ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ವಿರುದ್ಧ ಭಾರತವನ್ನು ಟ್ರಂಪ್ ಬೆಂಬಲಿಸುವ ಗ್ಯಾರೆಂಟಿಯೇ ಇಲ್ಲ

|
Google Oneindia Kannada News

ದೆಹಲಿ, ಜುಲೈ 11: ಭಾರತ ಮತ್ತು ಚೀನಾ ನಡುವೆ ಪರಿಸ್ಥಿತಿ ಉಲ್ಬಣಗೊಂಡರೆ ಭಾರತದ ಬೆಂಬಲಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಲ್ಲಲಿದ್ದಾರೆ ಎಂಬ ಗ್ಯಾರೆಂಟಿಯೇ ಇಲ್ಲ ಎಂದು ಯುಎಸ್‌ನ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಹೇಳಿದ್ದಾರೆ.

Recommended Video

Drone Prathap ಇಷ್ಟು ದಿನ ಹೇಳಿದ್ದೆಲ್ಲಾ ಸುಳ್ಳಾ ? | Oneindia Kannada

ಚೀನಾ ತನ್ನ ಪರಿಧಿಯ ಸುತ್ತಲೂ ಯುದ್ಧಮಾಡುವ ರೀತಿಯಲ್ಲಿ ವರ್ತಿಸುತ್ತಿದೆ. ದಕ್ಷಿಣ ಹಾಗೂ ಪೂರ್ವ ಚೀನಾ ಸಮುದ್ರದ ಗಡಿಯಲ್ಲಿ, ಜಪಾನ್, ಭಾರತ ಮತ್ತು ಇತರರೊಂದಿಗಿನ ಸಂಬಂಧಗಳು ಕ್ಷೀಣಿಸಿವೆ ಎಂದು ಬೋಲ್ಟನ್ ಸಂದರ್ಶನದಲ್ಲಿ ಹೇಳಿದ್ದಾರೆ.

ಭಾರತ-ಚೀನಾ ಪಾಲುದಾರರಾಗಬೇಕೇ ಹೊರತು ಪ್ರತಿಸ್ಪರ್ಧಿಗಳಲ್ಲ: ಚೀನಾಭಾರತ-ಚೀನಾ ಪಾಲುದಾರರಾಗಬೇಕೇ ಹೊರತು ಪ್ರತಿಸ್ಪರ್ಧಿಗಳಲ್ಲ: ಚೀನಾ

ನವೆಂಬರ್ ಚುನಾವಣೆಯ ಬಳಿಕ ಟ್ರಂಪ್ ಏನು ಮಾಡಬಹುದು ಎಂದು ತಿಳಿದಿಲ್ಲ. ಬಹುಶಃ ಚೀನಾ ಜೊತೆಗಿನ ದೊಡ್ಡ ಒಪ್ಪಂದಕ್ಕೆ ಕೈ ಜೋಡಿಸಬಹುದು. ಚೀನಾ ಮತ್ತು ಭಾರತದ ನಿರ್ಣಯಕ ವಿಚಾರಗಳಲ್ಲಿ ಟ್ರಂಪ್ ಎಲ್ಲಿಯವರೆಗೂ ಬರುತ್ತಾರೆ ಎನ್ನುವುದು ಸಹ ಖಾತ್ರಿಯಿಲ್ಲ ಎಂದು ಬೋಲ್ಟನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

No Guarantee Trump Will Back India Against China If Tensions Escalate

''ಗಡಿ ಘರ್ಷಣೆಯ ಮಹತ್ವವನ್ನು ಟ್ರಂಪ್ ಎಷ್ಟು ಅರ್ಥ ಮಾಡಿಕೊಂಡಿದ್ದಾರೋ ನನಗೆ ತಿಳಿದಿಲ್ಲ. ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದದ ಇತಿಹಾಸದ ಕುರಿತು ಆತನಿಗೆ ಏನು ತಿಳಿದಿಲ್ಲ ಎಂದು ನಾನು ಭಾವಿಸುವುದಿಲ್ಲ. ಟ್ರಂಪ್‌ಗೆ ಈ ಬಗ್ಗೆ ವಿವರಿಸಲಾಗಿದೆ. ಆದರೆ, ಇತಿಹಾಸವೂ ಆತನ ಜೊತೆ ಅಂಟಿಕೊಳ್ಳುವುದಿಲ್ಲ'' ಎಂದು ಕಾಲೆಳೆದಿದ್ದಾರೆ.

ಚೀನಾದಿಂದ ಅಮೆರಿಕಾಕ್ಕೆ ಕಾದಿದೆ ಬಹುದೊಡ್ಡ ಗಂಡಾಂತರ: ಎಫ್‌ಬಿಐಚೀನಾದಿಂದ ಅಮೆರಿಕಾಕ್ಕೆ ಕಾದಿದೆ ಬಹುದೊಡ್ಡ ಗಂಡಾಂತರ: ಎಫ್‌ಬಿಐ

''ಚೀನಾದೊಂದಿಗಿನ ಭೂ-ಕಾರ್ಯತಂತ್ರದ ಸಂಬಂಧವನ್ನು ಟ್ರಂಪ್ ಕೇವಲ ವ್ಯಾಪಾರದ ದೃಷ್ಟಿಯಿಂದ ನೋಡುತ್ತಾನೆ. ಏಕಂದರೆ ಚೀನಾ ಮತ್ತು ಅಮೆರಿಕ ದಶಕಗಳಿಂದಲೂ ಬಲವಾದ ತಂತ್ರಜ್ಞಾನ ವರ್ಗಾವಣೆಯಲ್ಲಿ ತೊಡಗಿಕೊಂಡಿದೆ. ಇದು ಅವರ ಆರ್ಥಿಕ ಯಶಸ್ಸಿನ ಒಂದು ಭಾಗವೂ ಆಗಿದೆ. ಆದ್ದರಿಂದ ಮಿಲಿಟರಿ ಶಕ್ತಿ ಇದರಿಂದ ದೂರುವೇ ಉಳಿಯುತ್ತದೆ'' ಎಂದು ಬೋಲ್ಟನ್ ಹೇಳಿದ್ದಾರೆ.

ಪ್ರಸ್ತುತ, ಚೀನಾ ಮತ್ತು ಭಾರತದ ನಡುವೆ ಉಲ್ಬಣವಾಗಿದ್ದ ಪರಿಸ್ಥಿತಿ ನಿಧಾನವಾಗಿ ಶಾಂತವಾಗುತ್ತಿದೆ. ಉಭಯ ದೇಶಗಳ ಸೇನೆಯೂ ವಿವಾದಿತ ಪ್ರದೇಶದಿಂದ ಹಿಂದಕ್ಕೆ ಸರಿದಿದೆ.

English summary
Former United States national security advisor John Bolton sadi 'No guarantee Trump will back India against China if tensions escalate'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X