ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ ನಲ್ಲಿ ದೆಹಲಿಯಲ್ಲಿ 48 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲೆ

|
Google Oneindia Kannada News

ನವದೆಹಲಿ, ಜೂನ್ 10: ದೆಹಲಿಯ ಪಾಲಂ ಪ್ರದೇಶದಲ್ಲಿ ಸೋಮವಾರ 48 ಡಿಗ್ರಿ ಸೆಲ್ಷಿಯಸ್ ತಾಪಮಾನ ತಲುಪಿತ್ತು. ಜೂನ್ ನಲ್ಲಿ ದೆಹಲಿಯಲ್ಲಿ ಕಂಡುಬಂದ ದಾಖಲೆ ಉಷ್ಣಾಂಶ ಇದು. ಉತ್ತರ ಭಾರತದಲ್ಲಿ ಉಷ್ಣ ಮಾರುತಕ್ಕೆ ಜನ ತತ್ತರಿಸುತ್ತಿದ್ದಾರೆ. ಆದರೆ ಪಾಲಂನಿಂದ 14 ಕಿ.ಮೀ. ದೂರದಲ್ಲಿ ಇರುವ ಸಫ್ದರ್ ಜಂಗ್ ನಲ್ಲಿ 45.6 ಡಿಗ್ರಿ ಸೆಲ್ಷಿಯಸ್ ದಾಖಲಾಗಿದೆ.

ದೆಹಲಿಯಲ್ಲಿ ಈ ವರೆಗಿನ ಸಾರ್ವಕಾಲಿಕ ದಾಖಲೆ ಆಗಿರುವುದು ಮೇ 26, 1998ರಂದು. ಆ ದಿನ 48.4 ಡಿಗ್ರಿ ಸೆಲ್ಷಿಯಸ್ ದಾಖಲಾಗಿತ್ತು. ಇನ್ನು 2016ರ ಮೇ ತಿಂಗಳಲ್ಲಿ ರಾಜಸ್ತಾನದ ಫಲೋಡಿಯಲ್ಲಿ ಸಾರ್ವಕಾಲಿಕ ದಾಖಲೆ ಉಷ್ಣಾಂಶ 51 ಡಿಗ್ರಿ ಸೆಲ್ಷಿಯಸ್ ಇದೆ. ಅಂದ ಹಾಗೆ ಮಂಗಳವಾರ ರಾತ್ರಿಯಿಂದ ಸ್ವಲ್ಪ ನಿರಾಳ ಆಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಗುಡುಗು ಸಹಿತ ಮಳೆಯಾಗುವ ಸೂಚನೆ ನೀಡಿದೆ.

ದೆಹಲಿಯಲ್ಲಿ ಬಿಸಿಗಾಳಿ ಮುಂದುವರಿಕೆ, ರೆಡ್ ಅಲರ್ಟ್ ಘೋಷಣೆದೆಹಲಿಯಲ್ಲಿ ಬಿಸಿಗಾಳಿ ಮುಂದುವರಿಕೆ, ರೆಡ್ ಅಲರ್ಟ್ ಘೋಷಣೆ

ಜೂನ್ 12ರಿಂದ ಆಚೆಗೆ ದೆಹಲಿಯ ಜನರು ಉಷ್ಣಾಂಶದಲ್ಲಿ ಇಳಿಕೆ ನಿರೀಕ್ಷಿಸಬಹುದು ಎಂದು ಹವಾಮಾನ ಇಲಾಖೆಯ ವಿಜ್ಞಾನಿ ದೇವೇಂದ್ರ ಪ್ರಧಾನ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಉಷ್ಣಾಂಶವು 45 ಡಿಗ್ರಿ ಸೆಲ್ಷಿಯಸ್ ತಲುಪಿದಾಗಲೇ ಉಷ್ಣ ಮಾರುತದ ಬಗ್ಗೆ ಘೋಷಣೆ ಮಾಡಲಾಯಿತು. ಯಾವಾಗ ಉಷ್ಣಾಂಶ 47 ಡಿಗ್ರಿ ಸೆಲ್ಷಿಯಸ್ ತಲುಪಿತೋ ಆಗ ಅದು 'ಗಂಭೀರ' ಸ್ವರೂಪ ಪಡೆಯಿತು.

New Delhi: June record 48 degree celsius

ಈ ವರ್ಷದ ಬೇಸಿಗೆಯಲ್ಲಿ ರಾಜಸ್ತಾನದಲ್ಲಿ 48 ಡಿಗ್ರಿ ಸೆಲ್ಷಿಯಸ್ ಮತ್ತು ಅದಕ್ಕೆ ಮೀರಿದ ಉಷ್ಣಾಂಶ ದಾಖಲಾಗಿದೆ. ಚುರುನಲ್ಲಿ ದಾಖಲೆ ಉಷ್ಣಾಂಶ ಇತ್ತು. ಒಂದು ವಾರದ ಹಿಂದೆ ಜಗತ್ತಿನ ಅತ್ಯಂತ ಉಷ್ಣ ಪ್ರದೇಶ ಎಂದು 15 ಸ್ಥಳಗಳನ್ನು ಹೆಸರಿಸಿದ್ದರೆ, ಅದರಲ್ಲಿ ಭಾರತದ 11 ಸ್ಥಳಗಳು ಇದ್ದವು. ಉಳಿದವು ಪಾಕಿಸ್ತಾನದಲ್ಲಿ ಇದ್ದವು.

ನೈರುತ್ಯ ಮುಂಗಾರು ಕೇರಳ ಪ್ರವೇಶಿಸಲು 24 ಗಂಟೆ ಬಾಕಿ; ಉತ್ತರ ಭಾರತ ಧಗಧಗನೈರುತ್ಯ ಮುಂಗಾರು ಕೇರಳ ಪ್ರವೇಶಿಸಲು 24 ಗಂಟೆ ಬಾಕಿ; ಉತ್ತರ ಭಾರತ ಧಗಧಗ

ಈ ರೀತಿ ಆಗುತ್ತಿರುವುದು ಜಾಗತಿಕ ಹವಾಮಾನ ಬದಲಾವಣೆಯ ಪರಿಣಾಮ ಎನ್ನಲಾಗುತ್ತಿದೆ. ಕಳೆದ ವರ್ಷದ ಉಷ್ಣಾಂಶ 1901ನೇ ಇಸವಿಯಿಂದ ಈಚೆಗೆ ದಾಖಲಾಗಿರುವ ಸಾರ್ವಕಾಲಿಕ ಅತಿ ಹೆಚ್ಚು ಉಷ್ಣಾಂಶವಾಗಿತ್ತು. 2004ರಿಂದ ಈಚೆಗೆ ದೇಶದಲ್ಲಿ 15ರಲ್ಲಿ 11 ವರ್ಷ ಅತ್ಯಂತ ಹೆಚ್ಚು ಉಷ್ಣಾಂಶ ದಾಖಲಾಗಿದೆ.

English summary
Record 48-degree Celsius temperature in Delhi Palam area on Monday (June 10th, 2019). Here are the details of the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X