• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಶಿ ತರೂರ್ ಭೇಟಿ ಬಗ್ಗೆ ನಿರ್ಮಲಾ ಸೀತಾರಾಮನ್ ಯಾರಿಗೂ ಹೇಳಿರಲಿಲ್ಲ!

|
   Lok Sabha Elections 2019: ಶಶಿ ತರೂರ್ ಅವರನ್ನು ಭೇಟಿ ಮಾಡಿದ ರಕ್ಷಣಾ ಸಚಿವೆ | Oneindia Kannada

   ತಿರುವನಂತಪುರಂ, ಏಪ್ರಿಲ್ 17: ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರನ್ನು ಮಂಗಳವಾರ ಕೇರಳದ ಆಸ್ಪತ್ರೆಯೊಂದರಲ್ಲಿ ಭೇಟಿಯಾಗಿದ್ದು ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು.

   ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

   ರಾಜಕೀಯ ವಿರೋಧಿಗಳಾಗಿದ್ದರೂ, ಚುನಾವಣೆಯ ಸಮಯದಲ್ಲೂ ಬಿಡುವು ಮಾಡಿಕೊಂಡು ಗಾಯಗೊಂಡಿದ್ದ ತರೂರ್ ಅವರನ್ನು ಭೇಟಿ ಮಾಡಿದ ಅವರ ಸೌಜನ್ಯವನ್ನು ಸ್ವತಃ ಶಶಿ ತರೂರ್ ಅವರೇ ಹೊಗಳಿದ್ದರು.

   ಆಸ್ಪತ್ರೆಗೆ ಬಂದ ನಿರ್ಮಲಾ ಸೀತಾರಾಮನ್ ಸೌಜನ್ಯಕ್ಕೆ ಕರಗಿಹೋದ ಶಶಿ ತರೂರ್

   ಆದರೆ ಹೀಗೆ ಬಿಜೆಪಿ ನಾಯಕಿ ನಿರ್ಮಲಾ ಸೀತಾರಾಮನ್ ಅವರು ಶಶಿ ತರೂರ್ ಅವರನ್ನು ಭೇಟಿ ಮಾಡುವ ವಿಷಯ ಬಿಜೆಪಿ ನಾಯಕರಿಗೆ ಮೊದಲೇ ಗೊತ್ತಿತ್ತೇ? ಖಂಡಿತ ಇಲ್ಲ, ತಾವು ಶಶಿ ತರೂರ್ ಅವರನ್ನು ಭೇಟಿ ಮಾಡುವ ಬಗ್ಗೆ ಬಿಜೆಪಿಯಲ್ಲಾಗಲೀ, ಅಥವಾ ಮಾಧ್ಯಮಗಳಲ್ಲಾಗಲೀ, ಇನ್ನೆಲ್ಲೇ ಆಗಲಿ ನಾನು ಮಾಹಿತಿ ನೀಡಿರಲಿಲ್ಲ ಎಂದು ಸ್ವತಃ ನಿರ್ಮಲಾ ಸೀತಾರಾಮನ್ ಅವರೇ ಹೇಳಿದ್ದಾರೆ.

   ಆಸ್ಪತ್ರೆಗೆ ಹೋಗಬೇಕು ಅನ್ನಿಸಿತು!

   ಆಸ್ಪತ್ರೆಗೆ ಹೋಗಬೇಕು ಅನ್ನಿಸಿತು!

   "ಶಶಿ ತರೂರ್ ಅವರು ದೇವಾಲಯವೊಂದರಲ್ಲಿ ಅಚಾನಕ್ಕಾಗಿ ಬಿದ್ದು ಪೆಟ್ಟುಮಾಡಿಕೊಂಡಿದ್ದಾರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದು ನನಗೆ ತಿಳಿಯಿತು. ನಾನು ವಿಮಾನ ನಿಲ್ದಾಣದಲ್ಲಿದ್ದಾಗ ಅವರನ್ನು ಒಮ್ಮೆ ನೋಡಿ, ಬೇಗ ಗುಣಮುಖರಾಗುವಂತೆ ಹಾರೈಸಿ ಬರೋಣವೆನ್ನಿಸಿತು. ಸೀದಾ ಹೋಗಿಬಿಟ್ಟೆ. ನನ್ನ ಪಕ್ಷದವರಿಗಾಗೀ, ಇನ್ಯಾರಿಗೇ ಆಗಲಿ ನಾನು ಈ ಬಗ್ಗೆ ಮಾಹಿತಿ ನೀಡಿರಲಿಲ್ಲ" ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

   ನಿರ್ಮಲಾ ಸೌಜನ್ಯಕ್ಕೆ ಕರಗಿ ಹೋದ ತರೂರ್

   ಮಂಗಳವಾರ ಬೆಳಿಗ್ಗೆ ಅನಿರೀಕ್ಷಿತವಾಗಿ ಆಸ್ಪತ್ರೆಗೆ ಆಗಮಿಸಿ, ತಮ್ಮನ್ನು ಭೇಟಿಯಾಗಿ, ಶುಭಹಾರೈಸಿದ ನಿರ್ಮಲಾ ಸೀತಾರಾಮನ್ ಅವರ ಸೌಜನ್ಯದ ನಡೆ ಬಗ್ಗೆ ಶಶಿ ತರೂರ್ ಹಾಡಿ ಹೊಗಳಿ ಟ್ವೀಟ್ ಮಾಡಿದ್ದರು. '"ಚುನಾವಣೆಯ ಬಿಡುವಿಲ್ಲದ ಕಾರ್ಯ ಒತ್ತಡದ ನಡುವೆಯೂ ನನ್ನನ್ನು ಆಸ್ಪತ್ರೆಗೆ ಬಂದು ಭೇಟಿ ಮಾಡಿ, ವಿಚಾರಿಸಿದ ನಿರ್ಮಲಾ ಸೀತಾರಾಮನ್ ಅವರ ಸೌಜನ್ಯದ ನಡೆ ನನ್ನನ್ನು ತಟ್ಟಿತು. ಭಾರತೀಯ ರಾಜಕೀಯದಲ್ಲಿ ಇಂಥ ಪ್ರಬುದ್ಧ ವರ್ತನೆ ಅಪರೂಪ. ಆದರೆ ಅದನ್ನು ಈಗಲೂ ಪಾಲಿಸುತ್ತಿರುವುದು ನಿರ್ಮಲಾ ಅವರ ದೊಡ್ಡಗುಣ" ಎಂದು ಶಶಿ ತರೂರ್ ಟ್ವೀಟ್ ಮಾಡಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದರು.'

   ತಲೆಗೆ ಬ್ಯಾಂಡೇಜ್ ಸುತ್ತಿಕೊಂಡೇ ಪ್ರಚಾರಕ್ಕೆ ಬಂದ ತರೂರ್, ಕೊಂಡಾಡಿದ ರಾಹುಲ್

   ತಲೆಗೆ ಬ್ಯಾಂಡೇಜ್ ಕಟ್ಟಿಕೊಂಡು ಪ್ರಚಾರ!

   ತಲೆಗೆ ಬ್ಯಾಂಡೇಜ್ ಕಟ್ಟಿಕೊಂಡು ಪ್ರಚಾರ!

   ಕೇರಳದ ತಿರುವನಂತಪುರಂ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಶಶಿ ತರೂರ್, ಏಪ್ರಿಲ್ 23 ರಂದು ಚುನಾವಣೆ ಎದುರಿಸಲಿದ್ದಾರೆ. ಮೇ 23 ರಂದು ಫಲಿತಾಂಶ ಹೊರಬೀಳಲಿದೆ. ಚುನಾವಣೆಯ ಕಾವೇರಿರುವ ಹೊತ್ತಲ್ಲಿ ತಲೆಗೆ ಏಟು ಬಿದ್ದು ಆಸ್ಪತ್ರೆಯಲ್ಲಿದ್ದ ತರೂರ್, ಸರಿಯಾಗಿ ಗುಣಮುಖರಾಗುವ ಮೊದಲೇ ತಲೆಗೆ ಬ್ಯಾಂಡೇಜ್ ಕಟ್ಟಿಕೊಂಡೇ ಅವರು ಪ್ರಚಾರಕ್ಕೆ ಇಳಿದಿದ್ದಾರೆ. ಅವರ ಕಾರ್ಯತತ್ಪರತೆಯನ್ನು ಖುದ್ದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರೇ ಒಪ್ಪಿಕೊಂಡಿದ್ದಾರೆ.

   ಶಶಿ ತರೂರ್ ಅವರಿಗೆ ಏನಾಗಿತ್ತು?

   ಶಶಿ ತರೂರ್ ಅವರಿಗೆ ಏನಾಗಿತ್ತು?

   ಕೇರಳದ ಗಾಂಧಾರಿ ಅಮನ್ ಕೋವಿಲ್ ದೇವಸ್ಥಾನದಲ್ಲಿ ಅಚಾನಕ್ಕಾಗಿ ಬಿದ್ದ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರ ತಲೆಗೆ ತೀವ್ರವಾಗಿ ಗಾಯವಾಗಿತ್ತು.ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತೆ ನೀಡಲಾಗುತ್ತಿತ್ತು. ತಲೆಗೆ ತೀವ್ರ ಗಾಯವಾಗಿದ್ದು, ವೈದ್ಯರು ಹನ್ನೊಂದು ಹೊಲಿಗೆ ಹಾಕಿದ್ದರು.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Defense minister Nirmala Sitharaman who met Congress leader Shashi Tharoor yesterday in Kerala hospital was not informed anybody, even in her Party circle about her visit to the hospital
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more