ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ನಾಟಕ ಶುರು ಹಚ್ಚಿದ ನಿರ್ಭಯಾ ಅತ್ಯಾಚಾರಿ!

|
Google Oneindia Kannada News

ನವದೆಹಲಿ, ಡಿಸೆಂಬರ್ 8; ದೇಶದಲ್ಲಿ ದಿಶಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನಂತರ, ದೆಹಲಿಯ ನಿರ್ಭಯಾ ಅತ್ಯಾಚಾರ ಆರೋಪಿಗಳಿಗೆ ಶಿಕ್ಷೆ ಯಾವಾಗ? ಎಂದು ಜನ ವಿಚಾರ ಮಾಡುತ್ತಿದ್ದರೆ, ಶಿಕ್ಷೆಗೆ ಗುರಿಯಾಗಿರುವ ಪ್ರಮುಖ ಆರೋಪಿ ವಿನಯ ಶರ್ಮಾ ಗಲ್ಲು ಶಿಕ್ಷೆ ಮುಂದೂಡಲು ಅಥವಾ ತಪ್ಪಿಸಿಕೊಳ್ಳಲು ಹೊಸ ತಂತ್ರದ ಮೊರೆ ಹೋಗಿದ್ದಾನೆ.

ಹೌದು, ವಿನಯ ಶರ್ಮಾಗೆ ಈಗಾಗಲೇ ಗಲ್ಲು ಶಿಕ್ಷೆ ಜಾರಿಯಾಗಿದೆ. ಅವನ ಕ್ಷಮಾಪಣೆ ಅರ್ಜಿಯನ್ನು ರಾಷ್ಟ್ರಪತಿಗೆ ಕಳಿಸಲಾಗಿತ್ತು. ಆದರೆ, ವಿನಯ ಶರ್ಮಾ, ನಾನು ರಾಷ್ಟ್ರಪತಿಗೆ ಕ್ಷಮಾಪಣೆಯನ್ನೇ ಕಳಿಸಿಲ್ಲ ಎಂದು ಉಲ್ಟಾ ಹೊಡೆದಿದ್ದಾನೆ. ಈಗ ಬಂದಿರುವ ಅರ್ಜಿಗಳನ್ನು ರಾಷ್ಟ್ರಪತಿಗಳು ತಿರಸ್ಕರಿಸಬೇಕು. ಒಪ್ಪಿಕೊಳ್ಳಬಾರದು. ದಿಲ್ಲಿ ಸರ್ಕಾರ ಹಾಗೂ ತಿಹಾರ್ ಜೈಲು ಅಧಿಕಾರಿಗಳು ಷ್ಯಡ್ಯಂತ್ರ ಮಾಡಿ ನನ್ನ ಸಹಿಯನ್ನು ನಕಲು ಮಾಡಿ ಅರ್ಜಿ ಸಲ್ಲಿಸಿವೆ. ಅದಕ್ಕೆ ನನ್ನ ಒಪ್ಪಿಗೆ ಇರಲಿಲ್ಲ ಎಂದು ರಾಷ್ಟ್ರಪತಿಯವರಿಗೆ ಪತ್ರ ಬರೆದಿದ್ದಾನೆ.

ಗಲ್ಲು ಮುಂದೂಡುವ ತಂತ್ರ?

ಗಲ್ಲು ಮುಂದೂಡುವ ತಂತ್ರ?

ಇತ್ತೀಚೆಗೆ ವಿನಯ ಶರ್ಮಾನ ಕ್ಷಮಾಧಾನ ಅರ್ಜಿಯನ್ನು ದೆಹಲಿ ಸರ್ಕಾರ ಹಾಗೂ ಕೇಂದ್ರ ಸರ್ಕಾರ ತಿರಸ್ಕರಿಸಿ ಮುಂದಿನ ಕ್ರಮ ಕೈಗೊಳ್ಳಲು ರಾಷ್ಟ್ರಪತಿಯವರಿಗೆ ಬಿಟ್ಟಿದ್ದರು. ಆದರೆ, ರಾಷ್ಟ್ರಪತಿಗಳು ಹತ್ಯಾಚಾರಿಗಳಿಗೆ ಕ್ಷಮೆ ಇಲ್ಲ ಎಂದು ಘೋಷಿಸಿದರು. ಹೀಗಾಗಿ ವಿನಯ ಶರ್ಮಾ ಹೊಸ ನಾಟಕವನ್ನು ಶರು ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ.

'ನಿರ್ಭಯಾ ಅತ್ಯಾಚಾರಿಗಳನ್ನು ಎನ್‌ಕೌಂಟರ್ ಮಾಡುವ ಆಲೋಚನೆಯೇ ನಮಗೆ ಬಂದಿರಲಿಲ್ಲ''ನಿರ್ಭಯಾ ಅತ್ಯಾಚಾರಿಗಳನ್ನು ಎನ್‌ಕೌಂಟರ್ ಮಾಡುವ ಆಲೋಚನೆಯೇ ನಮಗೆ ಬಂದಿರಲಿಲ್ಲ'

ಏಕೆ ಹೊಸ ನಾಟಕ?

ಏಕೆ ಹೊಸ ನಾಟಕ?

ಬಂಧನಕ್ಕೊಳಗಾಗಿ ಗಲ್ಲು ಶಿಕ್ಷೆ ಜಾರಿಯಾದಾಗಿನಿಂದ ಕ್ಷಮಾಧಾನಕ್ಕೆ ನಿರ್ಭಯಾ ಅಪರಾಧಿಗಳು ಸಾಕಷ್ಟು ಪ್ರಯತ್ನವನ್ನು ನಡೆಸುತ್ತಲೇ ಬಂದಿದ್ದಾರೆ. ಆದರೆ, ಇಡೀ ದೇಶವನ್ನು ಬೆಚ್ಚಿ ಬಿಳ್ಳಿಸಿದ ನಿರ್ಭಯಾ ಪ್ರಕರಣದಲ್ಲಿ ಕ್ಷಮೆ ಎಂಬುದು ತಮಗೆ ಇಲ್ಲ ಎಂಬುದು ಅಪರಾಧಿಗಳಿಗೆ ಖಾತ್ರಿಯಾಗಿದೆ. ಹೀಗಾಗಿ ಗಲ್ಲು ಶಿಕ್ಷೆಯನ್ನು ತಪ್ಪಿಸಿಕೊಳ್ಳದಿದ್ದರೂ ಪರವಾಗಿಲ್ಲ, ಗಲ್ಲು ಶಿಕ್ಷೆಯನ್ನು ಮುಂದೂಡಬಹುದಲ್ಲಾ ಎಂದು ಶರ್ಮಾ ಈ ರೀತಿ ನಾಟಕ ಮಾಡುತ್ತಿದ್ದಾನೆ ಎಂದು ಕಾನೂನು ಪಂಡಿತರು ಹೇಳಿದ್ದಾರೆ.

ಇನ್ನೂ ಇದೆಯಂತೆ ಕಾನೂನು ಹೋರಾಟ!

ಇನ್ನೂ ಇದೆಯಂತೆ ಕಾನೂನು ಹೋರಾಟ!

ವಿನಯ ಶರ್ಮಾ ಎಷ್ಟು ಚಾಲಾಕಿ ಎಂದರೆ, ಇದೀಗ ರಾಷ್ಟ್ಪತಿಗೆ ಸಲ್ಲಿಸಿದ ಅರ್ಜಿ ಸುಳ್ಳು ಎಂದು, ರಾಷ್ಟ್ರಪತಿಗಳಿಗೇ ಪತ್ರ ಬರೆದು, ತಾನು ಮುಂದೇನು ಮಾಡಲಿದ್ದೇನೆ ಎಂಬುದನ್ನು ಹೇಳಿದ್ದಾನೆ. ಗಲ್ಲು ಶಿಕ್ಷೆಯ ಕೋರ್ಟ ತೀರ್ಪಿನ ವಿರುದ್ಧ ಹೋರಾಟ ಮಾಡಲು ನನಗೆ ಕಾನೂನಿನಲ್ಲಿ ಇನ್ನೂ ಅವಕಾಶಗಳಿವೆ. ನಾನು ಕೋರ್ಟ ತಿರ್ಪಿನ ವಿರುದ್ಧ ಕ್ಯುರೇಟಿವ್ ಅರ್ಜಿ ಸಲ್ಲಿಸಬೇಕು. ಅದಕ್ಕೆ ಇನ್ನೂ ಸಮಯವಿದೆ. ಇಂತಹ ಎಲ್ಲ ಆಯ್ಕೆಗಳು ನನ್ನ ಮುಂದೆ ಇದ್ದಾವೆ. ಹೀಗಾಗಿ ರಾಷ್ಟ್ರಪತಿಯವರು ತಿಹಾರ್ ಜೈಲಿನ ನಕಲಿ ಅರ್ಜಿಯನ್ನು ವಜಾ ಮಾಡಬೇಕು ಎಂದು ಪತ್ರದಲ್ಲಿ ಕೇಳಿಕೊಂಡಿದ್ದಾನೆ. ಒಂದು ವೇಳೆ ರಾಷ್ಟ್ರಪತಿಯವರು ವಿನಯ ನ ಅರ್ಜಿಯನ್ನ ಪರಿಗಣಿಸಿದರೇ ನಿರ್ಭಯಾ ಹಂತಕರಿಗೆ ಗಲ್ಲು ಆಗುವುದು ಮತ್ತೆ ಮುಂದೆ ಹೋಗಲಿದೆ.

ನಿರ್ಭಯಾ ಅತ್ಯಾಚಾರಿಗಳಿಗೆ ಕ್ಷಮಾದಾನ ನೀಡಲ್ಲ ಎಂದ ರಾಷ್ಟ್ರಪತಿನಿರ್ಭಯಾ ಅತ್ಯಾಚಾರಿಗಳಿಗೆ ಕ್ಷಮಾದಾನ ನೀಡಲ್ಲ ಎಂದ ರಾಷ್ಟ್ರಪತಿ

ಏನಿದು ಪ್ರಕರಣ?

ಏನಿದು ಪ್ರಕರಣ?

ಡಿಸೆಂಬರ್ 16, 2012 ರಂದು ನಡುರಾತ್ರಿಯಲ್ಲಿ ದೆಹಲಿಯಲ್ಲಿ ಮುಖೇಶ್ ಸಿಂಗ್, ವಿನಯ ಶರ್ಮಾ, ಮಹಮ್ಮದ್ ಅಪ್ರೋಜ್, ಪವನ್ ಗುಪ್ತಾ ಹಾಗೂ ಅಕ್ಷಯ್ ಠಾಕೂರ್ ಎನ್ನುವರು ನಿರ್ಭಯಾಳನ್ನು ಅಪಹರಿಸಿ ಬಸ್‌ ನಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿದ್ದರು. ನಿರ್ಭಯಾ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಳು. ಇದರ ವಿರುದ್ಧ ದೇಶದ್ಯಾಂತ ಭಾರೀ ಪ್ರತಿಭಟನೆಗಳು ಜರುಗಿ, ನಾಲ್ವರಿಗೆ ಗಲ್ಲು ಶಿಕ್ಷೆಯಾಗಿತ್ತು. ಒಬ್ಬ ಬಾಲಾಪರಾಧಿ ಬಿಡುಗಡೆಯಾಗಿದ್ದ. ಮುಕೇಶ್ ಸಿಂಗ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನೂ ಮೂವರು ಸದ್ಯ ತಿಹಾರ್ ಜೈಲಿನಲ್ಲಿದ್ದಾರೆ.

English summary
Nirbhaya Rape Convict Vvinay Sharma Demands Withdrawal OF Mercy Petition, he told i never sign mercy application.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X