ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋಟುಗಳಿಗೆ ಹೊಸ ಭದ್ರತಾ ಅಂಶ: ಕೇಂದ್ರ ಸರ್ಕಾರ ಆಶ್ವಾಸನೆ

ನೋಟು ಮುದ್ರಣಾಲಯಗಳಲ್ಲಿ ಬಳಸಲಾಗುತ್ತಿರುವ ನೋಟುಗಳ ಭದ್ರತಾ ಅಂಶಗಳನ್ನು 2005ರಲ್ಲಿ ಸಿದ್ಧಪಡಿಸಲಾಗಿತ್ತು. ಆನಂತರ, ಆ ಅಂಶಗಳಲ್ಲಿ ಯಾವುದೇ ಪರಿಷ್ಕರಣೆಯಾಗಿರಲಿಲ್ಲ.

|
Google Oneindia Kannada News

ನವದೆಹಲಿ, ಏಪ್ರಿಲ್ 3: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ವತಿಯಿಂದ ಬಿಡುಗಡೆಗೊಂಡಿರುವ ಹೊಸ 500 ಹಾಗೂ 2000 ರು. ನೋಟುಗಳ ಭದ್ರತಾ ಅಂಶಗಳನ್ನು ಪಾಕಿಸ್ತಾನದಲ್ಲಿ ನಕಲು ಮಾಡಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ತಯಾರಿಸಲಾಗುವ ನೋಟುಗಳಿಗೆ ಹೊಸ ಭದ್ರತಾ ಅಂಶಗಳನ್ನು ಅಳವಡಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಸದ್ಯಕ್ಕೆ, ನೋಟು ಮುದ್ರಣಾಲಯಗಳಲ್ಲಿ ಬಳಸಲಾಗುತ್ತಿರುವ ನೋಟುಗಳ ಭದ್ರತಾ ಅಂಶಗಳನ್ನು 2005ರಲ್ಲಿ ಸಿದ್ಧಪಡಿಸಲಾಗಿತ್ತು. ಆನಂತರ, ಆ ಅಂಶಗಳಲ್ಲಿ ಯಾವುದೇ ಪರಿಷ್ಕರಣೆಯಾಗಿರಲಿಲ್ಲ.[ಕಾಶ್ಮೀರದ ಉಗ್ರರು, ಯುವಕರಿಗೆ ಪಾಕ್ ಕಡೆಯಿಂದ ನೇರ ಸೂಚನೆ!]

New Security Features for New Notes: Centre to Lok Sabha

ಕೇಂದ್ರ ಸರ್ಕಾರವು ಕಳೆದ ವರ್ಷ ನವೆಂಬರ್ 8ರಂದು ಅಪನಗದೀಕರಣ ನಿರ್ಧಾರವನ್ನು ಏಕಾಏಕಿ ಕೈಗೊಂಡ ಹಿನ್ನೆಲೆಯಲ್ಲಿ, ಭಾರತೀಯ ರಿಸರ್ವ ಬ್ಯಾಂಕ್ ನ ತಜ್ಞರಿಗೆ ಸಮಯದ ಅಭಾವ ತಲೆದೋರಿ, ಹೊಸ 500, 1000 ರು. ನೋಟುಗಳಿಗೆ ಹೊಸ ಭದ್ರತಾ ಅಂಶಗಳನ್ನು ಅಳವಡಿಸಲು ಸಾಧ್ಯವಾಗಿರಲಿಲ್ಲ.

ಹಾಗಾಗಿ, 2005ರಿಂದಲೂ ಚಾಲ್ತಿಯಲ್ಲಿದ್ದ ಭದ್ರತಾ ಅಂಶಗಳನ್ನು ಆಧರಿಸಿಯೇ ಹೊಸ ನೋಟುಗಳನ್ನು ಮುದ್ರಿಸಲಾಯಿತು. ಆದರೆ, ಇದರಿಂದಾಗಿ, 2005ರ ಭದ್ರತಾ ಅಂಶಗಳನ್ನು ಕೆಲ ವರ್ಷಗಳ ಹಿಂದೆಯೇ ತನ್ನಲ್ಲಿ ನಕಲು ಮಾಡಿಟ್ಟುಕೊಂಡಿದ್ದ ಪಾಕಿಸ್ತಾನಕ್ಕೆ ಹೊಸ ನೋಟುಗಳನ್ನು ಬೇಗನೇ ನಕಲು ಮಾಡುವುದು ಸಾಧ್ಯವಾಯಿತು.[ಕೇರಳದ ISIS ಸಹ ಸಂಸ್ಥೆಯಿಂದ ನ್ಯಾಯಾಧೀಶರ ಹತ್ಯೆಗೆ ಸಂಚು!]

ಅಪನಗದೀಕರಣ ನಿರ್ಧಾರದ ನಂತರದ ಮೂರು ತಿಂಗಳ ಅವಧಿಯಲ್ಲಿ ಭಾರತದಲ್ಲಿ ಸುಮಾರು 2 ಸಾವಿರ ರು. ಮುಖಬೆಲೆಯ ಸುಮಾರು 3,346 ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ, ಶೀಘ್ರದಲ್ಲೇ ಹೊಸ ಭದ್ರತಾ ಅಂಶಗಳನ್ನು ಅಳವಡಿಸಲಾಗುವುದು ಎಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ತಿಳಿಸಿದೆ. ಅಲ್ಲದೆ, ಭದ್ರತಾ ಅಂಶಗಳನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ಪರಿಷ್ಕರಿಸಲಾಗುವುದು ಎಂದೂ ಅದು ಆಶ್ವಾಸನೆ ನೀಡಿತು.

English summary
The new Rs 500 and 2,000 notes have the same security features that were introduced in 2005. The new notes have already been counterfeited in Pakistan. In fact almost all the security features have been replicated by the ISI module which deals in fake currency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X