ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ಸಿಗೆ ಭಾರೀ ಆಘಾತ ನೀಡಿದ ಮಾಯಾವತಿ-ಅಖಿಲೇಶ್ ನಡೆ

|
Google Oneindia Kannada News

ನವದೆಹಲಿ, ಜನವರಿ 05: ಲೋಕಸಭಾ ಚುನಾವಣೆಗೂ ಮುನ್ನ ಸೃಷ್ಟಿಯಾಗಲಿರುವ ಸಂಭಾವ್ಯ ಮಹಾಘಟಬಂಧನ ಅಥವಾ ಮಹಾಮೈತ್ರಿಕೂಟಕ್ಕೆ ಆರಂಭಿಕ ವಿಘ್ನ ತಲೆದೂರಿದಂತಾಗಿದೆ.

ಕಾಂಗ್ರೆಸ್-ಬಿಜೆಪಿ ಇಲ್ಲದ ಸಂಯುಕ್ತ ಕೂಟ: ಅಖಿಲೇಶ್ ಏನಂತಾರೆ?ಕಾಂಗ್ರೆಸ್-ಬಿಜೆಪಿ ಇಲ್ಲದ ಸಂಯುಕ್ತ ಕೂಟ: ಅಖಿಲೇಶ್ ಏನಂತಾರೆ?

ಮಹಾಮೈತ್ರಿಕೂಟದಲ್ಲಿ ಕಾಂಗ್ರೆಸ್ ಇರುವುದಾದರೆ ನಮ್ಮ ಬೆಂಬಲವಿಲ್ಲ. ನಾವು ಕಾಂಗ್ರೆಸ್ ಅನ್ನು ಹೊರಗಿಟ್ಟು ಮಹಾಘಟಬಂಧನ ನಿರ್ಮಿಸುತ್ತೇವೆ ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಮತ್ತು ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಒಮ್ಮತದ ನಿರ್ಧಾರಕ್ಕೆ ಬಂದಿದ್ದಾರೆ.

ಬೆಂಬಲ ವಾಪಸ್ ಎಂದ ಮಾಯಾವತಿಗೆ ಕಾಂಗ್ರೆಸ್ ಉತ್ತರವೇನು?ಬೆಂಬಲ ವಾಪಸ್ ಎಂದ ಮಾಯಾವತಿಗೆ ಕಾಂಗ್ರೆಸ್ ಉತ್ತರವೇನು?

No Congress in Grand alliance, said Mayawati and Akhilesh

ನವದೆಹಲಿಯಲ್ಲಿ ಶುಕ್ರವಾರ ಮಾಯಾವತಿ ಅವರನ್ನು ಅಖಿಲೇಶ್ ಯಾದವ್ ಭೇಟಿಯಾದರು. ಕಾಂಗ್ರೆಸ್ ನಿಂದ ಉಭಯ ನಾಯಕರೂ ಬೇಸರಗೊಂಡಿದ್ದು, ಅದನ್ನು ದೂರವಿಟ್ಟು ಸಣ್ಣ ಪುಟ್ಟ ಪ್ರಾದೇಶಿಕ ಪಕ್ಷಗಳನ್ನು ಸೇರಿಸಿ ಮೈತ್ರಿಕೂಟ ನಿರ್ಮಿಸಲು ಮುಂದಾಗಿವೆ.

ವಿರೋಧಿಗಳ ದೋಸ್ತಿ!

ವಿರೋಧಿಗಳ ದೋಸ್ತಿ!

ಒಂದು ಕಾಲದಲ್ಲಿ ವಿರೋಧಿಗಳಾಗಿದ್ದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಮತ್ತು ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಅವರಿಬ್ಬರೂ ಈಗ ಕುಚುಕು ಸ್ನೇಹಿತರಾಗಿದ್ದಾರೆ. ಸ್ವತಂತ್ರವಾಗಿ ಚುನಾವಣೆ ಎದುರಿಸುವುದು ಕಷ್ಟ ಎಂಬುದನ್ನು ಅರಿತ ಎರಡೂ ಪಕ್ಷಗಳೂ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಮಣಿಸಲು ಒಂದಾಗಿಯೇ ಲೋಕಸಭಾ ಚುನಾವಣೆ ಎದುರಿಸಲಿವೆ.

ಎಬಿಪಿ ಸಮೀಕ್ಷೆ: ಉ.ಪ್ರ.ದಲ್ಲಿ ಎನ್ ಡಿಎ ತಡೆಯಲು ಮಹಾಘಟಬಂಧನ್ ಆಗಬೇಕು ಎಬಿಪಿ ಸಮೀಕ್ಷೆ: ಉ.ಪ್ರ.ದಲ್ಲಿ ಎನ್ ಡಿಎ ತಡೆಯಲು ಮಹಾಘಟಬಂಧನ್ ಆಗಬೇಕು

ಜ.15 ರ ನಂತರ ಸೀಟು ಹಂಚಿಕೆ

ಜ.15 ರ ನಂತರ ಸೀಟು ಹಂಚಿಕೆ

ಜನವರಿ 15 ರ ನಂತರ ಎರಡೂ ಪಕ್ಷಗಳೂ ಸೀಟು ಹಂಚಿಕೆಯ ಬಗ್ಗೆ ಚರ್ಚೆ ನಡೆಸಲಿವೆ. ಚುನಾವಣಾ ಪೂರ್ವ ಮೈತ್ರಿಯಾದ್ದರಿಂದ ಎಸ್ಪಿ ಮತ್ತು ಬಿಎಸ್ಪಿ ಒಂದಾದರೆ 60 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಂಥ ರಾಜ್ಯಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷಗಳಿಗೆ ನಷ್ಟವಾಗುವ ಸಾಧ್ಯತೆ ಇದೆ.

ಎಬಿಪಿ ನ್ಯೂಸ್ ಸಮೀಕ್ಷೆ : ಉಪ್ರದಲ್ಲಿ ಮಹಾಘಟಬಂಧನ್ ಆದರೆ ಎನ್ಡಿಎಗೆ ಸಂಕಷ್ಟ ಎಬಿಪಿ ನ್ಯೂಸ್ ಸಮೀಕ್ಷೆ : ಉಪ್ರದಲ್ಲಿ ಮಹಾಘಟಬಂಧನ್ ಆದರೆ ಎನ್ಡಿಎಗೆ ಸಂಕಷ್ಟ

ಕಾಂಗ್ರೆಸ್ ಗೆ ವಾರ್ನಿಂಗ್ ನೀಡಿದ್ದ ಮಾಯಾ!

ಕಾಂಗ್ರೆಸ್ ಗೆ ವಾರ್ನಿಂಗ್ ನೀಡಿದ್ದ ಮಾಯಾ!

ಪರಿಶಿಷ್ಟ ಜಾತಿಯ ಜನರ ಮೇಲೆ ದಾಖಲಾದ ದೂರುಗಳನ್ನು ಕಾಂಗ್ರೆಸ್ ವಾಪಸ್ ಪಡೆಯದಿದ್ದರೆ ನಾವು ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲೂ ಕಾಂಗ್ರೆಸ್ಸಿಗೆ ನೀಡುವ ಬೆಂಬಲ ವಾಪಸ್ ಪಡೆಯುತ್ತೇವೆ ಎಂದು ಈಗಾಗಲೇ ಮಾಯಾವತಿ ಕಾಂಗ್ರೆಸ್ಸಿಗೆ ಖಡಕ್ ವಾರ್ನಿಂಗ್ ನೀಡಿದ್ದರು. ಆದರೆ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ ಬಿಎಸ್ಪಿ ಮತ್ತು ಎಸ್ಪಿಯೊಂದಿಗೆ ನಿಷ್ಠುರ ಕಟ್ಟಿಕೊಳ್ಳಲು ಕಾಂಗ್ರೆಸ್ ಸಿದ್ಧವಿಲ್ಲ!

ಉತ್ತರ ಪ್ರದೇಶದ ಮಹಾಮೈತ್ರಿಕೂಟದಲ್ಲಿ ಕಾಂಗ್ರೆಸ್‌ಗೆ ಕಿಮ್ಮತ್ತಿಲ್ಲ?! ಉತ್ತರ ಪ್ರದೇಶದ ಮಹಾಮೈತ್ರಿಕೂಟದಲ್ಲಿ ಕಾಂಗ್ರೆಸ್‌ಗೆ ಕಿಮ್ಮತ್ತಿಲ್ಲ?!

ಕಾಂಗ್ರೆಸ್ ಮೇಲೆ ಅಖಿಲೇಶ್ ಮುನಿಸು

ಕಾಂಗ್ರೆಸ್ ಮೇಲೆ ಅಖಿಲೇಶ್ ಮುನಿಸು

ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ಸರ್ಕಾರ ಅಧಿಕಾರಕ್ಕೆ ಬೇಕಿದ್ದ ಬಹುಮತ ಸಿಗುವಲ್ಲಿ ಅಖಿಲಾಶ್ ಪಾತ್ರ ಅಪಾರ. ತಮ್ಮ ಪಕ್ಷದ ಏಕೈಕ ಶಾಸಕ ಕಾಂಗ್ರೆಸ್ಸಿಗೆ ಬೆಂಬಲ ನೀಡುವ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತೆ ಅಖಿಲೇಶ್ ಮಾಡಿದ್ದರು. ಆ ಸಂದರ್ಭದಲ್ಲಿ ತಮ್ಮ ಪಕ್ಷದ ಶಾಸಕನಿಗೆ ಮಂತ್ರಿಸ್ಥಾನ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದರು. ಆದರೆ ಆ ಮಾತನ್ನು ಕಾಂಗ್ರೆಸ್ ಉಳಿಸಿಕೊಳ್ಳದಿರುವುದು ಅಖಿಲೇಶ್ ಯಾದವ್ ಗೆ ಕೋಪ ತರಿಸಿದೆ.

English summary
BSP leader Mayawati and SP leader Akhilesh Yadav met in Delhi and upset with Congress, both decided to keep Congress out from their grand alliance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X