ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರ್ಭಯಾ ಅಪರಾಧಿ ತಾಯಿಗೆ ಮಗನ ಮೇಲಿರುವ ಕೊನೆಯ ಆಸೆ ಏನು?

|
Google Oneindia Kannada News

ನವದೆಹಲಿ, ಮಾರ್ಚ್ 19: ನಿರ್ಭಯಾ ಕೊಲೆ, ಅತ್ಯಾಚಾರದಲ್ಲಿ ಅಪರಾಧಿಯಾಗಿದ್ದು ನಾಳೆ ಗಲ್ಲಿಗೇರುತ್ತಿರುವ ವಿನಯ್ ಶರ್ಮಾ ತಾಯಿ ತನ್ನ ಕೊನೆಯ ಆಸೆ ಏನೆಂಬುದನ್ನು ಹೇಳಿಕೊಂಡಿದ್ದಾರೆ.

ಇನ್ನು ಕೆಲವೇ ಗಂಟೆಗಳಲ್ಲಿ ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲುಗಂಬಕ್ಕೇರಿಸಲಾಗುತ್ತದೆ. ಕೊನೆಯದಾಗಿ ಮಗನಿಗೆ ಇಷ್ಟವಾದ ಪೂರಿ, ಅಬ್ಜಿ, ಕಚೋರಿಯನ್ನು ತಿನ್ನಿಸಬೇಕು ಎಂದು ಹೇಳಿದ್ದಾಳೆ.

ನಿರ್ಭಯಾ ಅತ್ಯಾಚಾರ: ಕ್ಷಮಾದಾನದ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ ನಿರ್ಭಯಾ ಅತ್ಯಾಚಾರ: ಕ್ಷಮಾದಾನದ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ

ಕೆಲವೇ ಗಂಟೆಗಳಲ್ಲಿ ನನ್ನ ಮಗ ಇರುವುದಿಲ್ಲ, ಶೀಘ್ರ ಆಹಾರವನ್ನು ತೆಗೆದುಕೊಂಡು ಜೈಲಿಗೆ ಹೋಗುತ್ತೇನೆ. ವಿನಯ್ ಶರ್ಮಾ ಜೊತೆಗೆ ಮುಖೇಶ್ ಸಿಂಗ್, ಪವನ್ ಗುಪ್ತಾ, ಅಕ್ಷಯ್ ಕುಮಾರ್ ಸಿಂಗ್ ನನ್ನು ಗಲ್ಲಿಗೇರಿಸಲಾಗುತ್ತಿದೆ.

ಘಟನೆ ನಡೆದು ಏಳು ವರ್ಷ ಮೂರು ತಿಂಗಳ ಬಳಿಕ ಶಿಕ್ಷೆ

ಘಟನೆ ನಡೆದು ಏಳು ವರ್ಷ ಮೂರು ತಿಂಗಳ ಬಳಿಕ ಶಿಕ್ಷೆ

2012 ಡಿಸೆಂಬರ್ 16 ರಂದು ದೆಹಲಿಯ ಬಸ್‌ ಒಂದರಲ್ಲಿ ವಿನಯ್ ಶರ್ಮಾ ಸೇರಿದಂತೆ ಇನ್ನೂ ನಾಲ್ವರು ಸೇರಿ ಯುವತಿಯೊಬ್ಬಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ. ಘಟನೆ ನಡೆದು ಏಳು ವರ್ಷಗಳ ಬಳಿಕ ಅಪರಾಧಿಗಳಿಗೆ ಶಿಕ್ಷ ದೊರೆಯುತ್ತಿದೆ.

ಕ್ಷಮಾಧಾನ ಅರ್ಜಿಯನ್ನು ರಾಷ್ಟ್ರಪತಿ ತಿರಸ್ಕರಿಸಿದ್ದರು

ಕ್ಷಮಾಧಾನ ಅರ್ಜಿಯನ್ನು ರಾಷ್ಟ್ರಪತಿ ತಿರಸ್ಕರಿಸಿದ್ದರು

ದೆಹಲಿ ಹೈಕೋರ್ಟ್ ವಿನಯ್ ಶರ್ಮನ ಅರ್ಜಿಯನ್ನು ತಿರಸ್ಕರಿಸಿದ ಬಳಿಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೂಡ ಕ್ಷಮಾಧಾನ ಅರ್ಜಿಯನ್ನು ತಿರಸ್ಕರಿಸಿದ್ದರು.

ನಾನು ವಿನಯ್ ಶರ್ಮಾ ತಾಯಿ ಅಷ್ಟೇ

ನಾನು ವಿನಯ್ ಶರ್ಮಾ ತಾಯಿ ಅಷ್ಟೇ

ನಾನು ನನ್ನ ಹೆಸರನ್ನು ಹೇಳುವುದಿಲ್ಲ ನಾನು ವಿನಯ್ ಶರ್ಮಾ ತಾಯಿ ಅಷ್ಟೇ. ನೀವ್ಯಾರು, ನಿಮಗೆ ಏನು ಬೇಕು ಮನೆಯೊಳಗೆ ಯಾರೂ ಇಲ್ಲ, ನನ್ನ ಗಂಡ ಮನೆಯಿಂದ ಹೊರಗೆ ಹೋಗಿದ್ದಾರೆ.. ಇದು ವಿನಯ್ ಶರ್ಮಾ ತಾಯಿ ಆಡಿರುವ ಮಾತುಗಳು.

ಸಾವು, ಬದುಕು ದೇವರು ತೀರ್ಮಾನಿಸುತ್ತಾನೆ

ಸಾವು, ಬದುಕು ದೇವರು ತೀರ್ಮಾನಿಸುತ್ತಾನೆ

ಎಲ್ಲವೂ ದೇವರ ತೀರ್ಮಾನ, ಈಗ ಕೊರೊನಾ ವೈರಸ್‌ನ್ನೇ ನೋಡಿ ಯಾವುದೂ ನಮ್ಮ ಕೈಯಲ್ಲಿಲ್ಲ, ಯಾರು ಬದುಕಬೇಕು ಯಾರು ಸಾಯಬೇಕು ಎಂದು ದೇವರೇ ತೀರ್ಮಾನಿಸುತ್ತಾನೆ ಎಂದು ಶರ್ಮಾ ತಾಯಿ ಹೇಳಿದ್ದಾರೆ.

ಜೈಲಿನಲ್ಲಿ ಎಂದೂ ಊಟ ಕೊಡಲು ಬಿಡಲಿಲ್ಲ

ಜೈಲಿನಲ್ಲಿ ಎಂದೂ ಊಟ ಕೊಡಲು ಬಿಡಲಿಲ್ಲ

ಇಷ್ಟು ವರ್ಷ ನನ್ನ ಮಗ ತಿಹಾರ್ ಜೈಲಿನಲ್ಲಿದ್ದರೂ ಜೈಲಿನೊಳಗೆ ಊಟ ಕೊಡಲು ಬಿಟ್ಟಿರಲಿಲ್ಲ. ಆದರೆ ಈಗ ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗಾಗಿ ಪೂರಿ, ಸಬ್ಜಿ, ಕಚೋರಿಯನ್ನು ತೆಗೆದುಕೊಂಡು ಹೋಗುತ್ತೇನೆ.

English summary
What Are the Nirbhaya Convicts Mothers last wish For His Son here is the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X