ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಪಕ್ಷಗಳಿಂದ ಸಂಪೂರ್ಣ ಚಳಿಗಾಲ ಅಧಿವೇಶನ ಬಹಿಷ್ಕರಿಸುವ ಸಾಧ್ಯತೆ

|
Google Oneindia Kannada News

ನವದೆಹಲಿ, ನವೆಂಬರ್ 30: ಸಂಸತ್ ಚಳಿಗಾಲ ಅಧಿವೇಶನದ ಎರಡನೇ ದಿನದ ಕಲಾಪವನ್ನು ಕಾಂಗ್ರೆಸ್ ಮತ್ತು ಇತರ 13 ವಿರೋಧ ಪಕ್ಷಗಳು ಬಹಿಷ್ಕರಿಸುವ ಸಾಧ್ಯತೆಯಿದೆ. ಯಾವುದೇ ಚರ್ಚೆಯಿಲ್ಲದೆ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯನ್ನು ಸರ್ಕಾರ ಅಂಗೀಕರಿಸಿದ ನಂತರ ಪ್ರತಿಪಕ್ಷಗಳು ಈ ಬಗ್ಗೆ ಚರ್ಚಿಸುತ್ತಿವೆ.

ಮಂಗಳವಾರ ಸಭೆ ನಡೆಸಲಿರುವ ವಿರೋಧ ಪಕ್ಷಗಳು ಡಿಸೆಂಬರ್ 23 ರವರೆಗೆ ಇಡೀ ಅಧಿವೇಶನವನ್ನು ಬಹಿಷ್ಕರಿಸುವ ಕರೆಯನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ಡಿಸೆಂಬರ್ 23ರವರೆಗೆ ಕಲಾಪವನ್ನು ಬಹಿಷ್ಕರಿಸುವ ನಿರೀಕ್ಷೆಯಿದೆ.

ಸಂಸತ್ ಉಭಯ ಸದನಗಳಲ್ಲಿ ಕೃಷಿ ಕಾಯ್ದೆ ರದ್ಧತಿ 2021ರ ಮಸೂದೆ ಅಂಗೀಕಾರ ಸಂಸತ್ ಉಭಯ ಸದನಗಳಲ್ಲಿ ಕೃಷಿ ಕಾಯ್ದೆ ರದ್ಧತಿ 2021ರ ಮಸೂದೆ ಅಂಗೀಕಾರ

ಕಾಂಗ್ರೆಸ್ ಕರೆದಿರುವ ಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ ಪಾಲ್ಗೊಳ್ಳುವ ಸಾಧ್ಯತೆ ಕಡಿಮೆಯಾಗಿದ್ದು, ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲು ಟಿಎಂಸಿ ಪ್ರತ್ಯೇಕ ಸಭೆ ಕರೆಯುವ ನಿರೀಕ್ಷೆಯಿದೆ. ಸಂಸತ್ತಿನಲ್ಲಿ ಬೆಳೆಗೆ ಕನಿಷ್ಠ ಬೆಂಬಲವನ್ನು ಖಾತರಿಪಡಿಸುವ ಕಾನೂನನ್ನು ಒತ್ತಾಯಿಸಲು ವಿರೋಧ ಪಕ್ಷಗಳಿಗೆ ಅವಕಾಶ ಸಿಗುತ್ತದೆಯೇ ಇಲ್ಲವೇ ಎಂಬುದರ ಮೇಲೆ ಮುಂದಿನ ನಿರ್ಧಾರವು ಅವಲಂಬಿಸಿರುತ್ತದೆ.

New Delhi: Opposition Parties Likely to skip entire Winter Session

ಸೋಮವಾರದ ಸಭೆಗೂ ಗೈರು ಹಾಜರಾಗಿದ್ದ ಟಿಎಂಸಿ:

ಸಂಸತ್ ಕಲಾಪವನ್ನು ಬಹಿಷ್ಕರಿಸಬೇಕೇ ಬೇಡವೇ ಎಂಬುದರ ಬಗ್ಗೆ ತೃಣಮೂಲ ಕಾಂಗ್ರೆಸ್ ಪಕ್ಷವು ಸ್ವತಂತ್ರ್ಯ ತೀರ್ಮಾನವನ್ನು ತೆಗೆದುಕೊಳ್ಳಲಿದೆ. ಮೊದಲ ಬಾರಿಗೆ ಟಿಆರ್‌ಎಸ್ ಭಾಗವಹಿಸಿದ್ದ ಸೋಮವಾರದ ಸಭೆಗೆ ಟಿಎಂಸಿ ಹಾಜರಾಗಿರಲಿಲ್ಲ. ಈ ಮಧ್ಯೆ ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಇತರ ನಾಯಕರನ್ನು ಭೇಟಿ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

"ಕೇಂದ್ರ ಸರ್ಕಾರದ ಸರ್ವಾಧಿಕಾರಿ ನಿರ್ಧಾರವನ್ನು ವಿರೋಧಿಸಲು ಮತ್ತು ಸಂಸದೀಯ ಪ್ರಜಾಪ್ರಭುತ್ವವನ್ನು ರಕ್ಷಿಸಲು ಮುಂದಿನ ಕ್ರಮದ ಕುರಿತು ಚರ್ಚಿಸಲು ರಾಜ್ಯಸಭೆಯ ವಿರೋಧ ಪಕ್ಷಗಳ ನೆಲದ ನಾಯಕರು ಮಂಗಳವಾರ ಸಭೆ ಸೇರಲಿದ್ದಾರೆ" ಎಂದು ಟಿಆರ್‌ಎಸ್ ಮತ್ತು ಎಎಪಿ ಸೇರಿದಂತೆ 14 ರಾಜಕೀಯ ಪಕ್ಷಗಳ ಜಂಟಿ ಹೇಳಿಕೆ ತಿಳಿಸಿತ್ತು.

English summary
New Delhi: Opposition Parties Likely to skip entire Winter Session. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X