ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ರಾಷ್ಟ್ರಪತಿ: ಬಿಜೆಪಿ ಪಟ್ಟಿಯಲ್ಲಿ ನಾಲ್ಕು ಹೆಸರು

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜೂನ್ 8: ಭಾರತದ ಮುಂದಿನ ರಾಷ್ಟ್ರಪತಿ ಯಾರು? ಸದ್ಯಕ್ಕೆ ಬಹುಚರ್ಚಿತ ವಿಷಯವಾಗಿರುವುದು ಇದೇ. ಜುಲೈ 17 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಜುಲೈ 20 ರಂದು ಹೊರಬೀಳಲಿದೆ.

ಒಬ್ಬ ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿರುವ ಬಿಜೆಪಿ ಎಲ್ಲರೂ ಒಪ್ಪಿಕೊಳಲ್ಳಬಲ್ಲಂಥ ನಾಯಕನನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಲು ಉತ್ಸುಕವಾಗಿದೆ. ಪಕ್ಷದ ಪ್ರಮುಖರು ಈ ಬಗ್ಗೆ ಈಗಾಗಲೇ ಚರ್ಚೆ ನಡೆಸಿದ್ದರೂ, ರಾಷ್ಟ್ರಪತಿ ಅಭ್ಯರ್ಥಿಯ ಕುರಿತು ಒಮ್ಮತದ ನಿರ್ಧಾರವನ್ನಿನ್ನೂ ತೆಗೆದುಕೊಂಡಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.[ರಾಷ್ಟ್ರಪತಿ ಹುದ್ದೆಗೆ ತೇಲಿಬಂದ ಮತ್ತೊಂದು ಅಚ್ಚರಿಯ ಹೆಸರು]

ಸದ್ಯಕ್ಕೆ ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ ಪಟ್ಟಿಯಲ್ಲಿರುವ ಪ್ರಮುಖ ಹೆಸರುಗಳೆಂದರೆ ದ್ರೌಪದಿ ಮುರ್ಮು, ಸುಷ್ಮಾ ಸ್ವರಾಜ್, ಥಾವರ್ ಚಂದ್ ಗೆಹ್ಲೊಟ್, ವೆಂಕಯ್ಯ ನಾಯ್ಡು. ಸದಾ ಒಂದಿಲ್ಲೊಂದು ಅಚ್ಚರಿ ನೀಡದುವಲ್ಲಿ ಖ್ಯಾತಿ ಪಡೆದ ಮೋದಿ ಸರ್ಕಾರ, ರಾಷ್ಟ್ರಪತಿ ಅಭ್ಯರ್ಥಿ ಪಟ್ಟಿಯ ಹೆಸರುಗಳನ್ನು ನಾಲ್ಕಕ್ಕೆ ಸಂಕ್ಷಿಪ್ತಗೊಳಿಸಿದ್ದು, ಅಧಿಕೃತವಾಗಿ ಯಾರ ಹೆಸರನ್ನು ಅಂತಿಮಗೊಳಿಸಲಿದೆ ಎಂಬುದು ಕುತೂಹಲದ ವಿಷಯವಾಗಿದೆ.[ರಾಷ್ಟ್ರಪತಿ ಸ್ಥಾನಕ್ಕೆ ಸುಮಿತ್ರಾ, ಉಪರಾಷ್ಟ್ರಪತಿಯಾಗಿ ವೆಂಕಯ್ಯ!]

ಇದೇ ಜುಲೈನಲ್ಲಿ ಹಾಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಅಧಿಕಾರಾವಧಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಬಿಜೆಪಿ ಪಟ್ಟಿಯಲ್ಲಿ ನಾಲ್ವರು ಅಭ್ಯರ್ಥಿಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.[ಭಾರತದ ಮುಂದಿನ ರಾಷ್ಟ್ರಪತಿ ಮುರಳೀ ಮನೋಹರ ಜೋಷಿ?]

ದ್ರೌಪದಿ ಮುರ್ಮು

ದ್ರೌಪದಿ ಮುರ್ಮು

[ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯಾಗಲು ದೇವೇಗೌಡರಿಗೆ ಆಫರ್!][ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯಾಗಲು ದೇವೇಗೌಡರಿಗೆ ಆಫರ್!]

ಥಾವರ್ ಚಂದ್ ಗೆಹ್ಲೊಟ್

ಥಾವರ್ ಚಂದ್ ಗೆಹ್ಲೊಟ್

ಮೇ 18, 1948 ರಲ್ಲಿ ಹುಟ್ಟಿದ ಥಾವರ್ ಚಂದ್ ಗೆಹ್ಲೊಟ್, ಪ್ರಸ್ತುತ ನರೇಂದ್ರ ಮೋದಿ ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮಧ್ಯಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಅದ ಇವರು ಉಜ್ಜೈನಿಯವರು. ಸದ್ಯಕ್ಕೆ ರಾಷ್ಟ್ರಪತಿ ರೇಸ್ ನಲ್ಲಿ ಇವರ ಹೆಸರು ಕೇಳಿಬರುತ್ತಿದೆ.

ಸುಷ್ಮಾ ಸ್ವರಾಜ್

ಸುಷ್ಮಾ ಸ್ವರಾಜ್

ಪ್ರಸ್ತುತ ಮೋದಿ ಸಚಿವಾಲಯದಲ್ಲಿ ವಿದೇಶಾಂಗ ವ್ಯವಹಾರಗಳ ಖಾತೆಯನ್ನು ನಿರ್ವಹಿಸುತ್ತಿರುವ ಸುಷ್ಮಾ ಸ್ವರಾಜ್ ಸಾಮಾಜಿಕ ಮಾಧ್ಯಮಗಳನ್ನು ಸಮರ್ಥವಾಗಿ ಬಳಸಿಕೊಂಡು ಅದರ ಮೂಲಕವೇ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದಾರೆ. ಸದಸ್ಯಕ್ಕೆ ಇವರ ಹೆಸರೂ ರಾಷ್ಟ್ರಪತಿ ಅಭ್ಯರ್ಥಿಯಾಗಿ ಕೇಳಿಬರುತ್ತಿದ್ದು, ಅಕಸ್ಮಾತ್ ಇವರು ರಾಷ್ಟ್ರಪತಿಯಾಗಿ ಆಯ್ಕೆಯಾದರೆ, ಭಾರತ ಒಬ್ಬರು ಸಮರ್ಥ ರಾಷ್ಟ್ರಪತಿಯನ್ನು ಪಡೆದಂತಾಗುವುದು ಖಂಡಿತ. ಈಗಾಗಲೇ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ಸುಷ್ಮಾ ಸ್ವರಾಜ್ ವಿದೇಶಾಂಮಗ ಸಚಿವೆಯಾಗಿಯೇ ಮುಂದುವರಿಯುವುದು ಕಷ್ಟ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿರುವುದರಿಂದ ಅವರನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಲು ಚಿಂತನೆ ನಡೆಯುತ್ತಿದೆ.

ವೆಂಕಯ್ಯ ನಾಯ್ಡು

ವೆಂಕಯ್ಯ ನಾಯ್ಡು

ವೆಂಕಯ್ಯ ನಾಯ್ಡು ಅವರನ್ನು ಉಪರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ ಎಂಬುದು ಬಲ್ಲಮೂಲಗಳಿಂದ ತಿಳಿದುಬಂದ ಮಾಹಿತಿ. ರಾಜ್ಯಸಭಾ ಸದಸ್ಯರಾಗಿ ಕರ್ನಾಟಕದಿಂದ ಆಯ್ಕೆಯಾದ ವೆಂಕಯ್ಯ ನಾಯ್ಡು ಅವರು ಉಪರಾಷ್ಟ್ರಪತಿ ಹುದ್ದೆಗೆ ಸೂಕ್ತ ಎಂದು ಬಿಜೆಪಿ ನಿತರ್ಧರಿಸಿದ ಎಂಬ ಮಾತೂ ಕೇಳಿಬರುತ್ತಿದೆ. ಹಾಗಂಗತ ಅವರನ್ನು ರಾಷ್ಟ್ರಪತಿ ಹುದ್ದೆಗೂ ಆಯ್ಕೆ ಮಾಡಬಾರದು ಎಂದಿಲ್ಲ. ಅವರನ್ನೇ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಿಸಿ ಬಿಜೆಪಿ ಕೊನೇ ಕ್ಷಣದಲ್ಲಿ ಅಚ್ಚರಿ ನೀಡುವ ಸಂದರ್ಭ ಬರಲಾರದು ಎಂಬಂತಿಲ್ಲ.

ರಾಷ್ಟ್ರಪತಿ ಚುನಾವಣೆ ವೇಳಾಪಟ್ಟಿ

ರಾಷ್ಟ್ರಪತಿ ಚುನಾವಣೆ ವೇಳಾಪಟ್ಟಿ

ಅಧಿಸೂಚನೆಯ ದಿನಾಂಕ: ಜೂನ್ 14, 2017
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ: ಜೂನ್ 28
ನಾಮಪತ್ರ ಪರಿಶೀಲನೆ: ಜೂನ್ 29
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕ: ಜುಲೈ 1
ಚುನಾವಣಾ ದಿನಾಂಕ: ಜುಲೈ 17 (ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ)
ಫಲಿತಾಂಶದ ದಿನಾಂಕ: ಜುಲೈ 20

English summary
Will it be Draupadi Murmu, Sushma Swaraj, Thawar Chand Gehlot or Venkaiah Naidu as the next President of India? On Wednesday, the Election said the the Presidential polls would be held on July 17 and counting for the same would be conducted on June 20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X