ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೀರಿಯಡ್ ಫೆಸ್ಟ್‌: ಮುಟ್ಟಾದ ಮಹಿಳೆಯರಿಂದ ಅಡುಗೆ

|
Google Oneindia Kannada News

ನವದೆಹಲಿ, ಫೆಬ್ರವರಿ 24: ಎನ್‌ಜಿಓವೊಂದು 'ಪೀರಿಯಡ್ ಫೆಸ್ಟ್‌' ಹೊಸದೊಂದು ಆಚರಣೆಗೆ ನಾಂದಿ ಹಾಡಿದೆ.

ಭುಜ್‌ನ ಶ್ರೀ ಸಹಜಾನಂದ್ ಗರ್ಲ್ಸ್ ಇನ್‌ಸ್ಟಿಸ್ಟ್ಯೂಟ್‌ನಲ್ಲಿ ವಿದ್ಯಾರ್ಥಿನಿಯರು ಮುಟ್ಟಾಗಿದ್ದಾರಾ ಇಲ್ಲವೋ ಎಂದು ತಿಳಿಯಲು ವಿದ್ಯಾರ್ಥಿನಿಯರ ಒಳ ಉಡುಪುಗಳನ್ನು ಬಿಚ್ಚಿಸುತ್ತಿದ್ದ ಅಮಾನವೀಯ ಘಟನೆ ಬೆಳಕಿಗೆ ಬಂದಿತ್ತು.

ಒಂದೊಮ್ಮೆ ಋತುಮತಿಯಾದರೆ ಹಾಸ್ಟೆಲ್ ಅಡುಗೆಕೋಣೆ, ದೇವರ ಕೋಣೆ ಸೇರಿದಂತೆ ಎಲ್ಲಿಯೂ ಹೋಗುವುದಕ್ಕೆ ಅವಕಾಶವಿರಲಿಲ್ಲ. ಹಾಗೆಯೇ ಸ್ವಾಮೀಜಿಯೊಬ್ಬರು 'ಮುಟ್ಟಾದ ಮಹಿಳೆಯರು ಅಡುಗೆ ಮಾಡಿದರೆ ಮುಂದಿನ ಜನ್ಮದಲ್ಲಿ ನಾಯಿಯಾಗು ಹುಟ್ಟುತ್ತಾರೆ' ಎಂದು ಹೇಳಿದ್ದರು.

NGO Organised A Period Feast In Delhi

ಎನ್‌ಜಿಓ ಒಂದರ ಒಟ್ಟು 28 ಮುಟ್ಟಾದ ಮಹಿಳೆಯರು ಸೇರಿ 'ಪೀರಿಯಡ್ ಫೆಸ್ಟ್‌' ಹೊಸ ಆಚರಣೆಯೊಂದನ್ನು ಆರಂಭಿಸಿದ್ದಾರೆ. ಇದರಲ್ಲಿ ಮುಟ್ಟಾದ ಮಹಿಳೆಯರು ಅಡುಗೆ ತಯಾರಿಸಿ ಉಪಮುಖ್ಯಮಂತ್ರಿ ಸೇರಿ ಇನ್ನಿತರರಿಗೆ ಊಟ ಬಡಿಸಿದ್ದಾರೆ.

ಶಿಕ್ಷಕಿಯರು 60 ಮಂದಿಯನ್ನು ವಾಷ್‌ ರೂಂಗೆ ಕರೆದೊಯ್ದು ಪರಿಶೀಲಿಸಿದರು ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಕೋಲಾಹಲ ಎಬ್ಬಿಸಿದ ಈ ಘಟನೆಯ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸ್ಯಾನಿಟರ್ ಪ್ಯಾಡ್ ಕಂಡು ಬಂದ ಕಾರಣ ವಿದ್ಯಾರ್ಥಿನಿಯರನ್ನು ಈ ರೀತಿ ಪರೀಕ್ಷೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ನಮ್ಮನ್ನ ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಪ್ರಿನ್ಸಿಪಾಲ್ ಸೇರಿದಂತೆ ನಾಲ್ವರು ಶಿಕ್ಷಕಿಯರು ಬಲವಂತವಾಗಿ ನಮ್ಮ ಒಳಉಡುಪುಗಳನ್ನು ಬಿಚ್ಚಿಸಿದ್ದರು.

English summary
Sachhi Saheli, an NGO organised a 'Period Feast' yesterday in Mayur Vihar area. The food was prepared & served during the feast by 28 menstruating women.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X