ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್‌ಎಎಲ್ ಬಗ್ಗೆ ರಾಹುಲ್ ಗಾಂಧಿ ಮೊಸಳೆ ಕಣ್ಣೀರು: ನಿರ್ಮಲಾ ಸೀತಾರಾಮನ್

|
Google Oneindia Kannada News

ನವದೆಹಲಿ, ಜನವರಿ 4: ರಫೇಲ್ ಒಪ್ಪಂದದ ಕುರಿತಂತೆ ಲೋಕಸಭೆಯಲ್ಲಿ ಶುಕ್ರವಾರ ಕಾವೇರಿದ ಚರ್ಚೆ ನಡೆದಿದೆ. ಮೋದಿ ಮತ್ತು ಅಂಬಾನಿ ವಿರುದ್ಧ ಸತತ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತೀಕ್ಷ್ಣ ಎದುರೇಟು ನೀಡಿದ್ದಾರೆ.

ಸರ್ಕಾರದ ಪರವಾಗಿ ದಾಳಿಯ ಮುಂದಾಳತ್ವ ನಡೆಸಿದ ನಿರ್ಮಲಾ ಸೀತಾರಾಮನ್, ಎಚ್‌ ಎಎಲ್‌ ಕುರಿತಂತೆ ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಅತಿ ಗಣ್ಯರ ಹೆಲಿಕಾಪ್ಟರ್ ಖರೀದಿ ಒಪ್ಪಂದವನ್ನು ಆಗಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಎಚ್‌ ಎಎಲ್‌ಗೆ ನೀಡಬಹುದಾಗಿತ್ತಲ್ಲವೇ? ಅದರ ಬದಲು ಅಗಸ್ಟಾ ವೆಸ್ಟ್ ಲ್ಯಾಂಡ್ ಕಂಪೆನಿಗೆ ನೀಡಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.

ರಫೇಲ್ ಭ್ರಷ್ಟಾಚಾರ: ಮೋದಿ ವಿರುದ್ಧ ತನಿಖೆ ನಡೆಯಲಿ ಎಂದ ರಾಹುಲ್ರಫೇಲ್ ಭ್ರಷ್ಟಾಚಾರ: ಮೋದಿ ವಿರುದ್ಧ ತನಿಖೆ ನಡೆಯಲಿ ಎಂದ ರಾಹುಲ್

ಹತ್ತು ವರ್ಷದ ಆಡಳಿತದಲ್ಲಿ ಯುಪಿಎ ಸರ್ಕಾರ ಒಂದೇ ಒಂದು ಯುದ್ಧ ವಿಮಾನವನ್ನು ಸೇನೆಗೆ ಒದಗಿಸಿಲ್ಲ ಏಕೆ ಎಂದು ಕೇಳಿದ್ದಾರೆ.

18 ಯುದ್ಧ ವಿಮಾನ

18 ಯುದ್ಧ ವಿಮಾನ

126 ಯುದ್ಧ ವಿಮಾನಗಳ ಬದಲು 36 ವಿಮಾನಗಳನ್ನು ಖರೀದಿ ಮಾಡುವ ಒಪ್ಪಂದದ ಬಗ್ಗೆ ವಿರೋಧ ಪಕ್ಷಗಳ ಆರೋಪಗಳನ್ನು ತಳ್ಳಿಹಾಕಿದ ನಿರ್ಮಲಾ, ಯುಪಿಎ ಸರ್ಕಾರದ ಅವಧಿಯಲ್ಲಿ 18 ಯುದ್ಧ ವಿಮಾನಗಳನ್ನು ಮಾತ್ರ ಹಾರಾಟಕ್ಕೆ ಸಿದ್ಧಗೊಂಡ ಸ್ಥಿತಿಯಲ್ಲಿ ಖರೀದಿ ಮಾಡಲು ಒಪ್ಪಂದ ನಡೆಸಲಾಗಿತ್ತು. ಆದರೆ, ಎನ್‌ಡಿಎ ಎಲ್ಲ 36 ಯುದ್ಧ ವಿಮಾನಗಳನ್ನು ಹಾರಾಟಕ್ಕೆ ಸಿದ್ಧ ಸ್ಥಿತಿಯಲ್ಲಿ ಕೊಳ್ಳಲು ಒಪ್ಪಂದ ಮಾಡಿಕೊಂಡಿದೆ ಎಂದು ವಿವರಿಸಿದ್ದಾರೆ.

'ಸಂಸತ್ ನಿಂದ ಓಡಿಹೋದ ಮೋದಿಯಿಂದ ಪಂಜಾಬ್ ನಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ''ಸಂಸತ್ ನಿಂದ ಓಡಿಹೋದ ಮೋದಿಯಿಂದ ಪಂಜಾಬ್ ನಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ'

Array

ವಿಮಾನ 2019ರಲ್ಲಿ ಬರಲಿದೆ

ಮೊದಲ ರಫೇಲ್ ಯುದ್ಧ ವಿಮಾನ 2019ರ ಸೆಪ್ಟೆಂಬರ್‌ನಲ್ಲಿ ಪೂರೈಕೆಯಾಗಲಿದೆ. ಮತ್ತು ಉಳಿದ ಯುದ್ಧ ವಿಮಾನಗಳು 2022ರಲ್ಲಿ ಪೂರೈಕೆಯಾಗಲಿವೆ. ಈ ವ್ಯವಹಾರ ಪ್ರಕ್ರಿಯೆಗಳು 14 ತಿಂಗಳಲ್ಲಿ ಪೂರ್ಣಗೊಳ್ಳಲಿವೆ ಎಂದು ನಿರ್ಮಲಾ ಸೀತಾರಾಮನ್ ಲೋಕಸಭೆಗೆ ಶುಕ್ರವಾರ ತಿಳಿಸಿದ್ದಾರೆ.

'ಮೂರು' ಮರೆತ ರಾಹುಲ್ ಗಾಂಧಿ, ಕಾಲೆಳೆದ ಟ್ರೋಲ್ ಹೈಕ್ಳು!'ಮೂರು' ಮರೆತ ರಾಹುಲ್ ಗಾಂಧಿ, ಕಾಲೆಳೆದ ಟ್ರೋಲ್ ಹೈಕ್ಳು!

2006ರಲ್ಲೇ ವಾಜಪೇಯಿ ಆಸಕ್ತಿ

2001ರಲ್ಲಿ ಕಾರ್ಗಿಲ್ ಯುದ್ಧ ಮುಗಿದ ಬಳಿಕ 126 ಯುದ್ಧ ವಿಮಾನಗಳ ಖರೀದಿಗೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಹೆಜ್ಜೆ ಇರಿಸಿತ್ತು. 2006ರಲ್ಲಿ ಯುಪಿಎ ಸರ್ಕಾರ ಯುದ್ಧ ವಿಮಾನ ಖರೀದಿಗೆ ಎಸ್‌ಕ್ಯೂಆರ್ ಹೊರಡಿಸಿತ್ತು. ಆದರೆ ಅದು ಚಾಲ್ತಿಗೆ ಬಂದಿದ್ದು 2014ರಲ್ಲಿ.

2004-14ರ ಅವಧಿಯಲ್ಲಿ ಚೀನಾ, ಐದನೇ ಪೀಳಿಗೆಯ ವಿಮಾನ ಒಳಗೊಂಡಂತೆ 400 ಯುದ್ಧ ವಿಮಾನಗಳನ್ನು ಹೆಚ್ಚಿಸಿಕೊಂಡಿದ್ದರೆ, ಪಾಕಿಸ್ತಾನವು ತನ್ನ ಎಫ್ 16ಎಸ್ ಅನ್ನು ದುಪ್ಪಟ್ಟು ಮಾಡಿಕೊಂಡಿದೆ. ಹಳೆಯ ಒಪ್ಪಂದದಲ್ಲಿಯೂ, ಸಹಿ ಹಾಕಿ ಮೂರು ವರ್ಷದ ಬಳಿಕ ರಫೇಲ್ ಮೊದಲ ಬ್ಯಾಚ್‌ಅನ್ನು ಪೂರೈಕೆ ಮಾಡಲಾಗಿದೆ. ಇದರಿಂದಾಗಿ ಪ್ರಧಾನಿ ನರೇಂದ್ರ ಮೋದಿ ತುರ್ತು ಅಗತ್ಯವನ್ನು ಗಮನಿಸಿ ಅಂತರ್ ಸರ್ಕಾರಿ ಒಪ್ಪಂದಕ್ಕೆ ಸಹಿ ಹಾಕಿದ್ದರು.

ಕಾಂಗ್ರೆಸ್‌ಗೆ ವಿಮಾನ ಖರೀದಿ ಉದ್ದೇಶಿಸಿರಲಿಲ್ಲ

ಈ ಹಿಂದಿನ ರಕ್ಷಣಾ ಸಚಿವರು ಯುದ್ಧ ವಿಮಾನಕ್ಕೆ ಹಣಪಾವತಿ ಮಾಡುವ ವಿಸ್ತೃತ ಕಾಲಮಿತಿಯನ್ನು ಹೊಂದಿದ್ದರು. ಆದರೆ, ಮಾಜಿ ರಕ್ಷಣಾ ಸಚಿವರು ಸರ್ಕಾರದ ಬಳಿ ಹಣವಿಲ್ಲ ಎಂದು ಮಾಧ್ಯಮಗಳ ಎದುರು ಹೇಳಿಕೊಂಡಿದ್ದರು. ಕಾಂಗ್ರೆಸ್ ಸರ್ಕಾರಕ್ಕೆ ಯುದ್ಧ ವಿಮಾನಗಳನ್ನು ಖರೀದಿ ಮಾಡಲು ಯಾವುದೇ ಉದ್ದೇಶವಿರಲಿಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ.

ರಕ್ಷಣಾ ಒಪ್ಪಂದ ಮತ್ತು ರಕ್ಷಣೆಯಲ್ಲಿ ಒಪ್ಪಂದಗಳ ನಡುವೆ ವ್ಯತ್ಯಾಸವಿದೆ. ನಾವು ರಕ್ಷಣೆಯಲ್ಲಿ ಒಪ್ಪಂದ ಮಾಡಿಕೊಂಡಿಲ್ಲ ಎಂದು ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು.

ಎಎ ಅಲ್ಲ, ಆರ್ ವಿ-ಕ್ಯೂ!

ಎಎ ಅಲ್ಲ, ಆರ್ ವಿ-ಕ್ಯೂ!

ರಾಹುಲ್ ಗಾಂಧಿ ಅವರು ಅನಿಲ್ ಅಂಬಾನಿ ಅವರಿಗೆ ಸಂಕ್ಷಿಪ್ತ ರೂಪವಾಗಿ 'ಎಎ' ಎಂದು ಬಳಸಿದ್ದರ ಬಗ್ಗೆ ಅಷ್ಟೇ ತೀಕ್ಷ್ಣವಾಗಿ ಉತ್ತರಿಸಿದ ನಿರ್ಮಲಾ, ಪ್ರತಿ 'ಎಎ'ಗೆ ಅಲ್ಲೊಂದು 'ಆರ್ ವಿ' (ಆರ್ ವಿ- ರಾಹುಲ್ ಗಾಂಧಿ ಅವರ ಬಾಮೈದ. ಮತ್ತು 'ಕ್ಯೂ' (ಓಟ್ಟಾವಿಯೊ ಕ್ವಟ್ರೋಚಿ) ಇರುತ್ತದೆ ಎಂದಿದ್ದಾರೆ.

ಕಾಂಗ್ರೆಸ್‌ಗೆ ಅವಕಾಶವಿದ್ದಾಗ ಎಚ್‌ಎಎಲ್ ಬದಲು ಅಗಸ್ಟಾ ವೆಸ್ಟ್ ಲ್ಯಾಂಡ್ ಅನ್ನು ಆಯ್ಕೆ ಮಾಡಿಕೊಂಡಿತು. ಏಕೆಂದರೆ ಎಚ್ ಎಎಲ್ ಅವರಿಗೆ ಹೆಲಿಕಾಪ್ಟರ್ ಹೊರತಾಗಿ ಬೇರೇನನ್ನೂ ನೀಡುತ್ತಿರಲಿಲ್ಲ ಎಂದು ಹೇಳಿದ್ದಾರೆ.

English summary
Niramala Sitharaman on Friday attacked Rahul Gandhi over Rafale deal allegation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X