ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋರ್ಟ್‌ ಒಳಭಾಗದಲ್ಲಿಯೇ ಉಗ್ರ ಯಾಸಿನ್ ಮಲಿಕ್ ಬಂಧನ

|
Google Oneindia Kannada News

ನವದೆಹಲಿ, ಏಪ್ರಿಲ್ 10: ಪ್ರತ್ಯೇಕತಾವಾದಿ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ ಮುಖ್ಯಸ್ಥ ಯಾಸಿನ್ ಮಲಿಕ್‌ನನ್ನು ದೆಹಲಿಯ ನ್ಯಾಯಾಲಯವೊಂದು ಏಪ್ರಿಲ್ 22ರವರೆಗೂ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧನಕ್ಕೆ ಒಪ್ಪಿಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು ಮತ್ತು ಉಗ್ರರ ಸಂಘಟನೆಗಳಿಗೆ ಹಣದ ಸಹಾಯ ಒದಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಿಕ್‌ನನ್ನು ತಮ್ಮ ವಶದಲ್ಲಿ ವಿಚಾರಣೆ ನಡೆಸಲು ಅವಕಾಶ ನೀಡುವಂತೆ ಸಂಸ್ಥೆ ಮನವಿ ಮಾಡಿತ್ತು.

ಯಾಸಿನ್ ಮಲಿಕ್ ಬಂಧನ: ಕಾಶ್ಮೀರಕ್ಕೆ 100 ಅರೆಸೇನಾ ತುಕಡಿ ರವಾನೆ ಯಾಸಿನ್ ಮಲಿಕ್ ಬಂಧನ: ಕಾಶ್ಮೀರಕ್ಕೆ 100 ಅರೆಸೇನಾ ತುಕಡಿ ರವಾನೆ

ಮಲಿಕ್‌ನನ್ನು ವಿಶೇಷ ನ್ಯಾಯಾಧೀಶ ರಾಕೇಶ್ ಸೈಲ್ ಅವರ ಮುಂದೆ ಬುಧವಾರ ಹಾಜರುಪಡಿಸಲಾಯಿತು. ಈ ವೇಳೆ ಎನ್‌ಐಎ 15 ದಿನಗಳ ಕಾಲ ವಿಚಾರಣೆಗೆ ನೀಡುವಂತೆ ಕೋರಿತು. ಕೋರ್ಟ್ ಒಳಭಾಗದಲ್ಲಿಯೇ ಮಲಿಕ್‌ನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದರು.

NIA arrested JKLF chief Yasin Malik inside a Delhi court in terror funding case

ಉಗ್ರ ಸಂಘಟನೆಗಳಿಗೆ ಹಣಕಾಸು ರವಾನಿಸಿದ್ದಕ್ಕೆ ಸಂಬಂಧಿಸಿದಂತೆ ಮಲಿಕ್‌ನನ್ನು ಎನ್‌ಐಎ ಪ್ರಶ್ನಿಸಲಿದೆ.

ಮಲಿಕ್ ಆರೋಪಿಯಾಗಿರುವ ಮೂರು ದಶಕಗಳ ಹಿಂದಿನ ಪ್ರಕರಣವನ್ನು ಮತ್ತೆ ತೆರೆಯುವುದಕ್ಕಾಗಿ ಸಿಬಿಐ ಸಲ್ಲಿಸಿರುವ ಅರ್ಜಿಯ ತೀರ್ಪನ್ನು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಕಾಯ್ದಿರಿಸಿದೆ.

ಉಗ್ರರಿಂದ ಆರೆಸ್ಸೆಸ್ ಮುಖಂಡನ ಮೇಲೆ ದಾಳಿ, ಭದ್ರತಾ ಸಿಬ್ಬಂದಿ ಹತ್ಯೆ ಉಗ್ರರಿಂದ ಆರೆಸ್ಸೆಸ್ ಮುಖಂಡನ ಮೇಲೆ ದಾಳಿ, ಭದ್ರತಾ ಸಿಬ್ಬಂದಿ ಹತ್ಯೆ

1989ರಲ್ಲಿ ಕೇಂದ್ರ ಗೃಹಸಚಿವರಾಗಿದ್ದ ಮುಫ್ತಿ ಮೊಹಮ್ಮದ್ ಸಯೀದ್‌ ಅವರ ಮಗಳು ರುಬಯ್ಯಾ ಸಯೀದ್ ಅಪಹರಣ ಮತ್ತು 1990ರಲ್ಲಿ ಭಾರತೀಯ ವಾಯುಪಡೆಯ ನಾಲ್ವರು ಸಿಬ್ಬಂದಿಯ ಹತ್ಯೆ ಪ್ರಕರಣಗಳಲ್ಲಿ ಯಾಸಿನ್ ಮಲಿಕ್ ಆರೋಪ ಎದುರಿಸುತ್ತಿದ್ದಾನೆ.

English summary
NIA arrested JKLF chief Yasin Malik inside a Delhi court in terror funding case on Wednesday. He was sent to custody of NIA till April 22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X