• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನವ ವಿವಾಹಿತೆ!

|

ನವದೆಹಲಿ, ಜೂನ್ 25: ಸಂಸದೆಯಾಗಿ ಮೊದಲ ಬಾರಿಗೆ ಸಂಸತ್‌ಗೆ ಆಯ್ಕೆಯಾದ ಬೆನ್ನಲ್ಲೇ ಹಸೆಮಣೆ ಏರಿದ್ದ ನಟಿ-ರಾಜಕಾರಣಿ ನುಸ್ರತ್ ಜಹಾನ್ ಲೋಕಸಭೆಯಲ್ಲಿ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು.

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ನಿಂದ ಸಂಸದೆಯಾಗಿ ಚುನಾಯಿತರಾಗಿರುವ ನುಸ್ರತ್ ಜಹಾನ್ ಕಳೆದ ಬುಧವಾರವಷ್ಟೇ ತಮ್ಮ ದೀರ್ಘ ಕಾಲದ ಗೆಳೆಯ, ಕೋಲ್ಕತಾ ಮೂಲದ ಉದ್ಯಮಿ ನಿಖಿಲ್ ಜೈನ್ ಅವರನ್ನು ಮದುವೆಯಾಗಿದ್ದರು.

ಸಂಸದೆಯಾಗಿ ಪ್ರಮಾಣ ಸ್ವೀಕರಿಸುವ ಮೊದಲೇ ನುಸ್ರತ್ ಮದುವೆ

ಮೂಲತಃ ಮುಸ್ಲಿಂ ಕುಟುಂಬದವರಾದ ನುಸ್ರತ್ ಅವರು, ನಸು ಗುಲಾಬಿ ಮತ್ತು ಬಿಳಿ ಬಣ್ಣದ ಸೀರೆಯಲ್ಲಿ ಹಣೆಗೆ ಸಿಂಧೂರ ಇರಿಸಿಕೊಂಡು, ಕೈ ತುಂಬಾ ಬಳೆಯನ್ನು ತೊಟ್ಟುಕೊಂಡು ಬಂದು ಗಮನ ಸೆಳೆದರು. ಮದುವೆಯಾಗಿ ಕೆಲವೇ ದಿನಗಳು ಕಳೆದಿದ್ದರಿಂದ ಅವರ ಕೈಗಳಲ್ಲಿನ ಮದರಂಗಿ ವಿನ್ಯಾಸ ಇನ್ನೂ ಹೊಳೆಯುತ್ತಿತ್ತು.

ನುಸ್ರತ್ ಮತ್ತು ಅವರ ಸ್ನೇಹಿತೆ ಮಿಮಿ ಚಕ್ರಬೋರ್ತಿ ಇಬ್ಬರೂ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು. ಮೊದಲ ದಿನ ಸಂಸತ್‌ಗೆ ಬಂದಾಗ ಆಧುನಿಕ ಉಡುಗೆ ತೊಟ್ಟಿದ್ದಕ್ಕೆ ವ್ಯಾಪಕ ಟೀಕೆಗೆ ಒಳಗಾಗಿದ್ದ ಇಬ್ಬರೂ, ಮಂಗಳವಾರ ಸಾಂಪ್ರದಾಯಿಕ ಉಡುಗೆಯಲ್ಲಿ ಎಲ್ಲರ ಅಚ್ಚರಿಗೆ ಕಾರಣರಾದರು. ಅವರು ಪ್ರಮಾಣವಚನ ಸ್ವೀಕರಿಸಿದ ಬಗೆಯೂ ಮತ್ತಷ್ಟು ಅಚ್ಚರಿ ಮೂಡಿಸಿತು.

ಈಶ್ವರ ಹೆಸರಿನಲ್ಲಿ ಪ್ರಮಾಣ ವಚನ

ಈಶ್ವರ ಹೆಸರಿನಲ್ಲಿ ಪ್ರಮಾಣ ವಚನ

ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಮುನ್ನ ನುಸ್ರತ್ ಜಹಾನ್ ಅವರು ಎಲ್ಲ ಸಂಸದರಿಗೂ 'ಅಸ್ ಸಲಾಮು ಅಲಾಯ್ಕುಮ್, ನಮಸ್ಕಾರ್' ಎಂದು ಹೇಳಿದರು. ಬಳಿಕ ಬಂಗಾಳಿ ಭಾಷೆಯಲ್ಲಿ ಈಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಕೊನೆಯಲ್ಲಿ 'ಜೈ ಹಿಂದ್, ವಂದೇ ಮಾತರಂ, ಜೈ ಬಾಂಗ್ಲಾ' ಎನ್ನುವ ಮೂಲಕ ಮತ್ತೊಮ್ಮೆ ಸದನದ ಗಮನವನ್ನು ಸೆಳೆದರು. ನಂತರ ಸ್ಪೀಕರ್ ಓ ಬಿರ್ಲಾ ಅವರ ಕಾಲಿಗೆ ನಮಸ್ಕರಿಸಿ ಅವರ ಆಶೀರ್ವಾದ ಪಡೆದರು.

ಗೆಳತಿಯನ್ನು ಅನುಕರಿಸಿದ ಮಿಮಿ

ಗೆಳತಿಯನ್ನು ಅನುಕರಿಸಿದ ಮಿಮಿ

ನುಸ್ರತ್ ಅವರ ಸ್ನೇಹಿತೆಯಾಗಿರುವ ನಟಿ-ರಾಜಕಾರಣಿ ಮಿಮಿ ಚಕ್ರಬೋರ್ತಿ ಅವರೂ ತಮ್ಮ ಗೆಳತಿಯನ್ನು ಅನುಕರಿಸಿದರು.

ಬಿಳಿ ಸಲ್ವಾರ್ ಕಮೀಜ್ ಧರಿಸಿದ್ದ ಮಿಮಿ, ಬೆಂಗಾಲಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದದರು. ತಮ್ಮ ಮಾತಿನ ಕೊನೆಯಲ್ಲಿ 'ಜೈ ಬಾಂಗ್ಲಾ, ಜೈ ಭಾರತ್, ವಂದೇ ಮಾತರಂ' ಎಂದರು.

ಸಂಸತ್ತನ್ನು ಪ್ರಥಮ ಬಾರಿಗೆ ಪ್ರವೇಶಿಸಿರುವ ನವನವೋನ್ಮೇಷಶಾಲಿನಿಯರು

ಸಮಸ್ಯೆಯನ್ನು ಪ್ರಸ್ತಾಪಿಸುತ್ತೇವೆ

ಸಮಸ್ಯೆಯನ್ನು ಪ್ರಸ್ತಾಪಿಸುತ್ತೇವೆ

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನುಸ್ರತ್, 'ಸಂಸತ್‌ನಲ್ಲಿ ಆದ್ಯತೆ ನೀಡಬೇಕಾದ ಅನೇಕ ಸಂಗತಿಗಳಿವೆ. ನಾಳೆ ಸಂಸತ್‌ನಲ್ಲಿ ಮೊದಲು ನಮ್ಮ ಕ್ಷೇತ್ರದ ಸಮಸ್ಯೆಯ ಕುರಿತು ಪ್ರಸ್ತಾಪಿಸುತ್ತೇವೆ. ನಮ್ಮ ದೃಷ್ಟಿಕೋನಗಳನ್ನು ಹಂಚಿಕೊಳ್ಳುತ್ತೇವೆ' ಎಂದರು.

ಸಂಸತ್‌ನಿಂದ ಹೊರಬರುವ ಸಂದರ್ಭದಲ್ಲಿ ಮಾಧ್ಯಮಗಳು ಇಬ್ಬರೂ ಯುವ ರಾಜಕಾರಣಿಗಳನ್ನು ಸುತ್ತುವರಿದವು. ಅವರನ್ನು ದಾಟಿ ಹೋಗುವುದಕ್ಕೆ ಹರಸಾಹಸ ಪಡಬೇಕಾಯಿತು. ಒಂದು ಹಂತದಲ್ಲಿ ಇಬ್ಬರೂ ಸಂಸತ್‌ಗೆ ಮರಳಿ ಒಳಹೊಕ್ಕರು. ಭದ್ರತಾ ಸಿಬ್ಬಂದಿ ಅವರಿಗೆ ದಾರಿ ಮಾಡಿಕೊಟ್ಟ ಬಳಿಕ ಹೊರಕ್ಕೆ ಹೋದರು.

ಟರ್ಕಿಯಲ್ಲಿ ಮದುವೆ

ಟರ್ಕಿಯಲ್ಲಿ ಮದುವೆ

ನುಸ್ರತ್ ಅವರ ಮದುವೆ ಟರ್ಕಿಯಲ್ಲಿ ನಡೆದಿತ್ತು. ಹೀಗಾಗಿ ಜೂನ್ 17 ಮತ್ತು 18ರಂದು ನಡೆದಿದ್ದ ಪ್ರಮಾಣ ವಚನ ಸ್ವೀಕಾರದಲ್ಲಿ ನುಸ್ರತ್ ಮತ್ತು ಮಿಮಿ ಇಬ್ಬರೂ ಗೈರಾಗಿದ್ದರು. ಈ ಕಾರಣದಿಂದ ಇಬ್ಬರೂ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು.

ಟರ್ಕಿಯ ಬೋಡ್ರಮ್ ಪಟ್ಟಣದಲ್ಲಿ ಮದುವೆ ನಡೆದಿತ್ತು. ಕುಟುಂಬ ವರ್ಗ ಮತ್ತು ಅವರ ಆಪ್ತ ಸ್ನೇಹಿತರು ಹಾಗೂ ಬಂಧುಗಳು ಭಾಗವಹಿಸಿದ್ದರು.

ಅಭಿನಂದನ್ ಮೀಸೆಯನ್ನು 'ರಾಷ್ಟ್ರೀಯ ಮೀಸೆ'ಯನ್ನಾಗಿ ಘೋಷಿಸಿ: ಚೌಧರಿ

ಟೀಕೆಗೆ ಗುರಿಯಾಗಿದ್ದ ಸ್ನೇಹಿತೆಯರು

ಟೀಕೆಗೆ ಗುರಿಯಾಗಿದ್ದ ಸ್ನೇಹಿತೆಯರು

ಸ್ನೇಹಿತೆಯರಾದ ನುಸ್ರತ್ ಪಶ್ಚಿಮ ಬಂಗಾಳದ ಬಸಿರ್‌ಹತ್ ಕ್ಷೇತ್ರದಿಂದ ಗೆದ್ದಿದ್ದರೆ, ಮಿಮಿ ಜಾದವಪುರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.

ಸಂಸತ್‌ಗೆ ಮೊದಲ ದಿನ ಪ್ರವೇಶಿಸಿದ ಸಂದರ್ಭದಲ್ಲಿ ಇಬ್ಬರೂ ಆಧುನಿಕ ಉಡುಗೆ ಧರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಒಳಗಾಗಿತ್ತು.

ಮೊದಲ ಬಾರಿಗೆ ಸಂಸದೆಯರಾಗಿ ಆಯ್ಕೆಯಾದ ಬಳಿಕ ಸಂಸತ್ ಮುಂದೆ ಚಿತ್ರಗಳನ್ನು ತೆಗೆಸಿಕೊಂಡಿದ್ದ ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಪ್ರಜಾಪ್ರಭುತ್ವದ ದೇಗುಲ ಎಂದೇ ಪರಿಗಣಿಸಿರುವ ಸಂಸತ್ ಒಳಗೆ ಪ್ರವೇಶಿಸುವಾಗ ಸಭ್ಯ ಹಾಗೂ ಸೂಕ್ತ ಉಡುಪುಗಳನ್ನು ಧರಿಸಬೇಕು ಎಂದು ಅಸಮಾಧಾನ ವ್ಯಕ್ತವಾಗಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
West Bengal TMC MPs, actor turned politicians Mimi Chakraborty and newly married Nusrat Jahan took oath on Tuesday on parliament.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more