ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಡ್ಕರಿ ಹೇಳಿಕೆಗೂ,ಮೋದಿಗೂ ಸಂಬಂಧ ಕಲ್ಪಿಸಿದ ಕಾಂಗ್ರೆಸ್ಸಿಗೆ ಛೀಮಾರಿ!

|
Google Oneindia Kannada News

ನವದೆಹಲಿ, ಫೆಬ್ರವರಿ 12: ತಮ್ಮ ಹೇಳಿಕೆಯು ಮೋದಿಯವರನ್ನು ಗುರಿಯಾಗಿಸಿದೆ ಎಂದು ದೂರಿದ ಕಾಂಗ್ರೆಸ್ಸಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಛೀಮಾರಿ ಹಾಕಿದ್ದಾರೆ.

ಈ ರೀತಿ ಸಂಕುಚಿತ ಮತ್ತು ದ್ವೇಷದ ರಾಜಕಾರಣ ಮಾಡುವುದು ಈ ದೇಶದ ಅತ್ಯಂತ ಹಳೆಯ ಪಕ್ಷಕ್ಕೆ ತರವಲ್ಲ ಎಂದು ಅವರು ಕಿಡಿಕಾರಿದ್ದಾರೆ.

ಗಡ್ಕರಿ ಬಾಣ ಮೋದಿಯೆಡೆಗೆ... ಕಾಂಗ್ರೆಸ್ ಗೆ ಖುಷಿಯೋ ಖುಷಿ! ಗಡ್ಕರಿ ಬಾಣ ಮೋದಿಯೆಡೆಗೆ... ಕಾಂಗ್ರೆಸ್ ಗೆ ಖುಷಿಯೋ ಖುಷಿ!

ಭಾನುವಾರ ಪುಣೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಗಡ್ಕರಿ, 'ನನಗೆ ಜಾತೀಯತೆಯ ಬಗ್ಗೆ ನಂಬಿಕೆ ಇಲ್ಲ. ನನಗೆ ನಿಮ್ಮ ಬಗ್ಗೆ ಗೊತ್ತಿಲ್ಲ, ಆದರೆ ನನ್ನ ಐದು ಜಿಲ್ಲೆಗಳಲ್ಲಿ ನಾನು ಎಲ್ಲರಿಗೂ ಎಚ್ಚರಿಕೆ ನೀಡಿದ್ದೇನೆ, ಯಾರಾದರೂ ಜಾತಿಯ ಬಗ್ಗೆ ಮಾತನಾಡಿದರೆ ನಾನು ಅವರನ್ನು ಸುಮ್ಮನೆ ಬಿಡುವುದಿಲ್ಲ' ಎಂದಿದ್ದರು.

ಈ ಮಾತನ್ನು ನಿತಿನ್ ಗಡ್ಕರಿ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತೇ ಆಡಿದ್ದಾರೆ. ಗಡ್ಕರಿ ಅವರು ಜಾತಿ-ಮತದ ಆಧಾರದ ಮೇಲೆ ರಾಜಕೀಯ ಮಾಡುವುದರ ವಿರುದ್ಧ ಮಾತನಾಡಿದ್ದಾರೆ. ಈ ಮೂಲಕ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಗಡ್ಕರಿ ಪರೋಕ್ಷವಾಗಿ ದೂರಿದ್ದಾರೆ' ಎಂದು ಕಾಂಗ್ರೆಸ್ ಹೇಳಿತ್ತು.

'ಪರ್ಯಾಯ ಪಿಎಂ ಅಭ್ಯರ್ಥಿ' ಗಡ್ಕರಿ ಬಗ್ಗೆ ಶರದ್ ಪವಾರ್ ಆತಂಕ'ಪರ್ಯಾಯ ಪಿಎಂ ಅಭ್ಯರ್ಥಿ' ಗಡ್ಕರಿ ಬಗ್ಗೆ ಶರದ್ ಪವಾರ್ ಆತಂಕ

ಕಾಂಗ್ರೆಸ್ ನ ಕೀಳುಮಟ್ಟದ ರಾಜಕಾರಣ

ಇದಕ್ಕೆ ಪ್ರತಿಕ್ರಿಯೆ ನೀಡಿದ ಗಡ್ಕರಿ, 'ಇಂದು ಕೀಳುಮಟ್ಟದ ರಾಜಕೀಯ ಮಾಡುವುದನ್ನೇ ಭಾರತದ ಅತ್ಯಂತ ಹಳೆಯ ಪಕ್ಷ ತನ್ನ ಗುರುತನ್ನಾಗಿಸಿಕೊಂಡಿದೆ. ಹೇಳಿಕೆಗಳನ್ನು ತಿರುಚುವುದೇ ಕಾಂಗ್ರೆಸ್ಸಿನ ಜಾಯಮಾನವಾಗಿದೆ. ಈ ಪಕ್ಷ ದ್ವೇಷದ ರಾಜಕೀಯ ಮಾಡುವುದರಲ್ಲೇ ಕಾಲಕಳೆಯುತ್ತಿದೆ' ಎಂದಿದ್ದಾರೆ.

Array

Array

ಇತ್ತೀಚೆಗಷ್ಟೇ ನಿತಿನ್ ಗಡ್ಕರಿ ಅವರು ನೀಡಿದ ಹೇಳಿಕೆಯೊಂದು ಭಾರೀ ವಿವಾದ ಸೃಷ್ಟಿಸಿತ್ತು. 'ಮನೆಯನ್ನೇ ಸರಿಯಾಗಿ ನೋಡಿಕೊಳ್ಳಲಾರದವನು ದೇಶವನ್ನು ನೋಡಿಕೊಳ್ಳುತ್ತಾನೆಯೇ?' ಎಂಬ ಅವರ ಪ್ರಶ್ನೆಗೂ ನರೇಂದ್ರ ಮೋದಿ ಅವರಿಗೂ ಲಿಂಕ್ ಕಲ್ಪಿಸಲಾಗಿತ್ತು.

ಮೊದಲು ಮನೆ, ಆಮೇಲೆ ದೇಶ!

ಮೊದಲು ಮನೆ, ಆಮೇಲೆ ದೇಶ!

ಇತ್ತೀಚೆಗಷ್ಟೇ ನಿತಿನ್ ಗಡ್ಕರಿ ಅವರು ನೀಡಿದ ಹೇಳಿಕೆಯೊಂದು ಭಾರೀ ವಿವಾದ ಸೃಷ್ಟಿಸಿತ್ತು. 'ಮನೆಯನ್ನೇ ಸರಿಯಾಗಿ ನೋಡಿಕೊಳ್ಳಲಾರದವನು ದೇಶವನ್ನು ನೋಡಿಕೊಳ್ಳುತ್ತಾನೆಯೇ?' ಎಂಬ ಅವರ ಪ್ರಶ್ನೆಗೂ ನರೇಂದ್ರ ಮೋದಿ ಅವರಿಗೂ ಲಿಂಕ್ ಕಲ್ಪಿಸಲಾಗಿತ್ತು.

ಗಡ್ಕರಿ ಪ್ರಧಾನಿ ಅಭ್ಯರ್ಥಿ?!

ಗಡ್ಕರಿ ಪ್ರಧಾನಿ ಅಭ್ಯರ್ಥಿ?!

ನಿತಿನ್ ಗಡ್ಕರಿ ಅವರನ್ನೇ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ ಎಂಬ ವದಂತಿ ಮಾಧ್ಯಗಳ ವಲಯದಲ್ಲಿ ಹಬ್ಬಿರುವ ಹಿನ್ನೆಲೆಯಲ್ಲಿ ಗಡ್ಕರಿ ಆಡುವ ಪ್ರತಿ ಮಾತೂ ಮೋದಿಯವರನ್ನು ಗುರಿಯಾಗಿಸಿದೆ ಎಂಬಂತೇ ನೋಡಲಾಗುತ್ತಿದೆ.

ಮೋದಿ ಮೇಲೆ ಆರೆಸ್ಸೆಸ್ ಗೆ ಮುನಿಸು?

ಮೋದಿ ಮೇಲೆ ಆರೆಸ್ಸೆಸ್ ಗೆ ಮುನಿಸು?

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಬಗ್ಗೆ ಆರೆಸ್ಸೆಸ್ ವಲಯದಲ್ಲಿ ಅಷ್ಟೊಂದು ಉತ್ತಮ ಅಭಿಪ್ರಾಯವಿಲ್ಲ, ಆದ್ದರಿಂದ ಆರೆಸ್ಸೆಸ್ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ನಿತಿನ್ ಗಡ್ಕರಿ ಅವರನ್ನೇ ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲು ಆರೆಸ್ಸೆಸ್ ವಲಯದಲ್ಲಿ ಚಿಂತನೆ ನಡೆಯುತ್ತಿದೆ ಎಂಬ ಮಾತೂ ಮಾಧ್ಯಮಗಳಲ್ಲಿ ಕೇಳಿಬರುತ್ತಿದೆ.

English summary
Union minister Nitin Gadkari attacks Congress after it's comment, in which it stated one of Nitin Gadkari's statements as a 'direct attack on PM Modi'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X