ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿಗೆ ಹೊಸ ವೈಭವೋಪೇತ ನಿವಾಸ: ಇರಲಿವೆ ಸುರಂಗ ಮಾರ್ಗಗಳು!

|
Google Oneindia Kannada News

ನವದೆಹಲಿ, ಫೆಬ್ರವರಿ 05: ಪ್ರಧಾನಿಗಳ ನಿವಾಸಕ್ಕೆ ಹೊಸದಾದ ಬೃಹತ್ ಮತ್ತು ವೈಭವೋಪೇತ ನಿವಾಸವನ್ನು ನಿರ್ಮಿಸಲು ನೀಲನಕ್ಷ ಸಿದ್ದವಾಗಿದೆ. ಈ ಬೃಹತ್ ಬಂಗಲೆಯಲ್ಲಿ ಸುರಂಗ ಮಾರ್ಗಗಳು ಸಹ ಇರಲಿವೆ.

ಹೌದು, ಈವರೆಗೆ ಒಂಬತ್ತು ಪ್ರಧಾನಿಗಳು ವಾಸವಿರುವ ಈಗಿರುವ ನವದೆಹಲಿಯ ಕಲ್ಯಾಣ ಮಾರ್ಗದ ಪ್ರಧಾನಿ ನಿವಾಸ ಕೆಲವೇ ವರ್ಷದಲ್ಲಿ ಖಾಲಿ ಹೊಡೆಯಲಿದೆ. ಅಂದುಕೊಂಡಂತೆ ಕಾಮಗಾರಿ ನಡೆದರೆ ಹೊಸ ನಿವಾಸದಲ್ಲಿ ಅಡಿಇಡುವ ಮೊದಲ ಪ್ರಧಾನಿ ಮೋದಿಯೇ ಆಗಲಿದ್ದಾರೆ.

ತಂತ್ರಜ್ಞಾನ, ವಾಸ್ತುಶಿಲ್ಪ, ಭದ್ರತೆ, ಸುರಕ್ಷತೆ, ಸುಂದರತೆ ಎಲ್ಲವನ್ನೂ ಒಳಗೊಂಡಿರುವ ಭಾರಿ ಬೃಹತ್ ಆದ ಪ್ರಧಾನಿ ನಿವಾಸ 2024 ರ ವೇಳೆಗೆ ಕಾರ್ಯಾರಂಭ ಮಾಡಲಿದೆ. ಈ ಬೃಹತ್ ನಿವಾಸದ ನೀಲನಕ್ಷೆ ಈಗಾಗಲೇ ಸಿದ್ದವಾಗಿದೆ.

ಹೊಸ ಪ್ರಧಾನಿ ನಿವಾಸವು ದೆಹಲಿಯ ಸೌಥ್ ಬ್ಲಾಕ್‌ ಬಳಿಯ ರೈಸಿನಾ ಹಿಲ್‌ ಬಳಿ ನಿರ್ಮಾಣವಾಗಲಿದೆ. ಕೇವಲ ಪ್ರಧಾನಿ ನಿವಾಸ ಮಾತ್ರವಲ್ಲ ಪಾರ್ಲಿಮೆಂಟ್ ಅನ್ನು ಸಹ ಹೊಸದಾಗಿ ನಿರ್ಮಿಸಿ, ಸಚಿವರ ನಿವಾಸಗಳನ್ನು ನಿರ್ಮಿಸಿ ಎಲ್ಲರನ್ನೂ ಇನ್ನಷ್ಟು ಹತ್ತಿರ ತರುವ ಕಾರ್ಯ ಪ್ರಗತಿಯಲ್ಲಿದೆ.

1927 ರಲ್ಲಿ ಪ್ರಾರಂಭವಾದ ಸಂಸತ್‌ ಭವನ

1927 ರಲ್ಲಿ ಪ್ರಾರಂಭವಾದ ಸಂಸತ್‌ ಭವನ

1927 ರಲ್ಲಿ ನಿರ್ಮಿಸಲಾದ ಸಂಸತ್‌ ಭವನವನ್ನು ಪುನರ್‌ನವೀಕರಿಸಿ ಬಳಸುವ ಪ್ರಸ್ತಾವವನ್ನು ತಳ್ಳಿಹಾಕಲಾಗಿದ್ದು, ತಂತ್ರಜ್ಞಾನ ಆಧಾರಿತ ಸಕಲ ಸೌಕರ್ಯಗಳುಳ್ಳ ಹೊಸ ಸಂಸತ್ತನ್ನೇ ನಿರ್ಮಿಸಲು ನಿರ್ಧರಿಸಲಾಗಿದೆ. ಈಗಿರುವ ಸಂಸತ್ತಿನ ಮೂರರಷ್ಟು ದೊಡ್ಡ ಸಂಸತ್ತನ್ನು ನಿರ್ಮಿಸಲಾಗುತ್ತಿದ್ದು, ಮೂರು ಅತಿ ದೊಡ್ಡ ಹಾಲ್‌ಗಳನ್ನು ನಿರ್ಮಿಸಲಾಗುತ್ತಿದೆ.

ಎಚ್‌ಸಿಪಿ ಡಿಸೈನ್ ಆಂಡ್ ಪ್ಲಾನಿಂಗ್ ಸಂಸ್ಥೆಗೆ ಜವಾಬ್ದಾರಿ

ಎಚ್‌ಸಿಪಿ ಡಿಸೈನ್ ಆಂಡ್ ಪ್ಲಾನಿಂಗ್ ಸಂಸ್ಥೆಗೆ ಜವಾಬ್ದಾರಿ

ಎಚ್‌ಸಿಪಿ ಡಿಸೈನ್ ಆಂಡ್ ಪ್ಲಾನಿಂಗ್ ಸಂಸ್ಥೆಗೆ ನೀಲನಕ್ಷೆ ತಯಾರಿಸುವ ಜವಾಬ್ದಾರಿ ವಹಿಸಲಾಗಿತ್ತು. ಅವರು ಈಗಾಗಲೇ ಪಾರ್ಲಿಮೆಂಟ್‌, ಸಂಸತ್‌, ಸಂಸದರ ನಿವಾಸ ಸೇರಿ ಒಟ್ಟು ಹತ್ತು ಹೊಸ ಸರ್ಕಾರಿ ಕಟ್ಟಡಗಳ ನೀಲನಕ್ಷೆಯನ್ನು ನೀಡಿದ್ದಾರೆ.

ಪ್ರಧಾನಿ ನಿವಾಸದಿಂದ ಸುರಂಗ ಮಾರ್ಗ ಇರಲಿದೆ

ಪ್ರಧಾನಿ ನಿವಾಸದಿಂದ ಸುರಂಗ ಮಾರ್ಗ ಇರಲಿದೆ

ಮೂಲಗಳ ಪ್ರಕಾರ ಪ್ರಧಾನಿ ನಿವಾಸದಿಂದ ಸಂಸತ್ತಿಗೆ ಹಾಗೂ ಪ್ರಧಾನಿ ಕಾರ್ಯಾಲಯಕ್ಕೆ ಸುರಂಗ ಮಾರ್ಗ ಸಹ ಇರಲಿದೆಯಂತೆ. ಪ್ರಧಾನಿಗಳು ನೇರವಾಗಿ ತಮ್ಮ ನಿವಾಸದಿಂದ ಸಂಸತ್ತಿಗೆ ಹಾಗೂ ತಮ್ಮ ಕಾರ್ಯಾಲಯಕ್ಕೆ ಬರಬಹುದಾಗಿದೆ.

ಈಗಿರುವ ಸಂಸತ್‌ ಭವನ ಚಿಕ್ಕದು

ಈಗಿರುವ ಸಂಸತ್‌ ಭವನ ಚಿಕ್ಕದು

ಪ್ರಸ್ತುತ ಈಗಿರುವ ಸಂಸತ್‌ ಭವನದಲ್ಲಿ 552 ಸಂಸದರಿಗಷ್ಟೆ ಕೂರಲು ಸ್ಥಳಾವಕಾಶ ಇದೆ. ಆದರೆ ಹೊಸ ಸಂಸತ್ತಿನಲ್ಲಿ 1400 ಮಂದಿ ಸಂಸದರು ಬೇಕಾದರೂ ಕೂರಬಹುದು ಅಷ್ಟು ಹೆಚ್ಚಿನ ಪ್ರಮಾಣದ ಸ್ಥಳಾವಕಾಶ ಇರಲಿದೆ. ಅಷ್ಟೆ ಅಲ್ಲದೆ ಎಸಿ, ವೈಫೈ ಸೌಲಭ್ಯ, ಪಾರ್ಕಿಂಗ್ ಸೌಲಭ್ಯ ಎಲ್ಲವೂ ಹೊಸ ಸಂಸತ್ತಿನಲ್ಲಿ ಇರಲಿದೆ. ಹೊಸ ಪಾರ್ಲಿಮೆಂಟ್ ಮತ್ತು ಪ್ರಧಾನಿ ನಿವಾಸ 13 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿದೆ.

English summary
Construction of new parliament and prime minister residence will complete by 2024. Blue print of new parliament and PM house is on the table.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X