ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಪಿನಾಥ್ ಮುಂಡೆ ಸಚಿವಗಿರಿ ಯಾರ ಹೆಗಲಿಗೆ?

By Srinath
|
Google Oneindia Kannada News

ನವದೆಹಲಿ, ಜೂನ್ 5: ಮೂರು ದಿನಗಳ ಹಿಂದೆ ಕಾರು ಅಪಘಾತದಲ್ಲಿ ಅಕಾಲಿಕ ಸಾವು ಕಂಡ ಗೋಪಿನಾಥ್ ಮುಂಡೆ ಅವರ ಸಚಿವ ಖಾತೆ ಯಾರ ಹೆಗಲಿಗೆ ಎಂಬುದಕ್ಕೆ ಆಡಳಿತಾರೂಢ ಬಿಜೆಪಿ ತಕ್ಷಣಕ್ಕೆ ಉತ್ತರ ಕಂಡುಕೊಂಡಿದೆ.

ಗೋಪಿನಾಥ್ ಮುಂಡೆ ಅವರು ಕಳೆದ ವಾರ ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕುಡಿಯುವ ನೀರು ಹಾಗೂ ನಿರ್ಮಿಲೀಕರಣ ಖಾತೆಯ ಸಚಿವರಾಗಿ ನೇಮಕಗೊಂಡಿದ್ದರು. ಇದೀಗ ಆ ಖಾತೆಗಳನ್ನು ನಿತಿನ್ ಗಡ್ಕರಿ ಅವರು ಹೆಚ್ಚುವರಿಯಾಗಿ ನಿಭಾಯಿಸಲಿದ್ದಾರೆ. (ಮೋದಿ ಸಂಪುಟ: ಹೊಸ ರೂಪದಲ್ಲಿ ಸಚಿವರ ಪಟ್ಟಿ)

nitin-gadkari-given-additional-charge-of-gopinath-munde-portfolios
57 ವರ್ಷದ ನಿತಿನ್ ಗಡ್ಕರಿ ಅವರು ಪ್ರಸ್ತುತ ರಸ್ತೆ ಸಾರಿಗೆ, ಹೆದ್ದಾರಿ ಮತ್ತು ಹಡಗು ಉದ್ಯಮ ಖಾತೆಯನ್ನು ನಿಭಾಯಿಸುತ್ತಿದ್ದಾರೆ. ಮುಂದಿನ ಸಂಪುಟ ವಿಸ್ತರಣೆ ವರೆಗೂ ಗಡ್ಕರಿ ಈ ಜವಾಬ್ದಾರಿ ನಿಭಾಯಿಸಲಿದ್ದಾರೆ. ಜುಲೈನಲ್ಲಿ ಬಜೆಟ್ ಅಧಿವೇಶನ ಪ್ರಾರಂಭವಾಗುವುದಕ್ಕೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟವನ್ನು ವಿಸ್ತರಿಸುವ ಅಂದಾಜಿದೆ.

ಅಂದಹಾಗೆ ಗೋಪಿನಾಥ್ ಮುಂಡೆ ಮತ್ತು ನಿತಿನ್ ಗಡ್ಕರಿ ಅವರಿಬ್ಬರೂ ಮಹಾರಾಷ್ಟ್ರದವರು. ಗೋಪಿನಾಥ್ ಮುಂಡೆ ಅವರು ಬೀಡ್ ಕ್ಷೇತ್ರದಿಂದ ಆರಿಸಿಬಂದಿದ್ದರು. ಗಡ್ಕರಿ ಅವರು ನಾಗ್ಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

ಗಮನಾರ್ಹವೆಂದರೆ ಮಹಾರಾಷ್ಟ್ರದಲ್ಲಿ ಸದ್ಯದಲ್ಲೇ ವಿಧಾನಸಭೆಗೆ ಚುನಾವಣೆಗಳು ನಡೆಯಬೇಕಿವೆ. ಒಂದೊಮ್ಮೆ ಚುನಾವಣೆಯಲ್ಲಿ ಬಿಜೆಪಿ ಆರಿಸಿಬಂದರೆ ಗೋಪಿನಾಥ್ ಮುಂಡೆ ಅವರು ಮುಖ್ಯಮಂತ್ರಿಯಾಗುತ್ತಾರೆ ಎನ್ನಲಾಗಿತ್ತು. ಇದೀಗ ಬದಲಾದ ಪರಿಸ್ಥಿತಿಯಲ್ಲಿ ನಿತಿನ್ ಗಡ್ಕರಿ ಅವರು ಮುಖ್ಯಮಂತ್ರಿಯಾಗುವ ಲಕ್ಷಣಗಳಿವೆ. ಆರೆಸ್ಸೆಸ್ ಕೇಂದ್ರ ಕಚೇರಿಗೆ ಹತ್ತಿರವಾಗಿರುವ, ಜನ್ಮತಹ ನಾಗ್ಪುರದವರಾದ ನಿತಿನ್ ಗಡ್ಕರಿ ಅವರು ಪ್ರಸ್ತುತ ಅದೇ ಕ್ಷೇತ್ರವನ್ನು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ.

English summary
Nitin Gadkari Given additional Charge of Gopinath Munde's Portfolios. Union Road Transport, Highways and Shipping minister Nitin Gadkari has been given additional charge of the ministries of Rural Development and Panchayati Raj, Drinking Water and Sanitation - the portfolios held by Gopinath Munde after his sudden demise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X