ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿ ಇಫ್ತಾರ್ ಕೂಟಕ್ಕೆ ಪ್ರಣಬ್ ಮುಖರ್ಜಿಗಿಲ್ಲ ಆಮಂತ್ರಣ!

|
Google Oneindia Kannada News

Recommended Video

ಪ್ರಣಬ್ ಹಾಗು ಅರವಿಂದ್ ಕೇಜ್ರಿವಾಲ್ ಗೆ ಇಫ್ತಾರ್ ಕೂಟಕ್ಕೆ ರಾಹುಲ್ ಆಮಂತ್ರಣ ಕಳುಹಿಸಿಲ್ಲ | Oneindia Kannada

ನವದೆಹಲಿ, ಜೂನ್ 11: ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಪ್ರಣಬ್ ಮುಖರ್ಜಿ ಭಾಗವಹಿಸಿದ್ದು ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನ ಸೃಷ್ಟಿಸಿದೆ ಎಂಬುದಕ್ಕೆ ಪುಷ್ಠಿ ನೀಡುವಂಥ ಘಟನೆ ನಡೆದಿದೆ. ಜೂನ್ 13 ರಂದು ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಏರ್ಪಡಿಸಿರುವ ಇಫ್ತಾರ್ ಕೂಟದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಆಮಂತ್ರಿಸಿಲ್ಲ!

ಇಫ್ತಾರ್ ಕೂಟಕ್ಕೆ ಕಾಂಗ್ರೆಸ್ ಮತ್ತು ಸಂಭಾವ್ಯ ಮೈತ್ರಿಕೂಟದ ಎಲ್ಲ ಹೈಪ್ರೊಫೈಲ್ ನಾಯಕರಿಗೂ ಆಮಂತ್ರಣ ನೀಡಲಾಗಿದೆ. ಆದರೆ ಈ ಪಟ್ಟಿಯಲ್ಲಿ ಕಾಂಗ್ರೆಸ್ ಮುಖಂಡ ಪ್ರಣಬ್ ದಾ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಹೆಸರಿಲ್ಲದಿರುವುದು ಅಚ್ಚರಿ ಮೂಡಿಸಿದೆ!

ಬಿಜೆಪಿಗೆ ಬಹುಮತ ಬರದಿದ್ದರೆ ಪ್ರಣಬ್ ಪಿಎಂ? ಆರೆಸ್ಸೆಸ್ ತಂತ್ರಬಿಜೆಪಿಗೆ ಬಹುಮತ ಬರದಿದ್ದರೆ ಪ್ರಣಬ್ ಪಿಎಂ? ಆರೆಸ್ಸೆಸ್ ತಂತ್ರ

No invitation to Pranab and Kejriwal for Iftar Party of Rahul Gandhi

ಪ್ರಣಬ್ ಮುಖರ್ಜಿ ಅವರು ಇತ್ತೀಚೆಗೆ ನಾಗ್ಪುರದಲ್ಲಿ ನಡೆದ ಆರೆಸ್ಸೆಸ್ ಕಾರ್ಯಕ್ರಮವೊದರಲ್ಲಿ ವಿಶೇಷ ಆಮಂತ್ರಿತರಾಗಿ ಭಾಗವಹಿಸಿದ್ದರು. ಮುಖ್ಯ ಅತಿಥಿಯಾಗಿ ಈ ಕಾರ್ಯಕ್ರಮದಲ್ಲಿ ಭಾಷಣ ಸಹ ನೀಡಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಿದ್ಧಾಂತಗಳ ಬದ್ಧ ವೈರಿಯಾಗಿರುವ ಕಾಂಗ್ರೆಸ್, ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಪ್ರಣಬ್ ಮುಖರ್ಜಿ ಈ ಕಾರ್ಯಕ್ರಮಕ್ಕೆ ಹೋಗಬಾರದು ಎಂದು ಕಾಂಗ್ರೆಸ್ ಅಪೇಕ್ಷಿಸಿತ್ತು. ಆದರೆ ಯಾರ ಅಭಿಪ್ರಾಯಕ್ಕೂ ಮಣೆ ಹಾಕದೆ ಮುಖರ್ಜಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿಸದ್ದರು. ಇದರಿಂದ ಇರಿಸುಮುರಿದು ಅನುಭವಿಸಿದ್ದರಿಂದ ರಾಹುಲ್ ಗಾಂಧಿ ಇಫ್ತಾರ್ ಕೂಟಕ್ಕೆ ಮು? ಮುಖರ್ಜಿಗೆ ಆಮಂತ್ರಣವಿಲ್ಲ ಎನ್ನಲಾಗುತ್ತಿದೆ.

No invitation to Pranab and Kejriwal for Iftar Party of Rahul Gandhi


ಆದರೆ ಕೇಜ್ರಿವಾಲ್ ಅವರಿಗೆ ಆಮಂತ್ರಣ ನೀಡದಿರುವುದಕ್ಕೆ ಕಾರಣವೇನು ಎಂಬುದು ಮಾತ್ರ ತಿಳಿದುಬಂದಿಲ್ಲ. ದೆಹಲಿಯ ತಾಜ್ ಪ್ಯಾಲೆಸ್ ಹೊಟೇಲ್ ನಲ್ಲಿ ಜೂನ್ 13 ರಂದು ಇಫ್ತಾರ್ ಕೂಟ ಏರ್ಪಡಿಸಲಾಗಿದೆ.

English summary
According to some sources no invitation has been given to former President Pranab Mukherjeeand Delhi Chief Minister Arvind Kejriwal, for the Iftar party to be hosted by Congress president Rahul Gandhi on June 13th in Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X