ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದಿರಾ ಗಾಂಧಿ To ನಿರ್ಭಯಾ: ಹ್ಯಾಂಗ್‌ಮ್ಯಾನ್ ಜೀವನದ ಅಚ್ಚರಿಯ ಸುದ್ದಿ

|
Google Oneindia Kannada News

ನವ ದೆಹಲಿ, ಮಾರ್ಚ್ 21: ''ಇದು ನಮ್ಮ ಕುಟುಂಬದ ಪಾರಂಪರಿಕ ವೃತ್ತಿ. ಇದನ್ನು ನಾನು ಹಾಗೆಯೇ ಮುಂದುವರೆಸಿಕೊಂಡು ಹೋಗುತ್ತೇನೆ.'' ಹೀಗೆಂದು ಹೇಳುತ್ತಾರೆ ಹ್ಯಾಂಗ್‌ಮ್ಯಾನ್ ಪವನ್ ಜಲ್ಲದ್.

ನಿರ್ಭಯಾ ಪ್ರಕರಣದ ಹಂತಕರನ್ನು ನಿನ್ನೆ (ಮಾರ್ಚ್ 20) ಗಲ್ಲಿಗೆ ಏರಿಸಲಾಗಿದೆ. ಆ ಕೀಚಕರ ಕುತ್ತಿಗೆಗೆ ಹಗ್ಗ ಹಾಕಿದ್ದು, ಹ್ಯಾಂಗ್‌ಮ್ಯಾನ್ ಪವನ್ ಜಲ್ಲದ್. ನಿರ್ಭಯಾ ಕೇಸ್ ಇಡೀ ಭಾರತದಾದ್ಯಂತ ದೊಡ್ಡ ಮಟ್ಟದ ಸುದ್ದಿ ಮಾಡಿದ್ದ ಪ್ರಕರಣ. ಪ್ರಕರಣದ ಅಪರಾಧಿಗಳನ್ನ ಗಲ್ಲಿಗೆ ಏರಿಸಿದ ಹ್ಯಾಂಗ್ ಮ್ಯಾನ್ ಪವನ್ ಭಾರತದ ಜನರ ಮೆಚ್ಚುಗೆ ಪಡೆದಿದ್ದಾರೆ.

ನಿರ್ಭಯಾ ನಡತೆ ಬಗ್ಗೆಯೇ ಪ್ರಶ್ನಿಸಿದ ಹಂತಕರ ಪರ ವಕೀಲನಿರ್ಭಯಾ ನಡತೆ ಬಗ್ಗೆಯೇ ಪ್ರಶ್ನಿಸಿದ ಹಂತಕರ ಪರ ವಕೀಲ

ಹ್ಯಾಂಗ್‌ಮ್ಯಾನ್ ಕೆಲಸ ಸಾಮಾನ್ಯವಾದ ವೃತ್ತಿಯಲ್ಲ. ಹೀಗಾಗಿ, ಪವನ್ ಜಲ್ಲದ್ ಜೀವನ ತುಂಬ ಕುತೂಹಲಕಾರಿಯಾಗಿದೆ. ಅವರ ಇಡೀ ಕುಟುಂಬ ಇದೇ ವೃತ್ತಿಯನ್ನು ನಂಬಿಕೊಂಡು, ಜೀವನ ಸಾಗಿಸುತ್ತ ಬಂದಿದೆ. ತಾತನಿಂದ ಶುರುವಾದ ವೃತ್ತಿಯನ್ನು, ಈಗ ಮೊಮ್ಮಗ ಪವನ್ ಜಲ್ಲದ್ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಮುಂದೆ ತನ್ನ ಮಗ ಕೂಡ ಇದೇ ಕೆಲಸ ಮಾಡಬೇಕು ಎನ್ನುವುದು ಪವನ್ ಅವರ ಆಸೆಯಾಗಿದೆ.

ತಾತ, ಅಪ್ಪ ಈಗ ಮಗ

ತಾತ, ಅಪ್ಪ ಈಗ ಮಗ

ಹ್ಯಾಂಗ್‌ಮ್ಯಾನ್ ಕೆಲಸದಲ್ಲಿ ಪವನ್ ಜಲ್ಲದ್ ಕುಟುಂಬ ದೊಡ್ಡ ಇತಿಹಾಸ ಹೊಂದಿದೆ. 1951 ರಿಂದ ಅವರ ಕುಟುಂಬ ಈ ಕೆಲಸ ಮಾಡಿಕೊಂಡು ಬಂದಿದೆ. ಪವನ್ ಜಲ್ಲದ್ ತಾತ ಹ್ಯಾಂಗ್ ಮ್ಯಾನ್ ಕೆಲಸವನ್ನು ಶುರು ಮಾಡಿದರು. ನಂತರ ಅವರ ಮಗ ಕೂಡ ಅದೇ ಕೆಲಸದಲ್ಲಿ ಮುಂದುವರೆದರು. ಈಗ ಪವನ್ ಕೂಡ ತಮ್ಮ ಅಜ್ಜ ಹಾಗೂ ಅಪ್ಪನ ಹಾದಿಯಲ್ಲಿಯೇ ಹ್ಯಾಂಗ್ ಮ್ಯಾನ್ ಆಗಿದ್ದಾರೆ.

ಇಂದಿರಾ ಗಾಂಧಿ ಟು ನಿರ್ಭಯಾ ಕೇಸ್

ಇಂದಿರಾ ಗಾಂಧಿ ಟು ನಿರ್ಭಯಾ ಕೇಸ್

1987ರಲ್ಲಿ ಇಂದಿರಾ ಗಾಂಧಿ ಹಂತಕರನ್ನು ಪವನ್ ಜಲ್ಲದ್ ತಾತ ಗಲ್ಲಿಗೆ ಏರಿಸಿದ್ದರು. ಆಗ ಪವನ್ 22 ವರ್ಷದ ಹುಡುಗನಾಗಿದ್ದರು. ತಾತ ಹಾಗೂ ತಂದೆಯ ಕೆಲಸ ನೋಡಿಕೊಂಡು ಬೆಳೆದ ಪವನ್ ಅದೇ ಕೆಲಸ ಮಾಡುವ ಆಸೆಯನ್ನು ಬಾಲ್ಯದಿಂದ ಹೊಂದಿದ್ದರು. ಅವರೇ ಹೇಳುವಂತೆ ತಾತನೇ ಅವರಿಗೆ ಸ್ಫೂರ್ತಿಯಂತೆ. ಅಂದು ತಾತ ಇಂದಿರಾ ಗಾಂಧಿ ಹಂತಕನನ್ನು ನೇಣಿಗೆ ಹಾಕಿದರೆ, ಇಂದು ನಿರ್ಭಯಾ ಹಂತಕರನ್ನು ಪವನ್ ಗಲ್ಲಿಗೆ ಏರಿಸಿದ್ದಾರೆ.

ಒಬ್ಬರನ್ನು ಗಲ್ಲಿಗೆ ಹಾಕಿದರೆ 20 ಸಾವಿರ

ಒಬ್ಬರನ್ನು ಗಲ್ಲಿಗೆ ಹಾಕಿದರೆ 20 ಸಾವಿರ

ಮೂರು ವರ್ಷಗಳ ಹಿಂದೆ ತಮಗೆ ತಿಂಗಳಿಗೆ 5 ಸಾವಿರ ಸಂಬಳ ಸಿಗುತ್ತಿತ್ತು ಎಂದು ಪವನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ನಿರ್ಭಯಾ ಕೇಸ್‌ನ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸುವುದರಿಂದ ಒಬ್ಬರಿಗೆ ತಲಾ 25 ಸಾವಿರ ರು ನಂತೆ ಒಟ್ಟಾರೆ 1 ಲಕ್ಷ ರು ಸಿಗಲಿದೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ಈ ಮುಂಚೆ ತಿಳಿಸಿದ್ದರು. ಆದರೆ, ಬಳಿಕ ತಲಾ 20 ಸಾವಿರ ರು ನಂತೆ 80 ಸಾವಿರ ರು ಮಾತ್ರ ಸಿಗಲಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದರು.

ದಾಖಲೆ ಮಾಡಿದ ಪವನ್ ಜಲ್ಲದ್

ದಾಖಲೆ ಮಾಡಿದ ಪವನ್ ಜಲ್ಲದ್

ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೆ ಏರಿಸುವ ಮೂಲಕ ಪವನ್ ಜಲ್ಲದ್ ದಾಖಲೆ ಬರೆದಿದ್ದಾರೆ. ತಮ್ಮ ತಾತ ಒಂದೇ ವೇಳೆ ಇಬ್ಬರು ಅಪರಾಧಿಗಳನ್ನು ಗಲ್ಲಿಗೆ ಏರಿಸಿದ್ದರು. ಪವನ್ ಒಂದೇ ವೇಳೆ ನಾಲ್ಕು ಪಾಪಿಗಳನ್ನು ನೇಣಿಗೆ ಹಾಕಿದ್ದಾರೆ. ಅವರ ವೃತ್ತಿ ಬಗ್ಗೆ, ಎಷ್ಟೋ ಜನರು ನಿಮಗೆ ಕೆಲಸ ಮಾಡಲು ಭಯ ಆಗುವುದಿಲ್ಲವೇ ಎಂದು ಪ್ರಶ್ನೆ ಮಾಡಿದರೆ, 'ಇಲ್ಲ' ಎಂದು ಪವನ್ ಹೇಳುತ್ತಾರಂತೆ.

ಮರಣದಂಡನೆಯ ದಿನ 4 ಗಂಟೆಗೆ ಏಳುತ್ತಾರೆ

ಮರಣದಂಡನೆಯ ದಿನ 4 ಗಂಟೆಗೆ ಏಳುತ್ತಾರೆ

ಮರಣದಂಡನೆ ನೀಡುವ ದಿನ ಹ್ಯಾಂಗ್ ಮ್ಯಾನ್ ಪವನ್ 4 ಗಂಟೆಗೆ ಏಳುತ್ತಾರೆ. ಮತ್ತೊಮ್ಮೆ ಹಗ್ಗ ಹಾಗೂ ಗಲ್ಲಿಗೆ ಏರಿಸಲು ಬೇಕಾಗುವ ವಸ್ತುಗಳ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಗಲ್ಲಿಗೆ ಏರಿಸಿದ 15 ನಿಮಿಷಗಳ ನಂತರ, ವೈದ್ಯರು ಸಾವನ್ನು ಖಚಿತಪಡಿಸುತ್ತಾರೆ. ಈ ಹಿಂದೆ 5 ಅಪರಾಧಿಗಳನ್ನು ನೇಣಿಗೆ ಹಾಕಿದ್ದ ಪವನ್, ನಿನ್ನೆ ನಾಲ್ಕು ಅಪರಾಧಿಗಳನ್ನು ಗಲ್ಲಿಗೆ ಏರಿಸಿದ್ದಾರೆ.

ಪವನ್‌ಗೆ ಕೊನೆ ಆಗುತ್ತದೆಯೇ ಪಾರಂಪರಿಕ ವೃತ್ತಿ?

ಪವನ್‌ಗೆ ಕೊನೆ ಆಗುತ್ತದೆಯೇ ಪಾರಂಪರಿಕ ವೃತ್ತಿ?

ಹ್ಯಾಂಗ್ ಮ್ಯಾನ್ ಆಗಿ ಪವನ್‌ ಕುಟುಂಬ ಮೂರು ಜನರೇಷನ್ ಕೆಲಸ ಮಾಡಿದೆ. ಆದರೆ, ಪವನ್ ಪುತ್ರನಿಗೆ ಈ ಕೆಲಸ ಇಷ್ಟ ಇಲ್ಲವಂತೆ. ನಾನು ಓದಿ ಬೇರೊಂದು ಕೆಲಸ ಪಡೆಯುತ್ತೇನೆ ಎಂದು ಅವರ ಮಗ ಅಪ್ಪನಿಗೆ ತಿಳಿಸಿದ್ದಾರಂತೆ. ಹೀಗಾಗಿ ತಮ್ಮ ಕುಟುಂಬದ ಪಾರಂಪರಿಕ ವೃತ್ತಿ ತಮಗೆ ಮುಗಿದು ಹೋಗುತ್ತದೆಯೇ ಎನ್ನುವ ಆತಂಕವು ಪವನ್ ಇದೆಯಂತೆ.

English summary
Nirbhaya case: All about hangman Pawan Jallad. Pawan Jallad who hanged four convicts of Nirbhaya case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X