ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಎಂದ ಸುಪ್ರೀಂ ಕೋರ್ಟ್

ತಮ್ಮ ಮಗಳ ಬದುಕನ್ನೇ ನಾಶಮಾಡಿದ ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆ ನೀಡಬೇಕೆಂದು ನಿರ್ಭಯಾ ಕುಟುಂಬ ಉಸಿರು ಬಿಗಿ ಹಿಡಿದು ಕಾಯುತ್ತಿದೆ. ನಿರ್ಭಯಾ ತೀರ್ಪಿಗೆ ಸಂಬಂಧಿಸಿದ ಕ್ಷಣ ಕ್ಷಣದ ಮಾಹಿತಿ 'ಒನ್ ಇಂಡಿಯಾ' ದಲ್ಲಿ ಲಭ್ಯವಾಗಲಿದೆ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ನವದೆಹಲಿ, ಮೇ 05: ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳಿಗೆ ಮರಣ ದಂಡನೆಯನ್ನು ಖಾಯಂ ಗೊಳಿಸುವ ಮೂಲಕ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.

ದೀಪಕ್ ಮಿಶ್ರಾ ನೇತೃತ್ವದ ಸರ್ವೋಚ್ಚ ನ್ಯಾಯಾಲಯದ ತ್ರಿಸದಸ್ಯ ಪೀಠ ದೆಹಲಿ ಉಚ್ಚ ನ್ಯಾಯಾಲಯ ನೀಡಿದ್ದ ಮರಣ ದಂಡನೆಯ ತೀರ್ಪನ್ನು ಎತ್ತಿಹಿಡಿದಿದ್ದು, ನಾಲ್ವರು ಆರೋಪಿಗಳಿಗೆ ಗಲ್ಲು ಶಿಕ್ಷೆಯನ್ನು ಖಾಯಂ ಗೊಳಿಸಿದೆ.

ವಿನಯ್ ಶರ್ಮಾ, ಮುಕೇಶ್, ಪವನ್ ಗುಪ್ತಾ, ಅಕ್ಷಯ್ ಗೆ ಗಲ್ಲು ಶಿಕ್ಷೆ ನಿಗದಿಯಾಗಿದ್ದು, ತೀರ್ಪು ಪ್ರಕರಣವಾಗುತ್ತಿದ್ದಂತೆಯೇ ಸುಪ್ರೀಂ ಕೋರ್ಟ್ ನಲ್ಲಿ ನೆರೆದಿದ್ದ ಜನರು ಚಪ್ಪಾಳೆ ತಟ್ಟಿ ತೀರ್ಪನ್ನು ಸ್ವಾಗತಿಸಿದರು.

THe SC bench is expected to pronounce Nirbhaya verdict at 2 pm today

ಈ ಪ್ರಕರಣವನ್ನು ಅಪರೂಪದಲ್ಲೇ ಅಪರೂಪದ ಪ್ರಕರಣ ಎಂದು ಉಲ್ಲೇಖಿಸಿದ ನ್ಯಾಯ ಮೂರ್ತಿಗಳು, ಈ ಆರೋಪಿಗಳು ಯಾವುದೇ ರೀತಿಯಲ್ಲೂ ಸುಧಾರಣೆ ಕಾಣುವ ಅಥವಾ ಇವರ ಮನಸ್ಥಿತಿ ಯಾವುದೇ ರೀತಿಯಲ್ಲೂ ಬದಲಾಗುವ ಸಂಭವವೂ ಇರದ ಕಾರಣ ಈ ತೀರ್ಪು ನೀಡಲಾಗುತ್ತಿದೆ ಎಂದಿದ್ದಾರೆ.

ಇನ್ನು ಕೆಲವೇ ಕ್ಷಣಗಳಲ್ಲಿ ನಿರ್ಭಯಾ ಪ್ರಕರಣದ ತೀರ್ಪು ಪ್ರಕಟಗೊಳ್ಳಲಿದ್ದು, ಸಮಸ್ತ ಭಾರತೀಯರ ನಾಲ್ಕೂವರೆ ವರ್ಷಗಳ ಕಾಯುವಿಕೆಗೆ ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠ ಇನ್ನು ಕೆಲವೇ ಕ್ಷಣಗಳಲ್ಲಿ ತಿಲಾಂಜಲಿ ಹಾಡಲಿದೆ.

ತಮ್ಮ ಮಗಳ ಬದುಕನ್ನೇ ನಾಶಮಾಡಿದ ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆ ನೀಡಬೇಕೆಂದು ನಿರ್ಭಯಾ ಕುಟುಂಬ ಉಸಿರು ಬಿಗಿ ಹಿಡಿದು ಕಾಯುತ್ತಿದೆ. ನಿರ್ಭಯಾ ತೀರ್ಪಿಗೆ ಸಂಬಂಧಿಸಿದ ಕ್ಷಣ ಕ್ಷಣದ ಮಾಹಿತಿ 'ಒನ್ ಇಂಡಿಯಾ' ದಲ್ಲಿ ಲಭ್ಯವಾಗಲಿದೆ.[ಜ್ಯೋತಿ ಅತ್ಯಾಚಾರಿಗಳನ್ನು ನೇಣಿಗೆ ಹಾಕಿ: ಟ್ವಿಟ್ಟಿಗರ ಆಜ್ಞೆ]

* ನಿರ್ಭಯಾ ಪ್ರಕರಣ: ಆರೋಪಿಗಳಿಗೆ ಮರಣ ದಂಡನೆ ಖಾಯಂ

* ಆರೋಪಿಗಳು ಕ್ರಿಮಿನಲ್ ಸಂಚು ಹೂಡಿದ್ದು ಮತ್ತು ಅವರು ಬಸ್ಸಿನಲ್ಲಿದ್ದುದು ಸಾಕ್ಷ್ಯ ಸಮೇತ ಸಾಬೀತಾಗಿದೆ: ನ್ಯಾ.ದೀಪಕ್ ಮಿಶ್ರಾ

* ಸಾಕ್ಷ್ಯಗಳು, ಮರಣ ಕಾಲದ ಹೇಳಿಕೆಗಳು ನಂಬಿಕೆ ಅರ್ಹವಾಗಿದೆ ಎಂದ ನ್ಯಾ. ದೀಪಕ್ ಮಿಶ್ರಾ

* ಪ್ರತ್ಯೇಕ ತೀರ್ಪು ನೀಡಲಿರುವ ಇಬ್ಬರು ನ್ಯಾಯಮೂರ್ತಿಗಳು

* ಅಂತಿಮ ತೀರ್ಪು ಓದುವುದಕ್ಕೆ ಆರಂಭಿಸಿರುವ ನ್ಯಾಯಮೂರ್ತಿ ದೀಪಕ್ ಮಿಶ್ರಾ

* ನ್ಯಾಯಮೂರ್ತಿಗಳು ಈಗಾಗಲೇ ನಿರ್ಭಯಾ ಪ್ರಕರಣದ ತೀರ್ಪು ಓದಲು ಆರಂಭಿಸಿದ್ದು, ಜೆಲ ಸಮಯದಲ್ಲೇ ತೀರ್ಪಿನ ಪೂರ್ಣಪಾಠ ದೊರೆಯಲಿದೆ.

* 'ಸುಪ್ರೀಂ ಕೋರ್ಟ್ ಮಾತ್ರವಲ್ಲ, ಆ ದೇವರೂ ಅವರನ್ನು ಕ್ಷಮಿಸಲಾರ...' ಕಣ್ಣೆವೆಗಳಲ್ಲಿ ತುಂಬಿದ ನೀರನ್ನು ಹತ್ತಿಕ್ಕುತ್ತ ನಿರ್ಭಯಾ ತಂದೆ ಹೇಳಿದ ಮಾತು ಇದು!

* ಕಳೆದ ನಾಲ್ಕೂವರೆ ವರ್ಷಗಳಿಂದ ದೇಶದ ಭಾರತೀಯರು ಕೌತುಕರಿಂದ ಕಾಯುತ್ತಿರುವ ನಿರ್ಭಯಾ ಪ್ರಕರಣದ ತೀರ್ಪು ಇಂದು ಮಧ್ಯಾಹ್ನ 2 ಗಂಟೆಗೆ ಹೊರಬೀಳಲಿದೆ. ಇಡಿ ಜಗತ್ತೂ ಭಾರತದತ್ತ ಭೀತಿಯ ಕಣ್ಣಿನಿಂದ ನೋಡುವಂತೆ ಮಾಡಿದ ದೆಹಲಿ ಅತ್ಯಾಚಾರ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ಇಂದು ತಿಲಾಂಜಲಿ ಹಾಡಲಿದೆ.

* ನ್ಯಾ. ದೀಪಕ್ ಮಿಶ್ರಾ ನೇತೃತ್ವದ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಇಂದು ತೀರ್ಪು ನೀಡಲಿದ್ದು, ಅತ್ಯಾಚಾರಿಗಳಿಗೆ ಜೀವಾವಧಿಯೋ, ಗಲ್ಲೋ ಎಂಬುದು ಇಂದು ನಿರ್ಧಾರವಾಗಲಿದೆ.

* 'ನನಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಂಪೂರ್ಣ ನಂಬಿಕೆ ಇದೆ. ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಿ, ನನ್ನ ಮಗಳಿಗೆ ಖಂಡಿತ ನ್ಯಾಯ ದೊರಕಿಸಿಕೊಡಲಿದೆ. ಸುಪ್ರೀಂ ಕೋರ್ಟ್ ತೀರ್ಪು ಇಡೀ ಜಗತ್ತಿಗೂ ಒಂದು ಪಾಠವಾಗಲಿದೆ' ನಿರ್ಭಯಾ ತಾಯಿ ವಿಶ್ವಾಸದ ನುಡಿ.

* 'ಕಳೆದ ನಾಲ್ಕೂವರೆ ವರ್ಷಗಳಿಂದ ನಾವು ನಮ್ಮ ಮಗಳಿಗೆ ನ್ಯಾಯ ಸಿಗಬೇಕೆಂದಷ್ಟೇ ಹೋರಾಡುತ್ತಿದ್ದೇವೆ. ನನಗೆ ಗೊತ್ತು, ಅವರಿಗೆ ಗಲ್ಲುಶಿಕ್ಷೆ ಆಗಿಯೇ ಆಗುತ್ತದೆ' ಎನ್ನುವ ನಿರ್ಭಯಾ ತಾಯಿಯ ವಿಶ್ವಾಸವನ್ನು ಸುಪ್ರೀಂ ಕೋರ್ಟ್ ನಿಜವಾಗಿಸುತ್ತದೆಯೆ ಎಂಬುದನ್ನು ಕಾದು ನೋಡಬೇಕಿದೆ.

English summary
Nirbhaya's killers will hang to death the Supreme Court has held. The Supreme Court on Friday confirmed the death sentenced awarded to the four killers of Nirbhaya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X