ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರ್ಭಯಾ ಆರೋಪಿ ಪವನ್‌ಗುಪ್ತಾ ಕ್ಷಮಾಧಾನ ಕೋರಿ ರಾಷ್ಟ್ರಪತಿಗೆ ಅರ್ಜಿ

|
Google Oneindia Kannada News

ನವದೆಹಲಿ, ಮಾರ್ಚ್ 2: ಕ್ಷಮಾಧಾನಕೋರಿ ನಿರ್ಭಯಾ ಅಪರಾಧಿ ಪವನ್‌ಗುಪ್ತಾ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ್ದಾರೆ.

ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅಪರಾಧಿಗಳು ದಿನಕ್ಕೊಂದು ಹೈಡ್ರಾಮಾ ಮಾಡುತ್ತಿದ್ದು, ಇದೀಗ ಪ್ರಕರಣದ ಮತ್ತೋರ್ವ ಅಪರಾಧಿ ಪವನ್ ಗುಪ್ತಾ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ನಿರ್ಭಯ ಅಪರಾಧಿಗಳಿಗೆ ಮಾ.3ರಂದು ಗಲ್ಲು ಜಾರಿ ಇಲ್ಲ? ನಿರ್ಭಯ ಅಪರಾಧಿಗಳಿಗೆ ಮಾ.3ರಂದು ಗಲ್ಲು ಜಾರಿ ಇಲ್ಲ?

ಈ ಕುರಿತಂತೆ ಅಪರಾಧಿ ಪವನ್ ಗುಪ್ತಾ ಪರ ವಕೀಲ ಎಪಿ ಸಿಂಗ್ ಅವರು ಇಂದು ದೆಹಲಿಯ ಪಾಟಿಯಾಲಾ ಕೋರ್ಟ್ ಗೆ ಮಾಹಿತಿ ನೀಡಿದ್ದು, ತಮ್ಮ ಕಕ್ಷೀದಾರ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಈ ಅರ್ಜಿಯ ಇತ್ಯರ್ಥವಾಗುವವರೆಗೂ ಗಲ್ಲು ಶಿಕ್ಷೆಜಾರಿ ಮುಂದೂಡುವಂತೆ ಮನವಿ ಮಾಡಿದ್ದರು.

Nirbhaya Case Convict Pawan Gupta Files Mercy Petition

ಪವನ್ ಗುಪ್ತಾ ಸಲ್ಲಿಸಿದ್ದ ಈ ಕ್ಯುರೇಟಿವ್ ಅರ್ಜಿಯನ್ನು ಸೆಷನ್ಸ್ ಕೋರ್ಟ್ ನ ಹೆಚ್ಚುವರಿ ನ್ಯಾಯಾಧೀಶರಾದ ಧರ್ಮೇಂದ್ರ ರಾಣಾ ಅವರು ವಜಾಗೊಳಿಸಿದ್ದಾರೆ. ಈ ಹಿಂದೆ ಪ್ರಕರಣದ ಮತ್ತಿಬ್ಬರು ಆರೋಪಿಗಳಾದ ಅಕ್ಷಯ್ ಕುಮಾರ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನೂ ವಜಾಗೊಳಿಸಲಾಗಿತ್ತು.

ಪ್ರಕರಣ ನಡೆದಾಗ ಪವನ್ ಗುಪ್ತಾ ಅಪ್ರಾಪ್ತ: 2012ರಲ್ಲಿ ಈ ಪ್ರಕರಣ ನಡೆದಾಗ ಪವನ್ ಗುಪ್ತಾ ಅಪ್ರಾಪ್ತನಾಗಿದ್ದ. ಈ ಅಂಶವನ್ನು ಪರಿಗಣಿಸದೇ ಕೋರ್ಟ್ ಗಲ್ಲು ಶಿಕ್ಷೆ ಜಾರಿ ಮಾಡಿತ್ತು.

ಹೀಗಾಗಿ ಇದೀಗ ಈ ಎಲ್ಲ ಅಂಶಗಳನ್ನು ಸೇರಿಸಿ ರಾಷ್ಟ್ರಪತಿಗಳ ಮುಂದೆ ಕ್ಷಮಾದಾನ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಹೀಗಾಗಿ ಗಲ್ಲು ಶಿಕ್ಷೆಗೆ ತಡೆ ನೀಡಬೇಕು ಎಂದು ವಕೀಲ ಎಪಿ ಸಿಂಗ್ ಹೇಳಿದ್ದಾರೆ.

English summary
The Supreme Court today dismissed a curative petition by Pawan Gupta, one of the four convicts in the gang-rape and murder of a 23-year-old medical student in Delhi dubbed "Nirbhaya" by the media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X