ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಕನ್ನಡ ಅಕಾಡೆಮಿ ಸ್ಥಾಪನೆ ಮಾಡಲಿದೆ ಆಪ್ ಸರ್ಕಾರ

By Gururaj
|
Google Oneindia Kannada News

Recommended Video

ದೆಹಲಿಯಲ್ಲಿ ಕನ್ನಡ ಅಕಾಡೆಮಿ ಸ್ಥಾಪನೆ ಮಾಡಲಿದೆ ಆಪ್ ಸರ್ಕಾರ | Filmibeat Kannada

ನವದೆಹಲಿ, ಆಗಸ್ಟ್ 10 : ದೆಹಲಿಯಲ್ಲಿ ಕನ್ನಡ ಸೇರಿದಂತೆ 15 ಪ್ರಾದೇಶಿಕ ಭಾಷೆಗಳ ಅಕಾಡೆಮಿ ಸ್ಥಾಪನೆಗೆ ಆಮ್‌ ಆದ್ಮಿ ಪಕ್ಷದ ಸರ್ಕಾರ ಒಪ್ಪಿಗೆ ನೀಡಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಗುರುವಾರ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ ನಗರದ ವಿವಿಧ ಪ್ರದೇಶಗಳಲ್ಲಿ ಪ್ರಾದೇಶಿಕ ಭಾಷೆಗಳ ಅಕಾಡೆಮಿ ಸ್ಥಾಪನೆ ಮಾಡಲು ಅನುಮೋದನೆ ನೀಡಲಾಯಿತು.

ಈ ಕುರಿತು ಮಾಹಿತಿ ನೀಡಿದ ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸೊಸೋಡಿಯಾ ಅವರು, 'ದೇಶದ ನಾನಾ ಭಾಗದಿಂದ ಜನರು ಕೆಲಸಕ್ಕಾಗಿ ದೆಹಲಿಗೆ ಬಂದು ನೆಲೆಸಿದ್ದಾರೆ. ಈ ವೈವಿದ್ಯತೆಯಿಂದಾಗಿಯೇ ದೆಹಲಿ ಕಾಸ್ಮೋಪಾಲಿಟನ್ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದೆ. ಆದ್ದರಿಂದ ಪ್ರಾದೇಶಿಕ ಭಾಷೆಗಳಿಗೆ ಉತ್ತೇಜನ ನೀಡಲಾಗುತ್ತಿದೆ' ಎಂದರು.

New Delhi government to set up Kannada academy

'ಕೇವಲ ಭಾರತದ 15 ಪ್ರಾದೇಶಿಕ ಭಾಷೆಗಳು ಮಾತ್ರವಲ್ಲ. ವಿದೇಶಿ ಭಾಷೆಗಳ ಅಕಾಡೆಮಿಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದೆ' ಎಂದು ಮನೀಷ್ ಸೊಸೋಡಿಯಾ ತಿಳಿಸಿದರು.

ಯಾವ-ಯಾವ ಭಾಷೆ : ಕನ್ನಡ, ಬಂಗಾಳಿ, ಮರಾಠಿ, ಗುಜರಾತಿ, ತಮಿಳು, ತೆಲಗು, ಮಲೆಯಾಳಂ, ಒಡಿಯಾ, ಅಸ್ಸಾಮಿ, ಹರಿಯಾಣವಿ ಸೇರಿದಂತೆ 15 ಭಾಷೆಗಳ ಅಕಾಡೆಮಿ ಸ್ಥಾಪನೆಯಾಗಲಿದೆ.

English summary
Delhi AAP government approved to set up 15 new regional language academies across the city. Bengali, Marathi, Gujarati, Tamil, Telugu, Malayalam, Kannada, Odia and other languages academy will be set up soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X