ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Happy New Year: ಎಣ್ಣೆ ಹಾಕುವ ಮುನ್ನ ಹುಷಾರ್ ಹುಷಾರ್!

|
Google Oneindia Kannada News

ದೆಹಲಿ, ಜನವರಿ.01: ಹ್ಯಾಪಿ ನ್ಯೂ ಇಯರ್. ಹೊಸ ವರ್ಷದ ಸೆಲೆಬ್ರೆಷನ್ ಎಂದರೆ ಅಲ್ಲಿ ಡ್ರಿಂಕ್ಸ್ ಕಡ್ಡಾಯ ಅನ್ನೋ ಮನಸ್ಥಿತಿ ಯುವ ಜನಾಂಗದ ಜನರಲ್ಲಿ ಮೂಡಿ ಬಿಟ್ಟಿದೆ. ಎಣ್ಣೆ ಹಾಕದೇ ಹೊಸ ವರ್ಷಾಚರಣೆ ಅಸಾಧ್ಯ ಎನ್ನುವ ಮಟ್ಟಿಗೆ ಜನರು ಅದಕ್ಕೆ ಒಗ್ಗಿಕೊಂಡಿದ್ದಾರೆ.
ನ್ಯೂ ಇಯರ್ ಎಂದಾಕ್ಷಣ ಮೊದಲು ನೆನಪಿಗೆ ಬರುವುದೇ ಕಿಕ್ ಏರಿಸುವ ಗುಂಡು ಪಾರ್ಟಿ. ಎಣ್ಣೆ ಹಾಕಿಕೊಂಡು ಮಸ್ತ್ ಮಸ್ತ್ ಡ್ಯಾನ್ಸ್ ಮಾಡುವುದನ್ನೇ ಹೊಸ ವರ್ಷಾಚರಣೆ ಎನ್ನುವಂತಾಗಿದೆ. ಹೀಗೆ ಎಣ್ಣೆ ಏಟಿನಲ್ಲಿ ತೇಲುತ್ತಿದ್ದ ಮಂದಿಗೆ ಪೊಲೀಸರು ಸರಿಯಾಗಿ ಪಾಠ ಕಲಿಸಿದ್ದಾರೆ.

ಕುಡಿದು ವಾಹನ ಏರಿದವರಿಗೆ ದಂಡ ಹಾಕಿ ಮತ್ತಿಳಿಸಿದ ಬೆಂಗಳೂರು ಪೊಲೀಸರು
ದೇಶದ ಮೆಟ್ರೋ ಸಿಟಿಗಳಲ್ಲಿ ಗುಂಡಿನ ಗುಂಡಿನಲ್ಲಿ ಗಾಡಿ ಓಡಿಸುತ್ತಿದ್ದವರ ಮೇಲೆ ಪೊಲೀಸರು ಸರಿಯಾಗಿ ಕೇಸ್ ಹಾಕಿದ್ದಾರೆ. ಕೆಲವೇ ಕೆಲವು ಗಂಟೆಗಳಲ್ಲಿ ಲಕ್ಷಾಂತರ ರೂಪಾಯಿ ದಂಡವನ್ನೂ ವಸೂಲಿ ಮಾಡಿದ್ದಾರೆ. ಖಾಕಿ ಕೊಟ್ಟ ಶಾಕ್ ಗೆ ಕಾರ್, ಬೈಕ್ ಸವಾರರ ಕಿಕ್ ಇಳಿದು ಹೋಗಿದೆ.

New Year Celebration: 1,092 Drink And Drive Cases Report In Maharastra

ಅತಿಹೆಚ್ಚು ಕೇಸ್ ದಾಖಲಾಗಿದ್ದು ಎಲ್ಲಿ?

ಅತಿಹೆಚ್ಚು ಕೇಸ್ ದಾಖಲಾಗಿದ್ದು ಎಲ್ಲಿ?

ಮಹಾರಾಷ್ಟ್ರದ ನಾಗ್ಪುರ್ ನಲ್ಲಿ ಅತಿಹೆಚ್ಚು ಡ್ರಿಂಕ್ ಆಂಡ್ ಡ್ರೈವ್ ಪ್ರಕರಣಗಳು ದಾಖಲಾಗಿರುವ ಬಗ್ಗೆ ವರದಿಯಾಗಿದೆ. ಕುಡಿದ ಮತ್ತಿನಲ್ಲಿ ವಾಹನ ಚಾಲನೆ ಮಾಡಿರುವ ಹಿನ್ನೆಲೆ 1,092 ಪ್ರಕರಣಗಳು ವರದಿಯಾಗಿವೆ. ನಗರದ 50 ಕಡೆಗಳಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು 592 ಡ್ರಿಂಕ್ ಆಂಡ್ ಡ್ರೈವ್ ಹಾಗೂ ಸಂಚಾರಿ ನಿಯಮ ಉಲ್ಲಂಘಿಸಿ 500 ಪ್ರಕರಣಗಳು ವರದಿಯಾಗಿವೆ.

ಮುಂಬೈನಲ್ಲಿ 778 ವಾಹನ ಸವಾರರ ವಿರುದ್ಧ ಪ್ರಕರಣ

ಮುಂಬೈನಲ್ಲಿ 778 ವಾಹನ ಸವಾರರ ವಿರುದ್ಧ ಪ್ರಕರಣ

ಇನ್ನು, ಮಹಾನಗರ ಮುಂಬೈನಲ್ಲಿ ಹೊಸ ವರ್ಷಾಚರಣೆಯ ಹಿಂದಿನ ದಿನ 778 ಡ್ರಿಂಕ್ ಆಂಡ್ ಡ್ರೈವ್ ಪ್ರಕರಣಗಳ ಬಗ್ಗೆ ವರದಿಯಾಗಿದೆ. ಈ ಪೈಕಿ 578 ಬೈಕ್ ಸವಾರರಿಗೆ ದಂಡ ವಿಧಿಸಲಾಗಿದ್ದು, 200 ಕಾರ್ ಚಾಲಕ ವಿರುದ್ಧ ಡ್ರಿಂಕ್ ಆಂಡ್ ಡ್ರೈವ್ ಕೇಸ್ ರಿಜಿಸ್ಟರ್ ಮಾಡಿಕೊಳ್ಳಲಾಗಿದೆ. ಸಂಚಾರ ನಿಯಮ ಉಲ್ಲಂಘಿಸಿದಕ್ಕಾಗಿ ಚಾಲನಾ ಪರವಾನಗಿ ರದ್ದುಗೊಳಿಸುವ ಬಗ್ಗೆ ಪೊಲೀಸರು ಆರ್ ಟಿಓ ಅಧಿಕಾರಿಗಳ ಗಮನಕ್ಕೆ ತರಲು ತೀರ್ಮಾನಿಸಿದ್ದಾರೆ.

ಕಿಕ್ ಏರಿದ ಮಂದಿಗೆ ಖಾಕಿ ಪಡೆ ಕೊಟ್ಟಿತು ಖಡಕ್ ಶಾಕ್

ಕಿಕ್ ಏರಿದ ಮಂದಿಗೆ ಖಾಕಿ ಪಡೆ ಕೊಟ್ಟಿತು ಖಡಕ್ ಶಾಕ್

ಬೆಂಗಳೂರಿನಲ್ಲೂ ಹೊಸ ವರ್ಷಾಚರಣೆ ದಿನ ಎಣ್ಣೆಪ್ರಿಯರಿಗೆ ಪೊಲೀಸರು ಸರಿಯಾಗಿ ಬಿಸಿ ಮುಟ್ಟಿಸಿದರು. ಡಿಸೆಂಬರ್.31ರ ರಾತ್ರಿ 8 ಗಂಟೆಯಿಂದಲೇ ನಗರದಾದ್ಯಂತ ಡ್ರಿಂಕ್ ಆಂಡ್ ಡ್ರೈವ್ ತಪಾಸಣೆಗೆ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ನಾಲ್ಕೈದು ಗಂಟೆಗಳಲ್ಲೇ 426 ಡ್ರಿಂಕ್ ಆಂಡ್ ಡ್ರೈವ್ ಪ್ರಕರಣಗಳು ದಾಖಲಾಗಿವೆ. ಕಳೆದ ನವೆಂಬರ್ ನಿಂದ ಡಿಸೆಂಬರ್.31ರೊಳಗೆ ನಗರದಲ್ಲಿ ಸುಮಾರು 37,654 ಡ್ರಿಂಕ್ ಆಂಡ್ ಡ್ರೈವ್ ಪ್ರಕರಣಗಳು ದಾಖಲಾಗಿವೆ ಎಂದು ಹೇಳಲಾಗುತ್ತಿದೆ.

ರಾಷ್ಟ್ರ ರಾಜಧಾನಿಯಲ್ಲೂ ಪೊಲೀಸ್ ಕಾರ್ಯಾಚರಣೆ

ರಾಷ್ಟ್ರ ರಾಜಧಾನಿಯಲ್ಲೂ ಪೊಲೀಸ್ ಕಾರ್ಯಾಚರಣೆ

ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಕೋಲ್ಕತ್ತಾದಲ್ಲೂ ಹೊಸ ವರ್ಷಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ವೇಳೆ ಕೋಲ್ಕತ್ತಾದಲ್ಲಿ 188 ಡ್ರಿಂಕ್ ಆಂಡ್ ಡ್ರೈವ್ ಕೇಸ್ ಗಳು ದಾಖಲಾಗಿದ್ದರೆ, 36 ಅತಿವೇಗದ ಚಾಲನೆ ಪ್ರಕರಣಗಳು ದಾಖಲಾಗಿವೆ. ಇನ್ನು, ದೆಹಲಿ, ಹರಿಯಾಣ ಹಾಗೂ ಗುರುಗ್ರಾಮ್ ನ ಹಲವೆಡೆ ಕುಡಿದು ವಾಹನ ಚಾಲನೆ ಮಾಡಿದವರ ಮೇಲೆ ಪೊಲೀಸರು ಸರಿಯಾಗಿ ದಂಡ ವಿಧಿಸಿದ್ದಾರೆ.

English summary
New Year Celebration: 1,092 Drink And Drive Cases Report In Maharastra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X