ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಸಿದ ರಫ್ತು ವ್ಯವಹಾರಕ್ಕೆ ನಿರ್ಮಲಾ ಸೀತಾರಾಮನ್ ತೇಪೆ ಪ್ರಯತ್ನ

|
Google Oneindia Kannada News

ನವ ದೆಹಲಿ, ಸೆಪ್ಟೆಂಬರ್ 14: ಹಳ್ಳ ಹಿಡಿದಿರುವ ಆರ್ಥಿಕತೆಗೆ ಮರುಜೀವ ತುಂಬಲು ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮ್ ಅವರು ಕೆಲವು ಘೋಷಣೆಗಳನ್ನು ಇಂದು ಮಾಡಿದ್ದಾರೆ.

ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, 'ಹಣದುಬ್ಬರವು ನಿಯಂತ್ರಣದಲ್ಲಿದೆ ಕೈಗಾರಿಕಾ ಉತ್ಪಾದನೆ ಮೇಲೆರುತ್ತಿರುವ ಸ್ಪಷ್ಟ ಚಿತ್ರಣ ದೊರೆತಿದೆ' ಎಂದು ಹೇಳಿದರು.

ಸರಕು ರಫ್ತಿನ ಮೇಲೆ ಹೇರಲಾಗುತ್ತಿರುವ ಡ್ಯೂಟಿ ಮತ್ತು ತೆರಿಗೆಗಳನ್ನು ಇಳಿಸಲಾಗುವುದು ಈ ಹೊಸ ಯೋಜನೆಯು 2020 ಜನವರಿ 1 ರಿಂದ ಜಾರಿಗೆ ಬರುತ್ತದೆ. ಇದು ಬಜೆಟ್‌ನ ಘೋಷಣೆಯೂ ಆಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಆಟೋ ಇಂಡಸ್ಟ್ರಿ ಬಿಕ್ಕಟ್ಟು: 'ನಿರ್ಮಲಾ ತಾಯ್' ಹೇಳದೆ ಉಳಿಸಿದ ಅಸಲಿ ಕಾರಣಗಳು!ಆಟೋ ಇಂಡಸ್ಟ್ರಿ ಬಿಕ್ಕಟ್ಟು: 'ನಿರ್ಮಲಾ ತಾಯ್' ಹೇಳದೆ ಉಳಿಸಿದ ಅಸಲಿ ಕಾರಣಗಳು!

ತೀವ್ರವಾಗಿ ಕುಸಿದಿರುವ ಸರಕು ರಫ್ತಿನ ಉತ್ತೇಜನಕ್ಕೆ ಹೆಚ್ಚಿನ ಘೋಷಣೆಗಳನ್ನು ಮಾಡಿದ ನಿರ್ಮಲಾ ಸೀತಾರಾಮನ್, ಸರಕು ರಫ್ತಿಗೆ ಸಾಲ ನೀಡುವ ಬ್ಯಾಂಕ್‌ಗಳಿಗೆ ವಿಮೆ ಮೊತ್ತವನ್ನು ಸರ್ಕಾರ ಹೆಚ್ಚು ಮಾಡಲಿದೆ.ಸ ಇದರಿಂದ ಸರ್ಕಾರದ ಮೇಲೆ ಪ್ರತಿವರ್ಷ 1700 ಕೋಟಿ ಹೆಚ್ಚಿನ ಹೊರೆ ಬೀಳಲಿದೆ ಎಂದರು.

Nirmala Sitaraman Announce Steps To Uplift Export

ರಫ್ತಿಗೆ ಹಿಡಿಯುವ ಸಮಯವನ್ನು ಕಡಿಮೆಗೊಳಿಸಲು ಸರ್ಕಾರ ಕ್ರಮಗಳನ್ನು ತೆಗೆದುಕೊಂಡಿದ್ದು, ವಿಮಾನ ನಿಲ್ದಾಣಗಳಲ್ಲಿ, ಬಂದರುಗಳಲ್ಲಿ ಸರಕು ಕಾಯುವ ಸಮಯವನ್ನು ಇಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದನ್ನು ಕೈಗಾರಿಕಾ ಅಧಿಕಾರಿಗಳ ತಂಡ ನಿರ್ವಹಣೆ ಮಾಡುತ್ತದೆ ಎಂದು ಅವರು ಹೇಳಿದರು.

ದ. ಭಾರತದ ಸಿನಿಮಾದಲ್ಲಾದರೂ ತರ್ಕ ಹುಡುಕಬಹುದು, ಆದರೆ ಸಚಿವೆ ನಿರ್ಮಲಾ?ದ. ಭಾರತದ ಸಿನಿಮಾದಲ್ಲಾದರೂ ತರ್ಕ ಹುಡುಕಬಹುದು, ಆದರೆ ಸಚಿವೆ ನಿರ್ಮಲಾ?

ಮೆಗಾ ಶಾಪಿಂಗ್ ಉತ್ಸವವನ್ನು ಭಾರತದ ನಾಲ್ಕು ಕಡೆ ಆಯೋಜಿಸಲಾಗುತ್ತದೆ, ಇದು 2020 ರ ಮಾರ್ಚ್‌ನಿಂದ ಪ್ರಾರಂಭವಾಗಲಿದೆ. ಇದರಿಂದ ಸಂಪರ್ಕ ಮತ್ತು ವ್ಯವಹಾರ ವಿಸ್ತರಣೆಗೆ ಸಹಾಯವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ವಸೂಲಿ ಆಗದ ಸಾಲ (ಎನ್‌ಪಿಎ) ಆಗದ ರೀತಿಯಲ್ಲಿ ಗೃಹ ನಿರ್ಮಾಣ ಯೋಜನೆಗಳಿಗೆ ಸಾಲ ಸೌಲಭ್ಯ ಹೆಚ್ಚಳ ಮಾಡುವ ಬಗ್ಗೆ ನಿರ್ಮಲಾ ಸೀತಾರಾಮನ್ ಹೇಳಿದರು.

ಭಾರತೀಯರಿಗೆ ವಿದೇಶಿಗರು ವಿದೇಶಿ ಕರೆನ್ಸಿಯಲ್ಲಿ ನೀಡುವ ಸಾಲ (ಇಸಿಬಿ) ಯ ನಿಯಮಗಳನ್ನು ಸಡಿಲಗೊಳಿಸಲಾಗಿದ್ದು, ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ಮನೆ ಕೊಳ್ಳುವವರಿಗೆ ಇದು ಸಹಾಯವಾಗಲಿದೆ. ಸುಲಭ ದರದಲ್ಲಿ ಮನೆ ಮಾಡಿಕೊಳ್ಳುವವ ಆಸೆಯುಳ್ಳವರಿಗೆ ಇದು ಸಹಾಯಕವಾಗಲಿದೆ.

ಓಲಾ, ಉಬರ್ ಬಳಕೆ ಹೆಚ್ಚಾಗಿ ಕಾರು ಮಾರಾಟದಲ್ಲಿ ಇಳಿಕೆ: ನಿರ್ಮಲಾಓಲಾ, ಉಬರ್ ಬಳಕೆ ಹೆಚ್ಚಾಗಿ ಕಾರು ಮಾರಾಟದಲ್ಲಿ ಇಳಿಕೆ: ನಿರ್ಮಲಾ

ವಿದೇಶ ನೇರ ಬಂಡವಾಳ ಹೂಡಿಕೆ ಸದೃಡವಾಗಿದ್ದು, ಅದು ಏರುಗತಿಯನ್ನು ತೋರುತ್ತಿದೆ. ವಿದೇಶಿ ವಿನಿಮಯ ಸಂಗ್ರಹ ಸಹ ಆಗಸ್ಟ್‌ ಅಂತ್ಯದಿಂದ ಹೆಚ್ಚಳ ಕಂಡಿದೆ ಎಂದು ಧನಾತ್ಮಕ ಅಂಶಗಳನ್ನು ನಿರ್ಮಲಾ ಸೀತಾರಾಮನ್ ಹೇಳಿದರು.

ಗೃಹ ನಿರ್ಮಾಣ ಯೋಜನೆಗಳಿಗೆ 10,000 ಕೋಟಿ ರೂಪಾಯಿಗಳನ್ನು ಭಾರತ ಸರ್ಕಾರ ಹೂಡಿಕೆ ಮಾಡುತ್ತಿದೆ. ಮತ್ತು ಇಷ್ಟೇ ಹಣ ಹೊರಗಿನ ಬಂಡವಾಳದಾರರಿಂದಲೂ ಹರಿದು ಬರುತ್ತದೆ ಎಂದು ನಿರ್ಮಲಾ ಸೀತಾರಾಮನ್ ಭರವಸೆ ನೀಡಿದರು.

ತೆರಿಗೆ ವಾಪಸ್ಸಾತಿಗಳನ್ನು ಆದಷ್ಟು ಶೀಘ್ರವಾಗಿ ಮಾಡಲು ಆಟೊಮ್ಯಾಟಿಕ್ ವ್ಯವಸ್ಥೆಯನ್ನು ತರಲು ನಿಶ್ಚಯಿಸಿರುವುದಾಗಿ ಹೇಳಿದ ನಿರ್ಮಲಾ ಸೀತಾರಾಮನ್, ಇದೇ ತಿಂಗಳ ಅಂತ್ಯದಿಂದ ವ್ಯವಸ್ಥೆ ಜಾರಿಗೆ ಬರಲಿದೆ ಎಂದರು.

English summary
Finance minister Nirmala Sitaraman announce several steps to promote export. She trying to lift the down fell economy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X