ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮಾ ದಾಳಿ ಆರೋಪಿಗೆ ಜಾಮೀನು ಸಿಕ್ಕಿದೆ ಎಂಬುದು ಸುಳ್ಳು ಸುದ್ದಿ

|
Google Oneindia Kannada News

ನವದೆಹಲಿ, ಫೆಬ್ರವರಿ 28: ಪುಲ್ವಾಮಾದಲ್ಲಿ 40 ಸೈನಿಕರ ಸಾವಿಗೆ ಕಾರಣನಾಗಿದ್ದ ಆರೋಪಿಗೆ ಜಾಮೀನು ಸಿಕ್ಕಿದೆ ಎಂಬುದು ಸುಳ್ಳು ಸುದ್ದಿ ಎಂದು ರಾಷ್ಟ್ರೀಯ ತನಿಖಾ ದಳ ಸ್ಪಷ್ಟಪಡಿಸಿದೆ.

ಈ ಹಿಂದೆ ಪುಲ್ವಾಮಾ ದಾಳಿ ಪ್ರಕರಣದ ಆರೋಪಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಿಗದಿತ ಅವಧಿಯೊಳಗೆ ಚಾರ್ಜ್‌ಶೀಟ್ ಸಲ್ಲಿಸಲು ವಿಫಲವಾದ ಕಾರಣ ದೆಹಲಿಯ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ ಎಂದು ಕೆಲ ಸುದ್ದಿಮಾಧ್ಯಮಗಳು ವರದಿ ಮಾಡಿದ್ದವು.

ಪುಲ್ವಾಮಾ ದಾಳಿ ಆರೋಪಿಗೆ ಜಾಮೀನುಪುಲ್ವಾಮಾ ದಾಳಿ ಆರೋಪಿಗೆ ಜಾಮೀನು

ಆದರೆ ಈ ವರದಿಗಳನ್ನು ಅಲ್ಲಗಳೆದಿರುವ ಎನ್ಐಎ, ಪ್ರಸ್ತುತ ಜಾಮೀನು ಸಿಕ್ಕಿರುವುದು ಪುಲ್ವಾಮ ದಾಳಿ ಪ್ರಕರಣದ ಆರೋಪಿಗಲ್ಲ. ಬದಲಿಗೆ 2019 ಫೆಬ್ರವರಿಯಲ್ಲಿ ಬಂಧಿಸಲಾಗಿದ್ದ ಭಯೋತ್ಪಾದನೆ ಸಂಚು ಪ್ರಕರಣದ ಆರೋಪಿ ಯೂಸುಫ್ ಚೋಪನ್ ಗೆ ಎಂದು ಹೇಳಿದೆ.

ದೇಶದ ಬೇರೆ ಬೇರೆ ಕಡೆಗಳಲ್ಲಿ ಭಯೋತ್ಪಾದಕ ಚಟುವಟಿಕೆ, ಬಾಂಬ್ ದಾಳಿ ನಡೆಸಿದ್ದ ಆರೋಪದ ಮೇಲೆ ಚೋಪನ್‌ನನ್ನು ಬಂಧಿಸಲಾಗಿತ್ತು.

ಚೋಪನ್ ಜೈಷ್ ಸಂಘಟನೆ ನೆರವು ನೀಡುತ್ತಿದ್ದ

ಚೋಪನ್ ಜೈಷ್ ಸಂಘಟನೆ ನೆರವು ನೀಡುತ್ತಿದ್ದ

ಚೋಪನ್ ಜೈಷ್ ಎ ಮೊಹಮದ್ ಸಂಘಟನೆಗೆ ನೆರವು ನೀಡುತ್ತಿದ್ದ ಆರೋಪದ ಮೇರೆಗೆ ಆತನನ್ನು ಮತ್ತು ಆತನ ಇತರೆ 6 ಮಂದಿ ಸಹಚರರನ್ನು 2019ರಲ್ಲಿ ಎನ್ಐಎ ಅಧಿಕಾರಿಗಳು ಬಂಧಿಸಿದ್ದರು. ಬಂಧಿತರನ್ನು ಸಜಾದ್ ಅಹ್ಮದ್ ಖಾನ್, ತನ್ವೀರ್ ಅಹ್ಮದ್ ಗನಿ, ಬಿಲಾಲ್ ಅಹ್ಮದ್ ಮಿರ್, ಮುಜಾಫರ್ ಅಹ್ಮದ್ ಭಟ್, ಇಶ್ಫಾಕ್ ಅಹ್ಮದ್ ಭಟ್ ಮತ್ತು ಮೆಹರಾಜ್-ಉದ್-ದಿನ್ ಚೋಪನ್ ಎಂದು ಗುರುತಿಸಲಾಗಿತ್ತು. ಅಲ್ಲದೆ ಮುಜಾಸೀರ್ ಅಹ್ಮದ್ ಖಾನ್ ಮತ್ತು ಕರಿ ಮುಫ್ತಿ ಯಾಸೀರ್ ಅವರು ಭದ್ರತಾ ಪಡೆಗಳೊಂದಿಗಿನ ಗುಂಡಿನ ಕಾಳಗದಲ್ಲಿ ಸಾವನ್ನಪ್ಪಿದ್ದರು ಎಂದು ಎನ್ಐಎ ಹೇಳಿದೆ.

ಕಾಂಗ್ರೆಸ್ ಎನ್‌ಐಎ ಅಧಿಕಾರಿಗಳ ವಿರುದ್ಧ ಕಿಡಿ

ಕಾಂಗ್ರೆಸ್ ಎನ್‌ಐಎ ಅಧಿಕಾರಿಗಳ ವಿರುದ್ಧ ಕಿಡಿ

ಇನ್ನು ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆಯೇ ಅತ್ತ ಕಾಂಗ್ರೆಸ್ ಪಕ್ಷ ಎನ್ಐಎ ಅಧಿಕಾರಿಗಳ ವಿರುದ್ಧ ಕಿಡಿಕಾರಿತ್ತು. ಇದು ನಿಜಕ್ಕೂ ಅವಮಾನಕರವಾದ ಸಂಗತಿ ಎಂದು ಟೀಕಿಸಿತ್ತು. ಅಲ್ಲದೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿತ್ತು.

ಫೆಬ್ರವರಿ 14, 2019ರಂದು ಪುಲ್ವಾಮಾದಲ್ಲಿ ದಾಳಿ

ಫೆಬ್ರವರಿ 14, 2019ರಂದು ಪುಲ್ವಾಮಾದಲ್ಲಿ ದಾಳಿ

ಫೆಬ್ರವರಿ 14, 2019 ರಂದು ಪುಲ್ವಾಮಾ ಜಿಲ್ಲೆಯ ಜಮ್ಮು ಶ್ರೀನಗರ ಹೆದ್ದಾರಿಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯ ಬೆಂಗಾವಲು ವಾಹನದ ಮೇಲೆ ಆತ್ಮಾಹುತಿ ಬಾಂಬರ್ ತನ್ನ ಸ್ಫೋಟಕಗಳನ್ನು ತುಂಬಿದ ಕಾರನ್ನು ಸಿಆರ್‌ಪಿಎಫ್ ಬಸ್‌ಗೆ ನುಗ್ಗಿಸಿದ ಪರಿಣಾಮ 40 ಮಂದಿ ಸಿಬ್ಬಂದಿ ಹತಾತ್ಮರಾಗಿದ್ದರು. ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಜೈಶ್-ಎ-ಮೊಹಮ್ಮದ್ ದಾಳಿಕೋರನ ವೀಡಿಯೊವನ್ನು ಬಿಡುಗಡೆ ಮಾಡಿ, ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡಿತ್ತು.

ಆರೋಪಿಗಳು ಎನ್‌ಕೌಂಟರ್‌ಗೆ ಬಲಿ

ಆರೋಪಿಗಳು ಎನ್‌ಕೌಂಟರ್‌ಗೆ ಬಲಿ

ಸಾಜದ್ ಅಹಮದ್ ಖಾನ್, ತನ್ವೀರ್ ಅಹಮದ್, ಬಿಲಾಲ್ ಅಹಮದ್ ಮಿರ್, ಮುಜಾಫರ್ ಅಹಮದ್ ಭಟ್, ಇಷ್‌ಫಾರ್ ಅಹಮದ್ ಭಟ್ , ಮೆಹ್ರಾಜ್ ಉದ್ದೀನ್ ಚೋಪನ್, ಮುದಾಸಿರ್ ಅಹಮದ್ ಖಾನ್, ಕರಿ ಮುಫ್ತಿ ಯಸೀರ್ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿತ್ತು.

English summary
The National Investigation Agency (NIA) rejected reports that a special court had granted bail to an accused in the Pulwama terror attack case in which 40 CRPF personnel were killed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X