ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರವ್ ಮೋದಿಯ 56 ಕೋಟಿ ಮೌಲ್ಯದ 11 ಆಸ್ತಿ ವಶಕ್ಕೆ ಪಡೆದ ಇಡಿ

|
Google Oneindia Kannada News

ನವದೆಹಲಿ, ನವೆಂಬರ್ 6: ದೇಶ ಬಿಟ್ಟು ಹೋಗಿ ತಲೆ ತಪ್ಪಿಸಿಕೊಂಡಿರುವ ನೀರವ್ ಮೋದಿಯ 56 ಕೋಟಿ ಮೌಲ್ಯದ 11 ಆಸ್ತಿಗಳನ್ನು ದುಬೈನಲ್ಲಿ ಜಾರಿ ನಿರ್ದೇಶನಾಲಯ ಜಪ್ತಿ ಮಾಡಿಕೊಂಡಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ವಂಚಿಸಿ, 200 ಕೋಟಿ ಅಮೆರಿಕನ್ ಡಾಲರ್ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪ ಮೋದಿ ಮೇಲಿದೆ.

ಮೋದಿ ಮತ್ತು ಆತನ ಗ್ರೂಪ್ ಫೈರ್ ಸ್ಟಾರ್ ಡೈಮಂಡ್ ಕಂಪನಿಗೆ ಸೇರಿದ 7.79 ಮಿಲಿಯನ್ ಅಮೆರಿಕನ್ ಡಾಲರ್ (56.8 ಕೋಟಿ ರುಪಾಯಿ) ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ತಿಳಿಸಿದೆ. ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಜಾರಿ ನಿರ್ದೇಶನಾಲಯವು ಆಸ್ತಿ ವಶಪಡಿಸಿಕೊಂಡಿದೆ.

ಯಾರೀತ? ಬಹು ಕೋಟಿ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿಯಾರೀತ? ಬಹು ಕೋಟಿ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿ

ಕಳೆದ ತಿಂಗಳು ನೀರವ್ ಮೋದಿ ಹಾಗೂ ಕುಟುಂಬಕ್ಕೆ ಸೇರಿದ 637 ಕೋಟಿ ರುಪಾಯಿಯ ಆಸ್ತಿ ಜಪ್ತಿ ಮಾಡಲಾಗಿತ್ತು. ಅದರಲ್ಲಿ ನ್ಯೂಯಾರ್ಕ್ ನ ಸೆಂಟ್ರಲ್ ಪಾರ್ಕ್ ನಲ್ಲಿರುವ ಎರಡು ಅಪಾರ್ಟ್ ಮೆಂಟ್ ಕೂಡ ಒಳಗೊಂಡಿತ್ತು.

Nirav Modi

ಒಮ್ಮೆ ಕೋರ್ಟ್ ನಿಂದ ಆದೇಶ ಹೊರಡಿಸಿದ ಮೇಲೆ ಅಪರಾಧಿಗಳ ವಿಷಯಗಳಿಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಸಹಕಾರ ಪಡೆದು, ವಿದೇಶದಲ್ಲಿರುವ ಆಸ್ತಿಗಳನ್ನು ಮಾರಾಟ ಆಗದಂತೆ ತಡೆಯಬಹುದು.

ನೀರವ್ ಮೋದಿ ಹಾಗೂ ಆತನ ಸಂಬಂಧಿ ಮೆಹುಲ್ ಚೋಕ್ಸಿ ಮತ್ತಿತರರ ವಿರುದ್ಧ ವಿವಿಧ ಅಪರಾಧ ಕಾಯ್ದೆ ಅಡಿಯಲ್ಲಿ ದೂರು ದಾಖಲಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13 ಸಾವಿರ ಕೋಟಿ ರುಪಾಯಿ ವಂಚನೆ ಮಾಡಿದ ಆರೋಪವಿದೆ.

English summary
The Enforcement Directorate has attached 11 properties worth over Rs. 56 crore of fugitive diamond jeweller Nirav Modi in Dubai in connection with its money-laundering probe in the USD 2-billion Punjab National Bank (PNB) fraud case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X