ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರವ್ ಮೋದಿ ಹಸ್ತಾಂತರ ಮನವಿ ಯುಕೆಗೆ ಸಲ್ಲಿಸಲಾಗಿದೆ : ಇಡಿ

|
Google Oneindia Kannada News

ನವದೆಹಲಿ, ಮಾರ್ಚ್ 09 : ಬಹುಕೋಟಿ ಹಗರಣದ ಆರೋಪಿ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂಬ ಭಾರತದ ಮನವಿಯನ್ನು ಯುನೈಟೆಡ್ ಕಿಂಗಡಂನ ಗೃಹ ಸಚಿವಾಲಯ ನ್ಯಾಯಾಲಯಕ್ಕೆ ನೀಡಿದೆ ಎಂದು ಜಾರಿ ನಿರ್ದೇಶನಾಲಯ ಶನಿವಾರ ತಿಳಿಸಿದೆ.

"ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಬೇಕೆಂದು 2018ರ ಜುಲೈನಲ್ಲಿಯೇ ಯುಕೆಗೆ ಮನವಿ ಮಾಡಲಾಗಿದೆ. ಮುಂದಿನ ನ್ಯಾಯಾಂಗ ಪ್ರಕ್ರಿಯೆ ಆರಂಭಿಸಲು ಈ ಮನವಿಯನ್ನು ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಜಿಲ್ಲಾ ನ್ಯಾಯಾಧೀಶರಿಗೆ ರವಾನಿಸಲಾಗಿರುವುದನ್ನು ಯುಕೆ ಸೆಂಟ್ರಲ್ ಅಥಾರಿಟಿ ಗೃಹ ಸಚಿವಾಲಯ ದೃಢಪಡಿಸಿದೆ" ಎಂದು ಜಾರಿ ನಿರ್ದೇಶನಾಲಯ ಟ್ವೀಟ್ ಮಾಡಿದೆ.

ಲಂಡನ್ನಿನಲ್ಲಿ 'ಸಿಕ್ಕಿಬಿದ್ದ' ಡೈಮಂಡ್ ವ್ಯಾಪಾರಿ ನೀರವ್ ಮೋದಿ!ಲಂಡನ್ನಿನಲ್ಲಿ 'ಸಿಕ್ಕಿಬಿದ್ದ' ಡೈಮಂಡ್ ವ್ಯಾಪಾರಿ ನೀರವ್ ಮೋದಿ!

ಭಾರತದಿಂದ ಪರಾರಿಯಾಗಿ ತಲೆಮರೆಸಿಕೊಂಡಿದ್ದ ಡೈಮಂಡ್ ವ್ಯಾಪಾರಿ 48 ವರ್ಷದ ನೀರವ್ ಮೋದಿಯನ್ನು ಲಂಡನ್ನಿನಲ್ಲಿ ಪತ್ತೆ ಹಚ್ಚಿದೆ, ಆತನ ಬಹುಕೋಟಿ (80 ಲಕ್ಷ ಪೌಂಡ್ಸ್) ಮೌಲ್ಯದ ಮನೆಯನ್ನೂ ಪತ್ತೆ ಮಾಡಿರುವುದಾಗಿ ಎಂದು ದಿ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದ ನಂತರ ನೀರವ್ ಮೋದಿಯನ್ನು ವಾಪಸ್ ಕರತರುವ ಪ್ರಕ್ರಿಯೆ ಚುರುಕು ಪಡೆದುಕೊಂಡಿದೆ.

 Nirav Modi extradition request sent to UK home secretary : ED

ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ಹಲವಾರು ಬ್ಯಾಂಕುಗಳಿಗೆ 13 ಸಾವಿರ ಕೋಟಿ ರುಪಾಯಿನಷ್ಟು ಮೋಸ ಮಾಡಿ ಭಾರತದಿಂದ ಪರಾರಿಯಾಗಿರುವ ನೀರವ್ ಮೋದಿ, ಲಂಡನ್ನಿನಲ್ಲಿ ಬಿಂದಾಸ್ ಆಗಿ, ಅಲ್ಲಿನ ಕಾನೂನಿನ ರಕ್ಷಣೆಯಲ್ಲಿಯೇ ಮತ್ತೆ ಡೈಮಂಡ್ ವ್ಯಾಪಾರ ಮುಂದುವರಿಸಿದ್ದಾರೆ. ಅಲ್ಲಿನ ನ್ಯಾಷನಲ್ ಇನ್ಶೂರನ್ಸ್ ನಂಬರ್ ಅನ್ನು ಕೂಡ ಅವರು ಪಡೆದಿದ್ದಾರೆ.

ಯಾರೀತ? ಬಹು ಕೋಟಿ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿಯಾರೀತ? ಬಹು ಕೋಟಿ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿ

ಎರಡು ದಿನಗಳ ಹಿಂದೆಯಷ್ಟೇ ಯುಕೆ ಗೃಹ ಸಚಿವಾಲಯದ ಕಾರ್ಯದರ್ಶಿ ಸಾಜಿದ್ ಜಾವಿದ್ ಅವರು, ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವ ಮನವಿಯನ್ನು ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಸಲ್ಲಿಸಿದ್ದಾರೆ. ಅಲ್ಲಿ ವಿಚಾರಣೆಯಾಗಿ, ಭಾರತ ಮಾಡಿರುವ ಆರೋಪ ಅಲ್ಲಿನ ಕೋರ್ಟಿಗೆ ಮನವರಿಕೆಯಾದರೆ ಅವರನ್ನು, ಇಲ್ಲಿ ವಿಚಾರಣೆ ಎದುರಿಸಲು ಹಸ್ತಾಂತರಿಸಲಾಗುವುದು.

ನೀರವ್ ಮೋದಿಗೆ ಸೇರಿದ 100 ಕೋಟಿ ಬಂಗಲೆ ನೆಲಸಮ!ನೀರವ್ ಮೋದಿಗೆ ಸೇರಿದ 100 ಕೋಟಿ ಬಂಗಲೆ ನೆಲಸಮ!

ನೀರವ್ ವಿರುದ್ಧ ಏನೇನು ಸಾಕ್ಷ್ಯಗಳಿವೆ ಎಂಬುದನ್ನು ತೋರಿಸಲು ಜಾರಿ ನಿರ್ದೇಶನಾಲಯ ಮತ್ತು ತನಿಖೆ ನಡೆಸುತ್ತಿರುವ ಸಿಬಿಐ ಜಂಟಿ ತಂಡ ಯುನೈಡೆಟ್ ಕಿಂಗಡಂಗೆ ಪ್ರಯಾಣ ಬೆಳೆಸಲಿದ್ದು, ಅಲ್ಲಿನ ವಕೀಲರನ್ನು ಭೇಟಿಯಾಗಲಿದೆ. ಭಾರತದಿಂದ ಪರಾರಿಯಾಗಿರುವ ಮತ್ತೊಬ್ಬ ವಂಚಕ ಉದ್ಯಮಿ ಡಾ. ವಿಜಯ್ ಮಲ್ಯ ಅವರ ಪ್ರಕರಣದಲ್ಲಿ ನಡೆದಂತೆಯೇ ನೀರವ್ ಮೋದಿ ಹಗರಣದ ವಿಚಾರಣೆ ನಡೆಯಲಿದೆ. ಅವರನ್ನು ಕೂಡ ಭಾರತಕ್ಕೆ ಯುಕೆ ಹಸ್ತಾಂತರಿಸಲಿದೆ ಎಂದು ಇಡಿ ವಿಶ್ವಾಸ ವ್ಯಕ್ತಪಡಿಸಿದೆ.

English summary
Enforcement Directorate has confirmed that request for extradition of Nirav Modi has been already handed over to United Kingdom home secretary. ED has confirmed that UK home secretary has already moved the request to Westminister Magistrate court for further proceeding.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X