• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನವದೆಹಲಿ: ಮೇ ತಿಂಗಳಲ್ಲಿ 7,000 ಮೆಗಾವ್ಯಾಟ್ ಗಡಿ ದಾಟಿದ ವಿದ್ಯುತ್ ಬೇಡಿಕೆ

|
Google Oneindia Kannada News

ನವದೆಹಲಿ ಮೇ 21: ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ತಾಪಮಾನದ ಮಧ್ಯೆ, ದೆಹಲಿಯ ವಿದ್ಯುತ್ ಬೇಡಿಕೆಯು ಉತ್ತರದತ್ತ ಭಾರಿ ಏರಿಕೆಯಾಗುತ್ತಿದ್ದು ಹೊಸ ದಾಖಲೆಯನ್ನು ಸೃಷ್ಟಿಸಿದೆ. ಬಾಂಬೆ ಸಬರ್ಬನ್ ಎಲೆಕ್ಟ್ರಿಕ್ ಸಪ್ಲೈ (ಬಿಎಸ್‌ಇಎಸ್) ಶುಕ್ರವಾರ (ಮೇ 20) ವಿದ್ಯುತ್ ಬೇಡಿಕೆಯ ಹೆಚ್ಚಳದ ಹಿಂದಿನ ಕಾರಣ ಕೂಲಿಂಗ್ ಲೋಡ್ ಎಂದು ಹೇಳಿದೆ.

ಗುರುವಾರ ರಾತ್ರಿ 11:24 ರ ಸುಮಾರಿಗೆ, ನಗರದ ಗರಿಷ್ಠ ವಿದ್ಯುತ್ ಬೇಡಿಕೆಯು ಋತುವಿನ ಅತ್ಯಧಿಕ 7070 MW ಅನ್ನು ತಲುಪಿದೆ. ಇದು ಇದುವರೆಗೆ ಅತ್ಯಧಿಕ ವಿದ್ಯುತ್ ಬಳಕೆಯಾಗಿದೆ. ಡಿಸ್ಕಾಮ್‌ನ ಅಂದಾಜಿನ ಪ್ರಕಾರ, ಬೇಸಿಗೆಯಲ್ಲಿ ದೆಹಲಿಯ ಸುಮಾರು 50 ಪ್ರತಿಶತದಷ್ಟು ವಿದ್ಯುತ್ ಬೇಡಿಕೆಯು ಕೂಲಿಂಗ್ ಲೋಡ್ (ACಗಳು + ಕೂಲರ್‌ಗಳು + ಫ್ಯಾನ್‌ಗಳು) ಕಾರಣದಿಂದಾಗಿದೆ.

ದೆಹಲಿ ಮಳೆ: 11 ಮಂದಿಯ ಪೈಕಿ ರಕ್ಷಣಾ ಸಚಿವರ ವಿಮಾನ ಮಾರ್ಗ ಬದಲು: ವರದಿದೆಹಲಿ ಮಳೆ: 11 ಮಂದಿಯ ಪೈಕಿ ರಕ್ಷಣಾ ಸಚಿವರ ವಿಮಾನ ಮಾರ್ಗ ಬದಲು: ವರದಿ

7,000 ಮೆಗಾವ್ಯಾಟ್ ಗಡಿ ದಾಟಿದ ವಿದ್ಯುತ್ ಬೇಡಿಕೆ

7,000 ಮೆಗಾವ್ಯಾಟ್ ಗಡಿ ದಾಟಿದ ವಿದ್ಯುತ್ ಬೇಡಿಕೆ

ಕಳೆದ ರಾತ್ರಿ ಡಿಸ್ಕಾಮ್ ಪ್ರಕಾರ, ದೆಹಲಿಯ ಇತಿಹಾಸದಲ್ಲಿ ನಾಲ್ಕು ವರ್ಷದ ಬಳಿಕ ದೆಹಲಿ ವಿದ್ಯುತ್ ಬೇಡಿಕೆ 7000 MW ಅನ್ನು ಮೀರಿದೆ. 2018 ರಲ್ಲಿ (ಜುಲೈ 10) ಮೊದಲ ಬಾರಿಗೆ 7,000 ಮಾರ್ಕ್ ಅನ್ನು ಮೀರಿತ್ತು. 2019ರಲ್ಲಿ 7016 ಮೆಗಾವ್ಯಾಟ್ ಬಳಕೆಯಾಗಿತ್ತು. 2020ರಲ್ಲಿ (ಜುಲೈ 2) 7409 ಮೆಗಾವ್ಯಾಟ್ ವಿದ್ಯುತ್ ಬಳಕೆಯಾಗಿದ್ದು ದೆಹಲಿಯ ಇತಿಹಾಸದಲ್ಲಿ ದಾಖಲಾಗಿತ್ತು.

"ವಿದ್ಯುತ್ ಬೇಡಿಕೆ 2018 ರಲ್ಲಿ (ಜುಲೈ 10) ಮೊದಲ ಬಾರಿಗೆ 7,000 ಮಾರ್ಕ್ ಅನ್ನು ಮೀರಿದೆ, ಇದು ಮುಂದಿನ ವರ್ಷ (2019)ಕ್ಕೆ 7016 MW ಅನ್ನು ತಲುಪಿತು. ಇದು ಜುಲೈ 2ಕ್ಕೆ 7409 MW ಅನ್ನು ತಲುಪಿತು. ಇದು ದೆಹಲಿಯ ಇತಿಹಾಸದಲ್ಲಿ ದಾಖಲಾದ ಅತ್ಯಧಿಕ ವಿದ್ಯುತ್ ಬಳಕೆಯಾಗಿದೆ.

ಆದರೆ 2020 ರಲ್ಲಿ ಇದು 7,000 MW ಅನ್ನು ದಾಟಲಿಲ್ಲ, ಬದಲಿಗೆ 6314 MW ಅನ್ನು ತಲುಪಿತು. 2021 ರಲ್ಲಿ (ಜುಲೈ 2) ನಗರದ ಗರಿಷ್ಠ ವಿದ್ಯುತ್ ಬೇಡಿಕೆ 7323 MW ಆಗಿತ್ತು. ಬಳಿಕ ಈ ವರ್ಷ (2022) ಮೇ ತಿಂಗಳಿಗೆ ಗರಿಷ್ಠ ವಿದ್ಯುತ್ ಬೇಡಿಕೆ 7,000 ಮೆಗಾವ್ಯಾಟ್ ಗಡಿ ದಾಟಿದೆ.

ಮೇ ತಿಂಗಳಲ್ಲಿ ದೆಹಲಿಯ ಗರಿಷ್ಠ ವಿದ್ಯುತ್ ಬೇಡಿಕೆ

ಮೇ ತಿಂಗಳಲ್ಲಿ ದೆಹಲಿಯ ಗರಿಷ್ಠ ವಿದ್ಯುತ್ ಬೇಡಿಕೆ

ಇದಲ್ಲದೆ ಮೇ 1 ರಿಂದ ದೆಹಲಿಯ ಗರಿಷ್ಠ ವಿದ್ಯುತ್ ಬೇಡಿಕೆಯು ಶೇಕಡಾ 10 ರಷ್ಟು ಹೆಚ್ಚಾಗಿದೆ ಮತ್ತು ಏಪ್ರಿಲ್ 1 ರಿಂದ ದೆಹಲಿಯ ಗರಿಷ್ಠ ವಿದ್ಯುತ್ ಬೇಡಿಕೆಯು ಶೇಕಡಾ 58 ಕ್ಕಿಂತ ಹೆಚ್ಚಾಗಿದೆ ಎಂದು ತಿಳಿಸಲಾಗಿದೆ.

ಮೇ ತಿಂಗಳ 20 ದಿನಗಳಲ್ಲಿ ಇದು 15 ನೇ ಬಾರಿಗೆ ರಾಷ್ಟ್ರ ರಾಜಧಾನಿಯ ಗರಿಷ್ಠ ವಿದ್ಯುತ್ ಬೇಡಿಕೆ 6000 MW ದಾಟಿದೆ. ಡಿಸ್ಕಾಮ್ ಪ್ರಕಾರ, ಮೇ ತಿಂಗಳಲ್ಲಿ ದೆಹಲಿಯ ಗರಿಷ್ಠ ವಿದ್ಯುತ್ ಬೇಡಿಕೆಯು 2021 ಮತ್ತು 2020 ರಲ್ಲಿ 6000 MW ಅನ್ನು ದಾಟಿರಲಿಲ್ಲ. 2019 ರಲ್ಲಿ ಅದು ದಾಟಿತ್ತು. 6000 MW ಮಾರ್ಕ್ ಕೇವಲ ಮೂರು ಸಂದರ್ಭಗಳಲ್ಲಿ - ಮೇ 29 (6020 MW), ಮೇ 30 (6240 MW) ಮತ್ತು ಮೇ 31 (6461 MW) ರಷ್ಟಿತ್ತು.

ಮೇನಲ್ಲಿ ಇಲ್ಲಿಯವರೆಗೆ, ಗರಿಷ್ಠ ವಿದ್ಯುತ್ ಬೇಡಿಕೆಯು 2021, 2020 ಮತ್ತು 2019 ರ ಮೇ ತಿಂಗಳ ಅನುಗುಣವಾದ ದಿನಗಳಲ್ಲಿ 100 ಪ್ರತಿಶತದಷ್ಟು ಹೆಚ್ಚಾಗಿದೆ. ಹಿಂದೆ ಏಪ್ರಿಲ್ 2021, 2020 ಮತ್ತು 2019 ಕ್ಕೆ ಹೋಲಿಸಿದರೆ ಏಪ್ರಿಲ್ 2022 ರಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆಯು ಶೇಕಡಾ 100 ರಷ್ಟು ಹೆಚ್ಚಿತ್ತು.

ಏಪ್ರಿಲ್ ಡೇಟಾ:

ಏಪ್ರಿಲ್ ಡೇಟಾ:

ಇದಲ್ಲದೆ "ಏಪ್ರಿಲ್ 2022 ರಲ್ಲಿ ಏಳು ಸಂದರ್ಭಗಳಲ್ಲಿ, ದೆಹಲಿಯ ಗರಿಷ್ಠ ವಿದ್ಯುತ್ ಬೇಡಿಕೆಯು ಏಪ್ರಿಲ್‌ನಲ್ಲಿ ಅತ್ಯಧಿಕವಾಗಿದೆ. ಇದು ಹಿಂದಿನ ದಾಖಲೆಯನ್ನು ಮುರಿದಿದೆ. ಏಪ್ರಿಲ್ 19 ರಂದು 5735 MW, ಏಪ್ರಿಲ್ 20 ರಂದು 5761 MW, ಆಗಸ್ಟ್ 21 ರಂದು 5781 MW, ಏಪ್ರಿಲ್ 27 ರಂದು 5786 MW, ಏಪ್ರಿಲ್ 28 ರಂದು 6050 MW ಮತ್ತು ಏಪ್ರಿಲ್ 29 ರಂದು 6197 ಮತ್ತು ಏಪ್ರಿಲ್ 30 ರಂದು 6036 MW," ಎಂದು ಡಿಸ್ಕಾಂ ತಿಳಿಸಿದೆ. ಬಿಸಿಲಿನ ತಾಪಮಾನವನ್ನು ತಪ್ಪಿಸಲು ಈ ಪ್ರಮಾಣದ ವಿದ್ಯುತ್ ಬಳಕೆಯಾಗಿದ್ದು ಇದು ಹೀಟ್‌ವೇವ್ ಎಷ್ಟರ ಮಟ್ಟಿಗೆ ಇತ್ತು ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.

ತಾಪಮಾನದಲ್ಲಿ ಇಳಿಕೆ ಸಾಧ್ಯತೆ

ತಾಪಮಾನದಲ್ಲಿ ಇಳಿಕೆ ಸಾಧ್ಯತೆ

ಇದಕ್ಕೂ ಮುನ್ನ ಗುರುವಾರ (ಮೇ 19) ನಗರದ ಮೂಲ ಹವಾಮಾನ ಕೇಂದ್ರವಾದ ಸಫ್ದರ್‌ಜಂಗ್‌ನಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಮೂರು ಡಿಗ್ರಿಗಳಷ್ಟು 43.6 ಡಿಗ್ರಿಗಳಿಗೆ ಏರಿತು. ಆದಾಗ್ಯೂ, ಭಾರತೀಯ ಹವಾಮಾನ ಇಲಾಖೆ (IMD) ಮೇ 21 ರಿಂದ 24 ರವರೆಗೆ ಬಿರುಗಾಳಿಯ ಗಾಳಿಯೊಂದಿಗೆ ಮಳೆಯ ಮುನ್ಸೂಚನೆ ನೀಡಿರುವುದರಿಂದ ಶನಿವಾರ (ಮೇ 21) ರಿಂದ ತಾಪಮಾನದಲ್ಲಿ ಭಾರೀ ಇಳಿಕೆಯಾಗುವ ಸಾಧ್ಯತೆ ಇದೆ.

English summary
Amid increasing temperatures in the national capital, Delhi's power demand continues a northwards climb, creating new records. Bombay Suburban Electric Supply (BSES) on Friday (May 20) attributed cooling load as the reason behind an increase in the power demand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X