• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಿರ್ಭಯಾ ಹಂತಕರಿಗೆ ಗಲ್ಲು, ಹ್ಯಾಂಗ್ ಮನ್ ಪವನ್‌ಗೆ ಎಷ್ಟು ಸಿಗುತ್ತೆ?

|

ನವದೆಹಲಿ, ಮಾರ್ಚ್ 18: ನಿರ್ಭಯಾ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಿದ ಹ್ಯಾಂಗ್ ಮ್ಯಾನ್ ಪವನ್ ಜಲ್ಲಾದ್ ಅವರಿಗೆ ಎಷ್ಟು ಸಂಭಾವನೆ ಸಿಗಲಿದೆ ಎಂಬ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಈ ಮುಂಚೆ ಬಹಿರಂಗಗೊಂಡಿದ್ದ ಸಂಭಾವನೆ ಮೊತ್ತಕ್ಕಿಂತ ಕಡಿಮೆ ಮೊತ್ತವನ್ನು ಪವನ್ ಪಡೆಯಲಿದ್ದಾರೆ. ಮಾರ್ಚ್ 20ರಂದು ಬೆಳಗ್ಗೆ 5.30ರ ವೇಳೆಗೆ ಹಂತಕರನ್ನು ನೇಣಿಗೇರಿಸಲಾಗಿದೆ.

ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸುವುದರಿಂದ ಒಬ್ಬರಿಗೆ ತಲಾ 25 ಸಾವಿರ ರು ನಂತೆ ಒಟ್ಟಾರೆ 1 ಲಕ್ಷ ರು ಸಿಗಲಿದೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ಈ ಮುಂಚೆ ತಿಳಿಸಿದ್ದರು. ಆದರೆ, ಈಗ ತಲಾ 20 ಸಾವಿರ ರು ನಂತೆ 80 ಸಾವಿರ ರು ಮಾತ್ರ ಸಿಗಲಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ನಿರ್ಭಯಾ ಕೇಸ್ : ಹ್ಯಾಂಗ್ ಮ್ಯಾನ್ ಪವನ್ ಸಂಭಾವನೆ ಮೊತ್ತ ಬಹಿರಂಗ

ಕಾನೂನು ತಜ್ಞರ ಪ್ರಕಾರ, ಅಪರಾಧಿಗಳು ಎಲ್ಲಾ ಸಾಧ್ಯವಿರುವ ಕಾನೂನು ಪರಿಹಾರಗಳನ್ನು ಬಳಸಿಯಾಗಿದ್ದು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಅಂತಿಮ ಪ್ರಯತ್ನವೆಂಬಂತೆ ಮೊರೆ ಹೊಕ್ಕಿದ್ದಾರೆ. ಆದರೆ, ಇದರಿಂದ ನೇಣು ಹಾಕುವ ಪ್ರಕ್ರಿಯೆ ಮುಂದೂಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ನೇಣಿಗೇರಿಸುವ ಪ್ರಕ್ರಿಯೆ ನನಗೆ ಹೊಸದೇನಲ್ಲ

ನೇಣಿಗೇರಿಸುವ ಪ್ರಕ್ರಿಯೆ ನನಗೆ ಹೊಸದೇನಲ್ಲ

"ನೇಣಿಗೇರಿಸುವ ಪ್ರಕ್ರಿಯೆ ನನಗೆ ಹೊಸದೇನಲ್ಲ, ಆದರೆ ಕುಣಿಕೆ ಮತ್ತು ನೇಣಿಗೇರಿಸುವ ಸ್ಥಳ ಪರಿಶೀಲಿಸಬೇಕು. ಅಪರಾಧಿಗಳ ದೇಹದ ಅಳತೆಯನ್ನು ನೋಡಬೇಕು, 8 ಮನಿಲಾ ಹಗ್ಗಗಳನ್ನು ತಂದಿಟ್ಟುಕೊಂಡು ಪರೀಕ್ಷಿಸಲಾಗಿದೆ. ನಾಲ್ಕು ನೇಣಿಗೆ ಬಳಸಿದರೆ, ಮಿಕ್ಕ ನಾಲ್ಕು ಹಗ್ಗಗಳನ್ನು ಸ್ಟ್ಯಾಂಡ್ ಬೈಯಾಗಿ ಇರಿಸಿಕೊಳ್ಳಲಾಗಿದೆ. ಅಣಕು ನೇಣು ಹಾಕುವ ಪರೀಕ್ಷೆ ಈಗಾಗಲೇ ನಡೆಸಲಾಗಿದೆ. ತಿಹಾರ್ ಜೈಲಿನ ಅಧಿಕಾರಿಗಳಿಂದ ಸೂಚನೆಯಂತೆ ಎಲ್ಲವೂ ನಡೆದಿದೆ"ಎಂದು ಹ್ಯಾಂಗ್ ಮನ್ ಪವನ್ ಜಲ್ಲಾದ್ ತಿಳಿಸಿದ್ದಾರೆ.

ಡೆತ್ ವಾರೆಂಟ್ ನೀಡಿರುವ ನ್ಯಾಯಾಲಯ

ಡೆತ್ ವಾರೆಂಟ್ ನೀಡಿರುವ ನ್ಯಾಯಾಲಯ

ಹೆಚ್ಚುವರಿ ಸೆಷನ್ಸ್ ಜಡ್ಜ್ ಸತೀಶ್ ಕುಮಾರ್ ಅರೋರಾ ಅವರು ತಿಹಾರ್ ಜೈಲಿನ ಮುಖ್ಯ ಅಧಿಕಾರಿಗೆ ಬ್ಲ್ಯಾಕ್ ವಾರೆಂಟ್ ಎಂದು ಕೂಡಾ ಕರೆಯಲ್ಪಡುವ ಡೆತ್ ವಾರೆಂಟ್ ಪ್ರತಿ ಕಳಿಸಿದ್ದಾರೆ. ನಿರ್ಭಯಾ ಪ್ರಕರಣದ ಅಪರಾಧಿಗಳಾದ ಮುಕೇಶ್ (32), ಪವನ್ ಗುಪ್ತಾ(25), ವಿನಯ್ ಶರ್ಮ (26) ಹಾಗೂ ಅಕ್ಷಯ್ ಕುಮಾರ್ ಸಿಂಗ್ (31) ಅವರ ವಿರುದ್ಧ ಹೊಸದಾಗಿ ಡೆತ್ ವಾರೆಂಟ್ ಜಾರಿಯಾಗಿದೆ.

23 ವರ್ಷ ವಯಸ್ಸಿನ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ

23 ವರ್ಷ ವಯಸ್ಸಿನ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ

23 ವರ್ಷ ವಯಸ್ಸಿನ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ 2012ರ ಡಿಸೆಂಬರ್ 16 ರಾತ್ರಿ ವೇಳೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಅತಿ ಕ್ರೂರವಾಗಿ ನಡೆದ ಈ ಅತ್ಯಾಚಾರದಿಂದ ನಿತ್ರಾಣವಾಗಿ ರಸ್ತೆಯಲ್ಲಿ ಬಿದ್ದಿದ್ದ ನಿರ್ಭಯಾಗೆ ಹೆಚ್ಚಿನ ವೈದ್ಯಕೀಯ ನೆರವು ಸಿಕ್ಕಿ, ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 29, 2012ರಂದು ಆಕೆ ಕೊನೆಯುಸಿರೆಳೆದಿದ್ದರು.

ಈ ಪ್ರಕರಣದಲ್ಲಿ 6 ಮಂದಿ ಅಪರಾಧಿಗಳು

ಈ ಪ್ರಕರಣದಲ್ಲಿ 6 ಮಂದಿ ಅಪರಾಧಿಗಳು

ಈ ಪ್ರಕರಣದಲ್ಲಿ ಒಟ್ಟು 6 ಮಂದಿಯನ್ನು ಆರೋಪಿಯನ್ನು ಗುರುತಿಸಿ ಬಂಧಿಸಲಾಗಿತ್ತು. ಆರೋಪಿಗಳ ಪೈಕಿ ಒಬ್ಬ ಜೈಲಿನಲ್ಲೇ ಆತ್ಯಹತ್ಯೆ ಮಾಡಿಕೊಂಡಿದ್ದಾನೆ. ಮತ್ತೊಬ್ಬ ಬಾಲಾಪರಾಧಿಯಾಗಿ ಮೂರು ವರ್ಷಗಳ ಕಾಲ ಶಿಕ್ಷೆ ಅನುಭವಿಸಿದ್ದಾನೆ. ಈಗ ಮಿಕ್ಕ ನಾಲ್ವರು ಅಪರಾಧಿಗಳೆಂದು ಸಾಬೀತಾಗಿದ್ದು, ಅಪರಾಧಿಗಳಿಗೆ ನೇಣು ಕುಣಿಕೆ ಸಿದ್ಧವಾಗಿದೆ.

ನಾಲ್ಕನೆ ಬಾರಿ ತಿಹಾರ್ ಜೈಲಿಗೆ ಪವನ್

ನಾಲ್ಕನೆ ಬಾರಿ ತಿಹಾರ್ ಜೈಲಿಗೆ ಪವನ್

"ಡಿಸೆಂಬರ್ ತಿಂಗಳಲ್ಲಿ ಪವನ್ ಜಲ್ಲಾದ್ ಗೆ ಸಿದ್ಧರಾಗಿರುವಂತೆ ತಿಹಾರ್ ಜೈಲಿನಿಂದ ಸೂಚನೆ ಬಂದಿತ್ತು. ಇದಾದ ಬಳಿಕ ಈಗ ನಾಲ್ಕನೆ ಬಾರಿಗೆ ಸೂಚನೆ ಬಂದಿದೆ. ದೆಹಲಿ ಹೈಕೋರ್ಟಿನ ಡೆತ್ ವಾರೆಂಟ್ ಆಧಾರದ ಮೇಲೆ ತಿಹಾರ್ ಜೈಲಿನಿಂದ ಕರೆ ಬಂದಿದ್ದು, ಪವನ್ ಅಲ್ಲಿಗೆ ತೆರಳಲಿದ್ದಾರೆ" ಎಂದು ಮೀರತ್ ಜೈಲಿನ ಎಸ್ಪಿ ವಿ.ಪಿ ಪಾಂಡೆ ಪ್ರತಿಕ್ರಿಯಿಸಿದ್ದಾರೆ.

English summary
The jail authorities have procured 8 sets of Manila ropes. While four of them would be used the rest are being kept on standby. The gallows for the dummy hangings have already been readied and the hangman Pawan is all geared up for the D-Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X