ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದ ವಿರುದ್ದ ದೆಹಲಿ ಕೋರ್ಟ್ ಮೆಟ್ಟಿಲೇರಿದ ನ್ಯೂಜಿಲೆಂಡ್ ಯೂಟ್ಯೂಬರ್‌ನ ಪತ್ನಿ

|
Google Oneindia Kannada News

ನವದೆಹಲಿ, ಜು.10: ಯೂಟ್ಯೂಬ್ ವ್ಲಾಗ್ಗರ್ ಕಾರ್ಲ್ ಎಡ್ವರ್ಡ್ ರೈಸ್‌ನ ಪತ್ನಿ ತನ್ನ ಪತಿಯನ್ನು ಕಪ್ಪುಪಟ್ಟಿಗೆ ಸೇರಿಸಿರುವ ಹಾಗೂ ಭಾರತಕ್ಕೆ ಪ್ರವೇಶಿಸಲು ವೀಸಾ ನಿರಾಕರಿಸುವ ಕೇಂದ್ರ ಸರ್ಕಾರದ "ಅನಿಯಂತ್ರಿತ ಮತ್ತು ಅವಿವೇಕದ" ನಿರ್ಧಾರವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಅರ್ಜಿದಾರರು (ಕೇಂದ್ರ) "ಅನಿಯಂತ್ರಿತವಾಗಿ ಕಪ್ಪುಪಟ್ಟಿಗೆ ಸೇರಿಸಲ್ಪಟ್ಟ" ಪತಿಗೆ ವೀಸಾ ನಿರಾಕರಿಸುವ ಮೂಲಕ, ನನ್ನ ಪತಿಯೊಂದಿಗೆ ವಾಸಿಸಲು ಸಾಧ್ಯವಾಗದಂತಾಗಿದೆ. ಇದರಿಂದಾಗಿ ನಮ್ಮಿಬ್ಬರಿಗೆ ಸಂವಿಧಾನದ 21 ನೇ ವಿಧಿ ನೀಡುವ ಜೀವನ ಮತ್ತು ಘನತೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸಲಾಗಿದೆ," ಎಂದು ಹೇಳಿದ್ದಾರೆ.

ವಿಶ್ವದಲ್ಲಿ ವಾಸಯೋಗ್ಯವಾದ 10 ನಗರಗಳು ಯಾವುದು?- ಇಲ್ಲಿದೆ ಸಮೀಕ್ಷೆ ವರದಿ ವಿಶ್ವದಲ್ಲಿ ವಾಸಯೋಗ್ಯವಾದ 10 ನಗರಗಳು ಯಾವುದು?- ಇಲ್ಲಿದೆ ಸಮೀಕ್ಷೆ ವರದಿ

ಅರ್ಜಿಯು ಮುಂದಿನ ವಾರ ವಿಚಾರಣೆಗೆ ಬರಲಿದೆ ಎಂದು ಅರ್ಜಿದಾರರಾದ ಮನೀಷಾ ಮಲಿಕ್ ಮತ್ತು ಆಕೆಯ ಪತಿ ತಿಳಿಸಿದ್ದಾರೆ. ಕಾರ್ಲ್ ರಾಕ್ ಎಂದು ಜನಪ್ರಿಯರಾದ ಮನೀಷಾ ಪತಿ ಯೂಟ್ಯೂಬ್ ವ್ಲಾಗ್ಗರ್‌ ಆಗಿದ್ದು ಭಾರತದ ಬಹುಭಾಗಕ್ಕೆ ಭೇಟಿ ನೀಡಿ ಭಾರತದ ಸೌಂದರ್ಯವನ್ನು ಸೆರೆಹಿಡಿಯಲು ಹಾಗೂ ಪ್ರವಾಸೋದ್ಯಮದ ಉತ್ತೇಜನಕ್ಕೆ ಸಹಕರಿಸಿದ್ದಾರೆ.

New Zealand YouTuber Karl Rices wife moves Delhi HC challenging Centres decision blacklisting him

ಹಲವಾರು ಪ್ರಾತಿನಿಧ್ಯಗಳನ್ನು ಮನೀಷಾ ಹಾಗೂ ಆಕೆಯ ನ್ಯೂಜಿಲೆಂಡ್ ಮೂಲದ ಪತಿ ಆದ್ಯತೆ ನೀಡಿದ್ದರೂ ಸಹ ಅಧಿಕಾರಿಗಳು ಆತನನ್ನು ಪ್ಪುಪಟ್ಟಿಗೆ ಸೇರಿಸುವ ಕಾರಣವನ್ನು ತಿಳಿಸಿಲ್ಲ ಎಂದು ಅರ್ಜಿ ಹೇಳಿದೆ. ಹಾಗೆಯೇ ಇದು ವಿವಾಹಿತ ದಂಪತಿಗಳ ಪ್ರತ್ಯೇಕತೆಗೆ ಕಾರಣವಾಗಿದೆ. ಯಾವುದೇ ವೀಸಾ ಷರತ್ತುಗಳ ಉಲ್ಲಂಘನೆಯ ಬಗ್ಗೆ ಸೂಚಿಸುವ ಯಾವುದೇ ಅವಕಾಶ ಅಥವಾ ಸೂಚನೆ ನೀಡಿಲ್ಲ ಎಂದು ಹೇಳಲಾಗಿದೆ.

ಕೇಂದ್ರದ ಈ ಕ್ರಮವನ್ನು ಅಧಿಕಾರದ ಅನಿಯಂತ್ರಿತ ದುರುಪಯೋಗ ಎಂದು ಹೇಳಿರುವ ಈ ಅರ್ಜಿಯು, ಇದು ಸಂವಿಧಾನದ ಆರ್ಟಿಕಲ್ 19 (ವಾಕ್ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಕೆಲವು ಹಕ್ಕುಗಳ ರಕ್ಷಣೆ) ಅಡಿಯಲ್ಲಿ ಅರ್ಜಿದಾರರ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ.

ತನ್ನ ವೀಸಾದ ನಿಯಮಗಳು ಮತ್ತು ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ ನ್ಯೂಜಿಲೆಂಡ್ ಪ್ರಜೆಯನ್ನು ಮುಂದಿನ ವರ್ಷದವರೆಗೆ ಭಾರತಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.

ಲಸಿಕೆ ಪಡೆದ ಪ್ರವಾಸಿಗರಿಗೆ ಮತ್ತೆ ಫ್ರಾನ್ಸ್‌ಗೆ ಸ್ವಾಗತ - ಭಾರತೀಯರಿಗೆ ನಿಷೇಧ ಮುಂದುವರಿಕೆ ಲಸಿಕೆ ಪಡೆದ ಪ್ರವಾಸಿಗರಿಗೆ ಮತ್ತೆ ಫ್ರಾನ್ಸ್‌ಗೆ ಸ್ವಾಗತ - ಭಾರತೀಯರಿಗೆ ನಿಷೇಧ ಮುಂದುವರಿಕೆ

ವಿದೇಶಿ ಪ್ರಜೆ ಪ್ರವಾಸಿ ವೀಸಾದ ಮೂಲಕ ಬಂದು ವ್ಯಾಪಾರ ಚಟುವಟಿಕೆಗಳನ್ನು ಮಾಡುತ್ತಿದ್ದ ಮತ್ತು ಇತರ ವೀಸಾ ಷರತ್ತುಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದಿದೆ ಎಂದು ಹೇಳಿರುವ ಕೇಂದ್ರ ಸರ್ಕಾರ ಯಾವುದೇ ವಿಚಾರವನ್ನು ನಿರ್ದಿಷ್ಟಪಡಿಸಿಲ್ಲ.

2019 ರಲ್ಲಿ ಮದುವೆಯಾದಾಗಿನಿಂದ ದಂಪತಿಗಳು ದೆಹಲಿಯಲ್ಲಿ ನೆಲೆಸಿದ್ದಾರೆ. ಕಳೆದ ವರ್ಷ ಅಕ್ಟೋಬರ್ 10 ರಿಂದ ನ್ಯೂಜಿಲೆಂಡ್‌ನಿಂದ ಭಾರತಕ್ಕೆ ಮರಳಲು ರೈಸ್‌ಗೆ ಸಾಧ್ಯವಾಗಲಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

"ಅರ್ಜಿದಾರರ ಪತಿ ಕಾರ್ಲ್ ಎಡ್ವರ್ಡ್ ರೈಸ್, ನ್ಯೂಜಿಲೆಂಡ್ ಮತ್ತು ನೆದರ್‌ಲ್ಯಾಂಡ್‌ನ ಉಭಯ ರಾಷ್ಟ್ರೀಯತೆಯನ್ನು ಹೊಂದಿದ್ದಾರೆ. 2013 ರಿಂದ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ದೇಶದ ಕಾನೂನುಗಳು ಮತ್ತು ವೀಸಾದ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. 2013 ರಿಂದ ಇಡೀ ಅವಧಿಯಲ್ಲಿ, ಅರ್ಜಿದಾರರ ಪತಿಗೆ ವಿವಿಧ ಸಂದರ್ಭಗಳಲ್ಲಿ ಭಾರತೀಯ ವೀಸಾ ನೀಡಲಾಗಿದ್ದರೂ, ಅರ್ಜಿದಾರರ ಪತಿಯ ವಿರುದ್ಧ ಒಂದೇ ಒಂದು ಆರೋಪವೂ ಸಹ ಬಂದಿಲ್ಲ," ಎಂದು ವಕೀಲ ಫುಝೈಲ್‌ ಅಹ್ಮದ್‌ ಅಯ್ಯುಬಿ ಮೂಲಕ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.

ವಿವಾಹದ ನಂತರ, ರೈಸ್‌ಗೆ ಎಕ್ಸ್ -2 ವೀಸಾವನ್ನು ನೀಡಲಾಗಿದೆ. (ಭಾರತೀಯ ನಾಗರಿಕರ ಸಂಗಾತಿ / ಮಕ್ಕಳಿಗಾಗಿ). ಇದು ಮೇ 2019 ರಿಂದ ಮೇ 2024 ರವರೆಗೆ ಮಾನ್ಯತೆಯ ಅವಧಿಯನ್ನು ಹೊಂದಿತ್ತು. ಈ ವೀಸಾದಾರರಿಗೆ ಭಾರತದಿಂದ 180 ದಿನಗಳಾಗುತ್ತಿದ್ದಂತೆ ನಿರ್ಗಮಿಸುವಂತೆ ಅಥವಾ ಸಂಬಂಧಪಟ್ಟ ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿಗೆ ಈ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಲಾಗಿತ್ತು.

"ರಾಷ್ಟ್ರದಿಂದ ನಿರ್ಗಮಿಸುವ ಮೇಲಿನ ಷರತ್ತುಗೆ ಅನುಸಾರವಾಗಿ, 2020 ರ ಅಕ್ಟೋಬರ್ 10 ರಂದು ರೈಸ್ ಭಾರತವನ್ನು ತೊರೆದಿದ್ದಾರೆ. ಭಾರತೀಯ ವೀಸಾವನ್ನು ನೀಡುವ ಯಾವುದೇ ಅರ್ಜಿಯನ್ನು ಪ್ರತಿವಾದಿಗಳು ತಿರಸ್ಕರಿಸುತ್ತಿದ್ದ ಕಾರಣ ಬಳಿಕ ಭಾರತಕ್ಕೆ ಮರಳಲು ಸಾಧ್ಯವಾಗಲಿಲ್ಲ," ಎಂದು ಹೇಳಲಾಗಿದೆ. ರೈಸ್‌ನನ್ನು ಹಠಾತ್‌ ಕಪ್ಪುಪಟ್ಟಿಗೆ ಸೇರಿಸಿರುವ ಬಗ್ಗೆ ವಿಚಾರಣೆ ನಡೆಸಲು ದಂಪತಿ ಮನವಿ ಮಾಡಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
YouTube vlogger Karl Edward Rice's wife has approached the Delhi High Court challenging the central government decision blacklisting him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X