರಯಾಣ ಅಭಿವೃದ್ಧಿ ಮಂತ್ರ ಜಪಿಸುತ್ತಾ ಅಸ್ಸಾಂನತ್ತ ಮೋದಿ ಪ್ರಯಾಣ

"ಜನರ ಹೃದಯದಲ್ಲೇ ಬೆಂಕಿ ಹೊತ್ತಿಕೊಂಡಿತು"

ಭಾರತದಲ್ಲಿ ಚೌರಿ ಚೌರಾ ಘಟನೆಗೆ ಮಹತ್ವ ದೊರೆತಿಲ್ಲ. ಹಲವು ಕಾರಣಗಳಿಂದ ಈ ಘಟನೆಯನ್ನು ಚಿಕ್ಕದೆಂಬಂತೆ ಬಿಂಬಿಸಲಾಗಿದೆ. ಅಂದು ಪೊಲೀಸ್ ಠಾಣೆಗೆ ಮಾತ್ರ ಬೆಂಕಿ ಹೊತ್ತಿಕೊಂಡಿಲ್ಲ. ಜನರ ಹೃದಯದಲ್ಲೇ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಿದರು.

 ರೈತರ ಹಿತಾಸಕ್ತಿಗಳ ಕುರಿತು ಮೋದಿ ಮಾತು

ರೈತರ ಹಿತಾಸಕ್ತಿಗಳ ಕುರಿತು ಮೋದಿ ಮಾತು

ದೇಶದ ಪ್ರಗತಿಯ ಹಿಂದೆ ನಮ್ಮ ರೈತರಿದ್ದಾರೆ. ಚೌರಿ ಚೌರಾ ಘಟನೆಯಲ್ಲಿ ರೈತರ ಪಾತ್ರವೂ ಬಹುಮುಖ್ಯವಾಗಿದೆ ಎಂದು ಹೇಳಿದ ಅವರು, "ಕಳೆದ ಆರು ವರ್ಷಗಳಿಂದ ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕೊರೊನಾ ಸೋಂಕಿನ ನಡುವೆಯೂ ಕೃಷಿ ಕ್ಷೇತ್ರ ಪ್ರಗತಿ ಸಾಧಿಸಿದೆ. ರೈತರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡೇ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ರೈತರಿಗೆ ಮಂಡಿ ಪದ್ಧತಿಯನ್ನು ಲಾಭದಾಯಕವನ್ನಾಗಿ ಮಾಡಲು ಸಾವಿರಕ್ಕೂ ಅಧಿಕಮಂಡಿಗಳನ್ನು ಇ ನಾಮ್ ಗೆ ಲಿಂಕ್ ಮಾಡಲಾಗಿದೆ ಎಂದು ಹೇಳಿದರು.

"ನಮ್ಮ ರೈತರನ್ನು ನಾವು ಬಲಿಷ್ಠಗೊಳಿಸಿದ್ದೇವೆ"

ನಾವು ನಮ್ಮ ದೇಶದ ರೈತರು ಹಾಗೂ ಗ್ರಾಮಗಳನ್ನು ಬಲಪಡಿಸಿದ್ದೇವೆ. ನಮ್ಮ ರೈತರಿಂದ ಯಾರೂ ಭೂಮಿ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದ್ದಾರೆ.
ಜೊತೆಗೆ ನಾಗರಿಕರು ದೇಶದ ಐಕ್ಯತೆಗೆ ಆದ್ಯತೆ ನೀಡುವ ಶಪಥ ಮಾಡಬೇಕು. ಎಲ್ಲದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಏಕತೆಗೆ ಪ್ರಾಧಾನ್ಯ ನೀಡಬೇಕು. ಈ ಭಾವನೆಯೊಂದಿಗೆ ನಾವೆಲ್ಲರೂ ಒಂದಾಗಿ ಮುಂದೆ ಹೋಗಬೇಕು" ಎಂದು ಕರೆ ನೀಡಿದರು.

 ಅಂಚೆ ಚೀಟಿ ಬಿಡುಗಡೆ

ಅಂಚೆ ಚೀಟಿ ಬಿಡುಗಡೆ

"ಚೌರಿ ಚೌರಾ" ಘಟನೆಯ ಶತಮಾನೋತ್ಸವ ಸಮಾರಂಭದ ಸ್ಮರಣಾರ್ಥ ಪ್ರಧಾನಮಂತ್ರಿ ನರೇಂದ್ರ ಮೋದಿ ಅಂಚೆ ಚೀಟಿ ಬಿಡುಗಡೆ ಮಾಡಿದ್ದಾರೆ. ಶತಮಾನೋತ್ಸವ ಸಮಾರಂಭವನ್ನು ಉತ್ತರ ಪ್ರದೇಶದ ಎಲ್ಲಾ 75 ಜಿಲ್ಲೆಗಳಲ್ಲಿ ವರ್ಷಪೂರ್ತಿ ಆಚರಿಸುತ್ತಿದ್ದು, 2021ರ ಫೆಬ್ರವರಿ 4ರಂದು ಪ್ರಾರಂಭವಾಗಿ 2022ರ ಫೆಬ್ರವರಿ 4 ರಂದು ಸಂಪನ್ನಗೊಳ್ಳಲಿದೆ.

English summary
We have strengthened our farmers and villagers. No one can take land of our farmers said narendra modi while inaugurating chauri chaura centenary Celebration,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X