ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

35 ವರ್ಷದೊಳಗಿನವರಿಗೆ ಆದಾಯ ತೆರಿಗೆ ಇಲ್ಲ! ಕಾಂಗ್ರೆಸ್ ನ ಹೊಸ ಸ್ಟ್ರಾಟಜಿ?

|
Google Oneindia Kannada News

ನವದೆಹಲಿ, ಜುಲೈ 27: 35 ವರ್ಷ ವಯಸ್ಸಿನೊಳಗಿನವರು ಆದಾಯ ತೆರಿಗೆ ಪಾವತಿಸಬೇಕಿಲ್ಲ ಎಂಬ ಮಹತ್ವದ ಚಿಂತನೆಯ ಕುರಿತು ಕಾಂಗ್ರೆಸ್ ಮುಖಂಡರು ಚರ್ಚೆ ನಡೆಸುತ್ತಿದ್ದಾರೆ.

2019 ರ ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ, ದೇಶದ ಜನರಿಗೆ ಈ ಕೊಡುಗೆಯನ್ನು ನೀಡಲು ಕಾಂಗ್ರೆಸ್ ನಾಯಕರು ಚಿಂತಿಸುತ್ತಿದ್ದಾರೆ ಎಂದು ವೆಬ್ ಸೈಟ್ ವೊಂದು ವರದಿ ಮಾಡಿದೆ.

ಆದಾಯ ತೆರಿಗೆ (ಐಟಿ) ರಿಟರ್ನ್ಸ್ ಕೊನೆ ದಿನಾಂಕ ವಿಸ್ತರಣೆ ಏಕೆ?ಆದಾಯ ತೆರಿಗೆ (ಐಟಿ) ರಿಟರ್ನ್ಸ್ ಕೊನೆ ದಿನಾಂಕ ವಿಸ್ತರಣೆ ಏಕೆ?

ಜುಲೈ 13 ರಂದು ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ಈ ಸಭೆಯ ನೇತೃತ್ವವನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವಹಿಸಿದ್ದರು ಎನ್ನಲಾಗಿದೆ.

No income tax for all under 35: Congress new idea to win 2019 Lok Sabha Elections

ಮಧ್ಯಮ ವರ್ಗದ ಜನರಿಗೆ ಬಹುದೊಡ್ಡ ನಿರಾಳತೆಯನ್ನು ನೀಡುವ ಈಕೊಡುಗೆಯನ್ನು ಜಾರಿಗೆ ತರುತ್ತೇವೆಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿಯೇ ಘೋಷಿಸುತ್ತದೋ, ಇಲ್ಲವೋ ಎಂಬ ಬಗ್ಗೆ ಮಾಹಿತಿ ಲಭ್ಯವಿಲ್ಲ. ಆದರೆ ಈ ಕೊಡುಗೆಯಿಂದಾಗಿ ಯುವ ಮತದಾರರನ್ನು ಸೆಳೆಯಬಹುದು ಎಂಬುದು ಕಾಂಗ್ರೆಸ್ ಲೆಕ್ಕಾಚಾರ.

ಭಾರತದಲ್ಲಿರುವ ಸುಮಾರು 80 ಕೋಟಿಗೂ ಅಧಿಕ ಜನರು 35 ವರ್ಷ ಒಳಗಿನವರು. ಇವರೆಲ್ಲರೂ ಆದಾಯ ತೆರಿಗೆ ಕಟ್ಟುವುದು ಬೇಡ ಎಂದುಬಿಟ್ಟರೆ ರಾಷ್ಟ್ರದ ಬೊಕ್ಕಸ ತುಂಬುವುದು ಹೇಗೆ ಎಂಬುದು ಈಗಿರುವ ಪ್ರಶ್ನೆ.

2019 ರ ಏ ಪ್ರಿಲ್ ಮೇ ತಿಂಗಳಿನಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಸರ್ಕಾರವನ್ನು ಸೋಲಿಸಲು ಕಾಂಗ್ರೆಸ್ ಬಳಿ ಇರುವ ಪ್ರಬಲ ಅಸ್ತ್ರ ಇದೇ ಎನ್ನಲಾಗುತ್ತಿದೆ.

ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ, 'ಈ ವದಂತಿ ಎಲ್ಲ ಸುಳ್ಳು. ಕಾಂಗ್ರೆಸ್ ಈ ಕುರಿತು ಚರ್ಚೆ ನಡೆಸಿಯೇ ಇಲ್ಲ' ಎಂದಿದ್ದಾರೆ.

English summary
Rumours said Congress leaders discussed an idea of Income tax relief to all under 35 years old. But Congress spokeperson Randeep Surjewala denies this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X