ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಜಾಮುದ್ದೀನ್ ಮರ್ಕಜ್: 376 ವಿದೇಶಿಯರ ಮೇಲೆ ಚಾರ್ಜ್‌ಶೀಟ್ ದಾಖಲು

|
Google Oneindia Kannada News

ನವದೆಹಲಿ, ಮೇ 28: ದೇಶದಲ್ಲಿ ಕೊರೊನಾ ಸೋಂಕು ಹರಡಲು ಪ್ರಮುಖ ಕಾರಣರಾಗಿರುವ ದೆಹಲಿಯ ನಿಜಾಮುದ್ದೀನ್ ಮರ್ಕಜ್‌ನಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡಿದ್ದ 376 ವಿದೇಶಿಯರ ಮೇಲೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ.

ಸಮಾವೇಶದಲ್ಲಿ ಪಾಲ್ಗೊಂಡಿದ್ದ 34 ರಾಷ್ಟ್ರಗಳ 376 ವಿದೇಶಿ ಪ್ರಜೆಗಳ ಮೇಲೆ 35 ವಿವಿಧ ಚಾರ್ಜ್ ಶೀಟ್ ಗಳನ್ನು ದೆಹಲಿ ಪೊಲೀಸರು ನ್ಯಾಯಾಲಯವೊಂದರಲ್ಲಿ ದಾಖಲಿಸಿದ್ದಾರೆ.

ವೀಸಾ ನಿಯಮ ಉಲ್ಲಂಘನೆ, ಕೊವಿಡ್-19 ನಿಟ್ಟಿನಲ್ಲಿ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳ ಉಲ್ಲಂಘನೆ ಮತ್ತು ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ, ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಸೆಕ್ಷನ್ 144ರ ಅಡಿಯಲ್ಲಿನ ನಿಷೇಧ ಆದೇಶ ಉಲ್ಲಂಘನೆ ಹಿನ್ನೆಲೆಯಲ್ಲಿ ಎಲ್ಲಾ ವಿದೇಶಿ ಪ್ರಜೆಗಳ ಮೇಲೆ ಚಾರ್ಚ್ ಶೀಟ್ ದಾಖಲಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Tablighi

ಮಂಗಳವಾರ 20 ರಾಷ್ಟ್ರಗಳ 82 ವಿದೇಶಿ ಪ್ರಜೆಗಳ ಮೇಲೆ 20 ಚಾರ್ಜ್ ಶೀಟ್ ದಾಖಲಿಸಿದ್ದ ಪೊಲೀಸರು ಬುಧವಾರ 14 ರಾಷ್ಟ್ರಗಳ 294 ವಿದೇಶಿಗರ ಮೇಲೆ 15 ಜಾರ್ಜ್ ಶೀಟ್ ದಾಖಲಿಸಿದ್ದಾರೆ.

ನಿಜಾಮುದ್ದೀನ್ ಮರ್ಕಜ್ ನಲ್ಲಿ ನಡೆದ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದ ನೂರಾರು ತಬ್ಲಿಘಿ ಜಮಾತ್ ಸದಸ್ಯರಲ್ಲಿ ಕೊವಿಡ್ -19 ಸೋಂಕು ದೃಢಪಟ್ಟ ನಂತರ ದೇಶದ ಇತರ ಕಡೆಗಳಲ್ಲಿಯೂ ವ್ಯಾಪಕವಾಗಿ ಹರಡಿದೆ.

ದೆಹಲಿ ತಬ್ಲಿಘಿ ಸಮಾವೇಶದಿಂದ ಕೊರೊನಾ ಸೋಂಕು ಹರಡಿತ್ತಾ?: ಸತ್ಯ ಬಿಚ್ಚಿಟ್ಟ ಸಿದ್ದರಾಮಯ್ಯದೆಹಲಿ ತಬ್ಲಿಘಿ ಸಮಾವೇಶದಿಂದ ಕೊರೊನಾ ಸೋಂಕು ಹರಡಿತ್ತಾ?: ಸತ್ಯ ಬಿಚ್ಚಿಟ್ಟ ಸಿದ್ದರಾಮಯ್ಯ

ಐಪಿಸಿ ಸೆಕ್ಷನ್ 188 (ಸಾರ್ವಜನಿಕ ಸೇವಕರಿಂದ ಘೋಷಿಸಲ್ಪಟ್ಟ ಆದೇಶಕ್ಕೆ ಅಸಹಕಾರ) 269( ಜೀವಕ್ಕೆ ಅಪಾಯಕಾರಿಯಾದ ಸೋಂಕನ್ನು ಹರಡುವ ಸಾಧ್ಯತೆಯಲ್ಲಿ ನಿರ್ಲಕ್ಷ್ಯದ ವರ್ತನೆ) 270 (ದುರುದ್ದೇಶಪೂರಿತ ವರ್ತನೆ) ಮತ್ತಿತರ ಸೆಕ್ಷನ್ ಗಳಡಿಯಲ್ಲಿಯೂ ದೂರು ದಾಖಲಿಸಲಾಗಿದೆ.

294 ಪ್ರಜೆಗಳು ಮಲೇಷ್ಯಾ, ಥೈಲ್ಯಾಂಡ್, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ ಮತ್ತು ಆಫ್ರಿಕನ್ ರಾಷ್ಟ್ರಗಳಿಗೆ ಸೇರಿದವರಾಗಿದ್ದಾರೆ. ಮಂಗಳವಾರ ಚಾರ್ಜ್ ಶೀಟ್ ದಾಖಲಿಸಿರುವ 82 ವಿದೇಶಿಗರ ಪೈಕಿಯಲ್ಲಿ ನಾಲ್ವರು ಆರೋಪಿಗಳು ಅಪ್ಘಾನಿಸ್ತಾನ, ತಲಾ ಏಳು ಮಂದಿ ಬ್ರಜಿಲ್ ಮತ್ತು ಚೀನಾದವರು.

ಐವರು ಅಮೆರಿಕಾ, ಇಬ್ಬರು ಆಸ್ಟ್ರೇಲಿಯಾ, ಕಜಾಕಿಸ್ತಾನ, ಮೊರಕ್ಕೊ, ಇಂಗ್ಲೆಂಡ್ ದೇಶದವರಾಗಿದ್ದಾರೆ. ಉಕ್ರೇನ್, ಈಜಿಪ್ಟ್, ರಷ್ಯಾ, ಜೋರ್ಡನ್, ಟ್ಯೂನಿಷಿಯಾ, ಬೆಲ್ಜಿಯಂ ನಿಂದ ತಲಾ ಒಬ್ಬೊಬ್ಬರು ಬಂದಿದ್ದು, 10 ಸೌದಿ ಅರಬೀಯಾ, 14 ಫಿಜಿ ಮತ್ತು ಆರು ಮಂದಿ ಸುಡಾನ್ ಮತ್ತು ಫಿಲಿಫೈನ್ಸ್ ನವರಾಗಿದ್ದಾರೆ.

English summary
The Delhi Police has filed total 35 charge sheets against 376 foreign nationals from 34 countries for attending a religious congregation at Nizamuddin Markaz here in violation of visa conditions and indulging in missionary activities amid the COVID-19 outbreak in the country, officials said on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X