ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ದೆಹಲಿ ಕೊರೊನಾ' ಅಪ್ಲಿಕೇಷನ್‌ನಲ್ಲಿ ಮಾತ್ರ ಹಾಸಿಗೆ ಲಭ್ಯ, ಆಸ್ಪತ್ರೆಯಲ್ಲಿಲ್ಲ

|
Google Oneindia Kannada News

ನವದೆಹಲಿ, ಜೂನ್ 7: ದೆಹಲಿಯಲ್ಲಿ ಸರಿ ಸುಮಾರು 9 ಸಾವಿರ ಕೊರೊನಾ ಸೋಂಕಿತರಿಗಾಗುವಷ್ಟು ಹಾಸಿಗೆಗಳು ಖಾಲಿ ಇವೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದರು. ಈಗಾಗಲೇ 7 ಸಾವಿರಕ್ಕೂ ಹೆಚ್ಚು ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ದೆಹಲಿ ಕೊರೊನಾ ಮೊಬೈಲ್ ಅಪ್ಲಿಕೇಷನ್‌ ಅಲ್ಲಿ ಮಾತ್ರ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಖಾಲಿ ಇವೆ ಎಂದು ತೋರಿಸುತ್ತಿದ್ದರೂ , ಖ್ಯಾತ ಆಸ್ಪತ್ರೆಗಳು ಮಾತ್ರ ಖಾಲಿ ಇಲ್ಲ ಎಂದು ಹೇಳುತ್ತಿವೆ.

ಆಸ್ಪತ್ರೆಗಳಲ್ಲಿ ಅಕ್ರಮ: 'ನಿಮ್ಮನ್ನು ಸುಮ್ಮನೆ ಬಿಡಲ್ಲ' ಎಂದ ದೆಹಲಿ ಸಿಎಂಆಸ್ಪತ್ರೆಗಳಲ್ಲಿ ಅಕ್ರಮ: 'ನಿಮ್ಮನ್ನು ಸುಮ್ಮನೆ ಬಿಡಲ್ಲ' ಎಂದ ದೆಹಲಿ ಸಿಎಂ

ಮಾಕ್ಸ್, ಫೋರ್ಟಿಸ್, ಹೋಲಿ ಫ್ಯಾಮಲಿ ಆಸ್ಪತ್ರೆಗಳು ತಮ್ಮಲ್ಲಿ ಹಾಸಿಗೆಗಳು ಖಾಲಿ ಇಲ್ಲ ಎನ್ನುತ್ತಿವೆ.ದೆಹಲಿ ಕೊರೊನಾ ಅಪ್ಲಿಕೇಷನ್ ಹೇಳುವ ಪ್ರಕಾರ ಫೋರ್ಟಿಸ್ ಆಸ್ಪತ್ರೆಯಲ್ಲಿ 32 ಬೆಡ್‌ಗಳು ಖಾಲಿ ಇವೆ.

No Beds Say Top Hospitals But Delhi COVID App Shows Many Vacant

ನಮ್ಮಲ್ಲಿ ಹಾಸಿಗೆಗಳು ಖಾಲಿ ಇಲ್ಲ ಆದರೆ ರೋಗಿಗಳು ಎಷ್ಟಿದ್ದಾರೆ ಎನ್ನುವ ಮಾಹಿತಿ ನೀಡಿದರೆ ನಮ್ಮಿಂದಾದ ಸಹಾಯ ಮಾಡುತ್ತೇವೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ಹೇಳಿದೆ.

ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ 69 ಹಾಸಿಗೆಗಳು ಖಾಲಿ ಇವೆ ಎಂದು ಅಪ್ಲಿಕೇಷನ್‌ನಲ್ಲಿ ತೋರಿಸುತ್ತಿದ್ದು, ಆಸ್ಪತ್ರೆಯಲ್ಲಿ ಮಾತ್ರ ಯಾವುದೇ ಬೆಡ್ ಖಾಲಿ ಇಲ್ಲ, ಅಪ್ಲಿಕೇಷನ್‌ನಲ್ಲಿ ಏನೋ ತೊಂದರೆ ಇದೆ ಎಂದು ಎಂದು ವೈದ್ಯರು ಹೇಳುತ್ತಿದ್ದಾರೆ.

ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 270 ಹಾಸಿಗೆಗಳು ಲಭ್ಯವಿದ್ದು, ಅಪ್ಲಿಕೇಷನ್‌ನಲ್ಲಿ 302 ಹಾಸಿಗೆಗಳಿವೆ ಎಂದು ತೋರಿಸುತ್ತಿದೆ ಇದು ರೋಗಿಗಳನ್ನು ಗೊಂದಲಕ್ಕೀಡು ಮಾಡುತ್ತಿದೆ.

English summary
Max Hospitals, Fortis Hospitals and Holy Family Hospital said they do not have any beds available despite a smartphone app developed by the Delhi government listing dozens of vacancies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X