ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರ್ಭಯಾ ಸಾವಿಗೆ ನ್ಯಾಯ: ಅತ್ಯಾಚಾರಿಗಳಿಗೆ ಕೊನೆಗೂ ಗಲ್ಲು

|
Google Oneindia Kannada News

ನವದೆಹಲಿ, ಮಾರ್ಚ್ 20: ಏಳು ವರ್ಷಗಳ ಬಳಿಕ ನಿರ್ಭಯಾ ಸಾವಿಗೆ ನ್ಯಾಯ ದೊರೆತಿದೆ.ಅತ್ಯಾಚಾರಿಗಳಿಗೆ ಕೊನೆಗೂ ಗಲ್ಲು ಶಿಕ್ಷೆಯಾಗಿದೆ.

ನಿರ್ಭಯಾ ಅತ್ಯಾಚಾರಿಗಳು ನೇಣುಗಂಬಕ್ಕೆ ಏರುವ ಕೊನೆಯ ಹಂತದವರೆಗೂ ಬಚಾವಾಗಲು ಸಾಕಷ್ಟು ಪ್ರಯತ್ನಗಳನ್ನು ನಡೆಸಿದ್ದರು. ಆದರೂ ಯಾವುದೇ ಪ್ರಯೋಜನವಾಗಿಲ್ಲ.

Timeline: 2012ರ ನಿರ್ಭಯಾ ಕೇಸ್: ದುರ್ಘಟನೆಯಿಂದ ಗಲ್ಲುಶಿಕ್ಷೆ ತನಕTimeline: 2012ರ ನಿರ್ಭಯಾ ಕೇಸ್: ದುರ್ಘಟನೆಯಿಂದ ಗಲ್ಲುಶಿಕ್ಷೆ ತನಕ

ನಿರ್ಭಯಾ ಅತ್ಯಾಚಾರಿಗಳನ್ನು ಇಂದು (ಮಾರ್ಚ್ 20) ಬೆಳಗ್ಗೆ 5.30ಕ್ಕೆ ಗಲ್ಲಿಗೇರಿಸಲಾಯಿತು.ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳು ಸಲ್ಲಿಸಿದ್ದ ಎಲ್ಲಾ ಅರ್ಜಿಗಳು ತಿರಸ್ಕಾರಗೊಂಡಿದ್ದವು.

Nirbhaya

ಪಟಿಯಾಲ ಹೌಸ್ ಕೋರ್ಟ್ ನ್ಯಾಯಾಲಯದ ಡೆತ್ ವಾರೆಂಟ್‌ನಂತೆ ಶುಕ್ರವಾರ ಮುಂಜಾನೆ5.30ಕ್ಕೆ ಗಲ್ಲು ಶಿಕ್ಷೆ ಜಾರಿಯಾಗಿದೆ.

ನಿರ್ಭಯಾ ಅಪರಾಧಿಗಳಿಗೆ ಗಲ್ಲು ಖಚಿತವಾದ ಮೇಲೆ ಅವರ ಮನಸ್ಥಿತಿ ಹೇಗಿತ್ತು?ನಿರ್ಭಯಾ ಅಪರಾಧಿಗಳಿಗೆ ಗಲ್ಲು ಖಚಿತವಾದ ಮೇಲೆ ಅವರ ಮನಸ್ಥಿತಿ ಹೇಗಿತ್ತು?

ಪ್ರಕರಣದ ಅಪರಾಧಿಗಳಾದ ಮುಕೇಶ್ ಸಿಂಗ್, ಪವನ್ ಗುಪ್ತಾ, ವಿನಯ್ ಕುಮಾರ್ ಶರ್ಮಾ, ಅಕ್ಷಯ್ ಕುಮಾರ್ ನನ್ನು ಗಲ್ಲಿಗೇರಿಸಲಾಯಿತು.

ಕೊನೆಯ ಹಂತದಲ್ಲಿ ಮರಣದಂಡನೆ ಶಿಕ್ಷೆಯನ್ನು ಪುನರ್ ಪರಿಶೀಲಿಸಬೇಕು ಎಂದು ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯೂ ವಜಾಗೊಂಡಿತ್ತು. ಎಲ್ಲಾ ಅಪರಾಧಿಗಳ ಕ್ಷಮಾಧಾನ ಅರ್ಜಿಯನ್ನೂ ರಾಷ್ಟ್ರಪತಿಗಳು ತಿರಸ್ಕರಿಸಿದ್ದರು.

ನಿರ್ಭಯಾ ಹಂತಕರ ಪರ ವಕೀಲ ಎಪಿ ಸಿಂಗ್ ಪ್ರತಿಕ್ರಿಯೆನಿರ್ಭಯಾ ಹಂತಕರ ಪರ ವಕೀಲ ಎಪಿ ಸಿಂಗ್ ಪ್ರತಿಕ್ರಿಯೆ

ದೆಹಲಿಯ ಬಸ್ ಒಂದರಲ್ಲಿ 2012ರ ಡಿಸೆಂಬರ್ 16ರಂದು ನಿರ್ಭಯಾ ಸ್ನೇಹಿತನೆದುರೇ ಈ ನಾಲ್ವರು ಅಪರಾಧಿಗಳು ಅತ್ಯಾಚಾರ ನಡೆಸಿ ಹತ್ಯೆಗೈದಿದ್ದರು. ಸತತ 7 ವರ್ಷ ಮೂರು ತಿಂಗಳ ಬಳಿಕ ನ್ಯಾಯ ದೊರೆತಂತಾಗಿದೆ.

ದೆಹಲಿಯ ತಿಹಾರ್ ಜೈಲ್ ನಂಬರ್ 3ರಲ್ಲಿ ನಾಲ್ವರಿಗೆ ಗಲ್ಲು ಶಿಕ್ಷೆ ವಿಧಿಸಲಾಯಿತು. ನಿರ್ಭಯಾ ಹಂತಕರು ಯಾವುದೇ ಅಂತಿಮ ಇಚ್ಛೆ ವ್ಯಕ್ತಪಡಿಸಿಲ್ಲ. ಗಲ್ಲಿಗೇರಿಸುವ ಮುನ್ನ ನಾಲ್ವರನ್ನು ಪ್ರತ್ಯೇಕವಾಗಿ ಮಾಜಿಸ್ಟ್ರೇಟ್ ಮಾತನಾಡಿಸಿದ್ದರು.

ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ನಾಲ್ವರನ್ನು ಗಲ್ಲಿಗೇರಿಸಲಾಯಿತು.

English summary
In a Post-Midnight Hearing, The supreme court dismissed the petition of death row convict. The Nirbhaya Four Convicts Now executed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X