ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್-ಮನಮೋಹನ್ ಸಿಂಗ್ ಭೇಟಿಗೆ ಕಾರಣವೇನು?

|
Google Oneindia Kannada News

ನವದೆಹಲಿ, ಜೂನ್ 27: ಹಣಕಾಸು ಸಚಿವರಾಗಿ ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡ ಮಾಜಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ನವದೆಹಲಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾದರು.

ಜೂನ್ 5 ರಂದು ಕೇಂದ್ರ ಬಜೆಟ್ ಇರುವುದರಿಂದ ಆರ್ಥಿಕ ತಜ್ಞರೂ ಆಗಿರುವ ಮನಮೋಹನ್ ಸಿಂಗ್ ಅವರನ್ನು ನಿರ್ಮಲಾ ಭೇಟಿ ಮಾಡಿದ್ದಾರೆ ಎನ್ನಲಾಗಿದೆಯಾದರೂ, ಇದನ್ನು ಕೇವಲ ಸೌಜನ್ಯದ ಭೇಟಿ ಎಂದು ಹಣಕಾಸು ಇಲಾಖೆಯ ಮೂಲಗಳು ತಿಳಿಸಿವೆ.

ಪಿಂಚಣಿದಾರರಿಗೆ ಶುಭ ಸುದ್ದಿ ನೀಡುವ ಸುಳಿವು ಕೊಟ್ಟ ನಿರ್ಮಲಾಪಿಂಚಣಿದಾರರಿಗೆ ಶುಭ ಸುದ್ದಿ ನೀಡುವ ಸುಳಿವು ಕೊಟ್ಟ ನಿರ್ಮಲಾ

ಕಾಂಗ್ರೆಸ್ ಮುಖಂಡ, 86 ವರ್ಷ ವಯಸ್ಸಿನ ಮನಮೋಹನ್ ಸಿಂಗ್ ಅವರು ಮೂವತ್ತು ವರ್ಷದ ನಂತರ ಮೊದಲ ಬಾರಿಗೆ ಸಂಸತ್ತಿನಲ್ಲಿ ಬಜೆಟ್ ಸಮಯದಲ್ಲಿ ಹಾಜರಾಗುತ್ತಿಲ್ಲ. ಅವರ ಮೂವತ್ತು ವರ್ಷಗಳ ರಾಜ್ಯ ಸಭಾ ಸದಸ್ಯತ್ವದ ಅವಧಿ ಈ ತಿಂಗಳಾರಂಭದಲ್ಲಿ ಮುಕ್ತಾಯವಾಗಿದ್ದರಿಂದ ಈ ಬಾರಿ ಅವರ ಅನುಪಸ್ಥಿತಿಯಲ್ಲಿ ಬಜೆಟ್ ಮಂಡನೆ ನಡೆಯಲಿದೆ.

Niramala Sitharaman meets Manmohan Singh in Delhi

ಆದಾಯ ತೆರಿಗೆ ಮಿತಿ, ಮೋದಿ ಸರ್ಕಾರ 2.0 ಬಜೆಟ್ ನಿರೀಕ್ಷೆಯೇನು?ಆದಾಯ ತೆರಿಗೆ ಮಿತಿ, ಮೋದಿ ಸರ್ಕಾರ 2.0 ಬಜೆಟ್ ನಿರೀಕ್ಷೆಯೇನು?

ಆ ಕಾರಣದಿಂದ ಅವರನ್ನೊಮ್ಮೆ ಸೌಜನ್ಯಕ್ಕಾಗಿ 59 ವರ್ಷ ವಯಸ್ಸಿನ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದರು. ಜೂನ್ 5 ರಂದು ಕೇಂದ್ರ ಬಜೆಟ್ ಮಂಡನೆಗೊಳ್ಳಲಿದ್ದು, ಪೂರ್ಣಾವಧಿ ಹಣಕಾಸು ಸಚಿವರಾದ ಭಾರತದ ಮೊಟ್ಟ ಮೊದಲ ಮಹಿಳೆ ಎಂಬ ಖ್ಯಾತಿ ಗಳಿಸಿದ ನಿರ್ಮಲಾ ಸೀತಾರಾಮನ್ ಅವರು ತಮ್ಮ ಚೊಚ್ಚಲ ಬಜೆಟ್ ಮಂಡಿಸಲಿದ್ದಾರೆ. ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದ ಸಮಯದಲ್ಲಿ ಹಣಕಾಸು ಇಲಾಖೆಯ ಜವಾಬ್ದಾರಿಯನ್ನೂ ಹೊತ್ತಿದ್ದರು.

English summary
Finance minister Nirmala Sitharaman on Thursday meets former PM Manmohan Singh. Sources said it was a courtesy call. Niramala Sitharaman meets Manmohan Singh in Delhi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X