• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಂಥವರನ್ನು ನಡುಬೀದಿಲಿ ಹೊಡೆದು ಸಾಯಿಸಿ: ಕಟ್ಟೆಯೊಡೆದ ಆಕ್ರೋಶ!

|

ನವದೆಹಲಿ, ಜುಲೈ 09: "ಇಂಥವರಿಗೆ ಕ್ಷಮೆ, ಕರುಣೆ ಬೇರೆ, ನಡುಬೀದಿಲಿ ಹೊಡೆದು ಸಾಯಿಸಿದರೂ ಪಾಪ ಬರೋಲ್ಲ...' ಟ್ವಿಟ್ಟಿಗರ ಕಟ್ಟೆಯೊಡೆದ ಆಕ್ರೋಶದ ಫಲ ಈ ಸಾಲು!

ನಿರ್ಭಯಾ ಪ್ರಕರಣದಲ್ಲಿ ಆರೋಪಿಗಳಿಗೆ ಗಲ್ಲುಶಿಕ್ಷೆ ನೀಡಿದ್ದ ಸುಪ್ರೀಂ ಕೋರ್ಟ್ ಆದೇಶವನ್ನು ಮರುಪರಿಶೀಲಿಸುವಂತೆ ಕೋರಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಗಲ್ಲು ಶಿಕ್ಷೆಯನ್ನು ಎತ್ತಿಹಿಡಿದಿದೆ.

ನಿರ್ಭಯಾ ಕೇಸ್ : 3 ಅಪರಾಧಿಗಳಿಗೆ ಗಲ್ಲು ಶಿಕ್ಷೆ ಖಾಯಂ, ಸುಪ್ರೀಂ ಆದೇಶ

2012 ಡಿಸೆಂಬರ್ 12 ರಂದು ದೆಹಲಿಯಲ್ಲಿ ತನ್ನ ಸ್ನೇಹಿತನೊಂದಿಗೆ ಬಸ್ಸಿಗಾಗಿ ಕಾಯುತ್ತಿದ್ದ ಯುವತಿಯನ್ನು, ಚಲಿಸುವ ಬಸ್ಸಿನಲ್ಲಿಯೇ ಆರು ಜನ ಕಾಮುಕರು ಮನಸೋ ಇಚ್ಛೆ ಹಲ್ಲೆ ಮಾಡಿ, ಅತ್ಯಾಚಾರ ಎಸಗಿದ್ದರು. ಕ್ರೂರಾತಿ ಕ್ರೂರ ಅತ್ಯಾಚಾರ ಪ್ರಕರಣಗಳಲ್ಲಿ ಒಂದಾಗಿ ಇದು ರಾಜಧಾನಿ ದೆಹಲಿಗೆ 'ರೇಪ್ ಕ್ಯಾಪಿಟಲ್' ಎಂಬ ಕುಖ್ಯಾತಿಯನ್ನು ಕೊಟ್ಟಿತ್ತು.

ಅತ್ಯಾಚಾರ ಎಸಗಿದ್ದಲ್ಲದೆ, ಯುವತಿಯ ಮೇಲೆ ಕಬ್ಬಿಣದ ರಾಡ್ ಮೂಲಕ ಹಲ್ಲೆ ನಡೆಸಲಾಗಿತ್ತು. ಪವಾಡಸದೃಶವಾಗಿ ಬದುಕುಳಿದಿದ್ದ ಆಕೆಯನ್ನು ಕಂಡ ವೈದ್ಯರೇ ದಿಗ್ಭ್ರಮೆಯಾಗಿದ್ದರು. ನಮ್ಮ ವೃತ್ತಿ ಬದುಕಿನಲ್ಲಿ ಒಬ್ಬ ವ್ಯಕ್ತಿಯ ದೇಹದ ಮೇಲೆ ಈ ಪರಿ ಕ್ರೂರಾತಿಕ್ರೂರ ಹಲ್ಲೆ ನಡೆದಿದ್ದನ್ನು ನೋಡಿಯೇ ಇರಲಿಲ್ಲ ಎಂದು ಸ್ವತಃ ವೈದ್ಯೇ ಕಣ್ಣೀರಿಟ್ಟಿದ್ದರು! ಹಾಗಿತ್ತು ಆಕೆಯ ಪರಿಸ್ಥಿತಿ. ಕೆಲ ದಿನ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ಆಕೆ ಇಹಲೋಕ ತ್ಯಜಿಸಿದ್ದಳು.

ನಿರ್ಭಯಾ ಪ್ರಕರಣ ನಡೆದು ಬಂದ ಹಾದಿ

ಆರು ಆರೋಪಿಗಳನ್ನು ಬಂಧಿಸಿ, ತನಿಖೆ ನಡೆಸಿ, ಆರೋಪವನ್ನು ಸಾಬೀತುಪಡಿಸಲಾಗಿತ್ತು. ಇವರಲ್ಲಿ ನಾಲ್ವರಿಗೆ ಸುಪ್ರೀಂ ಗಲ್ಲು ಶಿಕ್ಷೆ ವಿಧಿಸಿದೆ. ಅವರಲ್ಲಿ ಒಬ್ಬ ಆರೋಪಿ ಮೊಹ್ಮದ್ ಅಫ್ರೋಜ್ ಬಾಲಾಪರಾಧಿ ಎಂದು ಪರಿಗಣಿಸಿ ಮೂರೇ ವರ್ಷಗಳ ಕಾಲ ಶಿಕ್ಷೆ ನೀಡಿ, ಆತನನ್ನು ಬಿಡುಗಡೆಗೊಳಿಸಲಾಗಿದೆ. ಇನ್ನೋರ್ವ ಅಪರಾಧಿ ರಾಮ್ ಸಿಂಗ್ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ. ಪವನ್ ಗುಪ್ತಾ (31), ವಿನಯ್ ಶರ್ಮಾ (25) ಮತ್ತು ಮುಕೇಶ್ (31) ಗೆ ಗಲ್ಲುಶಿಕ್ಷೆ ವಿಧಿಸಲಾಗಿದ್ದು, ಇದನ್ನು ಮರುಪರಿಶೀಲಿಸುವಂತೆ ಅರ್ಜಿ ಹಾಕಿದ್ದರು. ಆದರೆ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆಯನ್ನು ಎತ್ತಿಹಿಡಿದಿದೆ. ಅಕ್ಷಯ್ ಠಾಕೂರ್ (33) ಗಲ್ಲಿಗೆ ಕೊರಳೊಡ್ಡಲಿದ್ದು, ಇದುವರೆಗೆ ಮರುಪರಿಶೀಲನೆ ಅರ್ಜಿ ಸಲ್ಲಿಸಿಲ್ಲ.

ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಹಲವರು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಸಾರ್ವಜನಿಕವಾಗಿ ಗುಂಡಿಕ್ಕಿ ಕೊಲ್ಲಿ

ಛೆ, ಆ ಕಾಮುಕರು ತಪ್ಪಿತಸ್ಥರು ಎಂದು ತೀರ್ಮಾನಿಸುವುದಕ್ಕೆ ಐದು ವರ್ಷ ಬೇಕಾಯ್ತು! ಈಗ ಅವರು ವಯಸ್ಸಿನ ಕಾರಣ ನೀಡುತ್ತಿದ್ದಾರೆ. ಅಂಥವರನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಕೊಲ್ಲಬೇಕು. ಅದನ್ನು ಟಿವಿಯಲ್ಲಿ ನೇರಪ್ರಸಾರ ಮಾಡಬೇಕು. ಇಂಥ ಉದಾಹರಣೆಗಳಿದ್ದರೆ ಮಾತ್ರವೇ ಇಂಥ ಕೆಲಸವನ್ನು ಮಾಡಲು ಯಾರಿಗಾದರೂ ಭಯವಾಗುತ್ತದೆ ಎಂದಿದ್ದಾರೆ ಕಲ್ಪರಾಜ್.

ಆ ಕ್ರೂರ ದಿನ ನೆನಪಾದರೆ...

ನಾನು ಯಾವತ್ತಿಗೂ ಮರಣ ದಂಡನೆಯ ಪರವಲ್ಲ. ಆದರೆ ಡಿಸೆಂಬರ್ 16ರ ಆ ಕ್ರೂರಾತಿಕ್ರೂರ ದಿನ ನೆನಪಾದರೆ ಈ ದೇಶದ ಜನರ ಭಾವನೆಯೇ ಸರಿ ಎನ್ನಿಸುತ್ತದೆ. ನಾನೂ ಅವರ ಭಾವನೆಯನ್ನು ಬೆಂಬಲಿಸುತ್ತೇನೆ ಎಂದಿದ್ದಾರೆ ರಿಚಾ ಸಿಂಗ್.

ನಾಲ್ವರನ್ನಲ್ಲ, ಐವರನ್ನೂ ಗಲ್ಲಿಗೇರಿಸಿ!

ಮರಣದಂಡನೆ ಕೇವಲ ನಾಲ್ವರಿಗಲ್ಲ, ಆ ಬಾಲಾಪರಾಧಿಯನ್ನೂ ಸೇರಿಸಿ ಐವರನ್ನು ಗಲ್ಲಿಗೇರಿಸಿ ಎಂದಿದ್ದಾರೆ ಎರ್ಜಾ.

ಸುಮ್ಮನೆ ಸಮಯ ವ್ಯರ್ಥವಾಯಿತು!

ಇಂಥ ಕಾಮುಕರಿಗೆ ಮರಣದಂಡನೆಯಲ್ಲದೆ ಬೇರೆ ಶಿಕ್ಷೆ ಇಲ್ಲ. ಅದನ್ನು ಯಾವತ್ತೋ ನಿರ್ಧರಿಸಬೆಕಿತ್ತು. ಇಷ್ಟು ದಿನ ಸಮಯ ವ್ಯರ್ಥಮಾಡುವ ಅಗತ್ಯವಿರಲಿಲ್ಲ ಎಂದಿದ್ದಾರೆ ನಿವೇದಿತಾ ಮಿಶ್ರಾ.

ನ್ಯಾಯಾಂಗದಲ್ಲಿ ಉತ್ತಮ ಕಾರ್ಯವಾಗಿದೆ

ನ್ಯಾಯಾಂಗದಲ್ಲಿ ಕೊನೆಗೂ ಒಂದು ಒಳ್ಳೆಯ ಕೆಲಸವಾಗಿದೆ ಎಂದು ನಿರ್ಭಯಾ ಪ್ರಕರಣದ ತೀರ್ಪನ್ನು ಸ್ವಾಗತಿಸಿದ್ದಾರೆ ಅಭಿಷೇಕ್ ಪಾಠಕ್.

ಈಗ ನಿರ್ಭಯಾ ಆತ್ಮಕ್ಕೆ ಶಾಂತಿ ಸಿಕ್ಕಿದೆ!

ಈಗ ನಿರ್ಭಯಾ ಆತ್ಮಕ್ಕೆ ಶಾಂತಿ ದೊರಕಿದೆ ಎಂದು ಭಾವಿಸುತ್ತೇನೆ. ಆದರೆ ಆ ತಥಾಕಥಿತ 'ಬಾಲಾಪರಾಧಿ' ಮಾತ್ರ ಅರಾಮಾಗಿ ಓಡಾಡಿಕೊಂಡಿದ್ದಾನೆ. ಆತ ನಿಜಕ್ಕೂ ಅಪ್ರಾಪ್ತನಲ್ಲ, ಆತನಿಗೆ ಮರಣದಂಡನೆಯಾಗಬೇಕು ಎಂದಿದ್ದಾರೆ ಪ್ರಿಯಾ ವರ್ಮಾ.

ತಕ್ಷಣ ಗಲ್ಲಿಗೇರಿಸಿ

ಸುಪ್ರೀಂ ಕೋರ್ಟ್ ಈ ಗಲ್ಲುಶಿಕ್ಷೆಯನ್ನು ಎತ್ತಿಹಿಡಿದಿದ್ದು ಸ್ವಾಗತಾರ್ಹ. ಯಾವುದೇ ವಿಳಂಬವಿಲ್ಲದೆ ತಕ್ಷಣವೇ ಇವರನ್ನು ಗಲ್ಲಿಗೇರಿಸಿ ಎಂದಿದ್ದಾರೆ ಶಕ್ತಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Supreme Court today(July 09)upholds death sentence to the three convicts in the brutal 'Nirbhaya' rape case. Three were applied review petition against SC's verdict.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more