ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಭಾರತ ಇದೀಗ ಥಂಢಾ ಥಂಢಾ ಕೂಲ್ ಕೂಲ್

|
Google Oneindia Kannada News

ನವದೆಹಲಿ, ಡಿಸೆಂಬರ್, 14: ಬೆಚ್ಚನೆಯ ವಸ್ತ್ರ, ಬೆಂಕಿಯ ಆಶೀರ್ವಾದ ಉತ್ತರ ಭಾರತದ ಜನರಿಗೆ ಪ್ರತಿದಿನ ಬೇಕಾಗಿದೆ. ಉಷ್ಣತೆ ಮೈನಸ್ ಡಿಗ್ರಿಗೆ ತಲುಪಿದ್ದರಿಂದ ಸಹಜವಾಗಿಯೇ ಜನ ಜೀವನದ ಮೇಲೆ ಪರಿಣಾಮ ಬೀರಿದೆ.

ಉತ್ತರ ಭಾರತ ಇದೀಗ ಥಂಢಾ ಥಂಢಾ.. ಚಳಿಗಾಲದ ವಾತಾವರಣ ಎಲ್ಲೆಡೆ ಮನೆ ಮಾಡಿದ್ದು ಹಿಮಾಚಲ ಪ್ರದೇಶ ಮತ್ತು ಕಾಶ್ಮೀರದ ಹಲವಾರು ಕಡೆ ಹಿಮಪಾತವಾಗಿದೆ.

ದೇಶದಲ್ಲೇ ಅತಿ ಕನಿಷ್ಠ ತಾಪಮಾನ ಕಾಶ್ಮೀರದ ಲೇಹ್‌ನಲ್ಲಿ -12.1 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಜಮ್ಮು- ಕಾಶ್ಮೀರದ ಕೆಲವೆಡೆಗಳಲ್ಲಿ ಉಷ್ಣತೆ ಶೂನ್ಯ ದಿಂದ ಕೆಳಕ್ಕಿಳಿದಿದೆ. ಶ್ರೀನಗರದಲ್ಲಿ 0.6 ಡಿಗ್ರಿ ಸೆ. ತಾಪಮಾನವಿತ್ತು. ಹಿಮಾಚಲದಲ್ಲಿ ಹಿಮಪಾತವಾಗಿದ್ದು, ಸ್ಪಿತಿ ಜಿಲ್ಲೆಯಲ್ಲಿ -4.6, ಮನಾಲಿಯಲ್ಲಿ -3 ಮತ್ತು ಕಲ್ಪಾದಲ್ಲಿ -2.2 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ.[ಚಳಿಗಾಲಕ್ಕೆ ಬೆಚ್ಚನೆಯ ಆನ್ ಲೈನ್ ಆಫರ್ ಗಳು]

ಇನ್ನೂ ಎರಡು-ಮೂರು ದಿನ ಇದೇ ರೀತಿ ಚಳಿ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಳೆ, ಭೂಕಂಪದ ಭಯದಲ್ಲಿದ್ದ ದೆಹಲಿ, ಪಂಜಾಬ್ , ಜಮ್ಮು ಮತ್ತು ಕಾಶ್ಮೀರದಲ್ಲಿ ಜನರು ಚಳಿಗಾಲಕ್ಕೆ ಹೊಂದಿಕೆಯಾಗುವ ದಿನಚರಿಯಲ್ಲಿ ತೊಡಗಿದ್ದಾರೆ. ಉತ್ತರ ಭಾರತದ ಚಳಿಗಾಲದ ಮೇಲೆ ಒಂದು ಸುತ್ತು ಹಾಕಿಕೊಂಡು ಬರೋಣ....(ಪಿಟಿಐ ಚಿತ್ರಗಳು)

ಸಂಸತ್ ಭವನ ಕಂಡಿದ್ದು ಹೀಗೆ

ಸಂಸತ್ ಭವನ ಕಂಡಿದ್ದು ಹೀಗೆ

ಮಂಜು ಕವಿದ ವಾತಾವರಣದಲ್ಲಿ ಸಂಸತ್ ಭವನದ ಸಮೀಪ ಕಂಡು ಬಂದ ದೃಶ್ಯ. ನವದೆಹಲಿಯಲ್ಲಿ ಸಹ ಕನಿಷ್ಠ ಉಷ್ಣಾಂಶ ದಾಖಲಾಗಿದ್ದು ಜನರು ಮನೆ ಬಿಟ್ಟು ಹೊರಬರಲು ಹಿಂಜರೆಯುತ್ತಿದ್ದಾರೆ.

ಶ್ರೀನಗರ

ಶ್ರೀನಗರ

ಜಮ್ಮು ಕಾಶ್ಮೀರದಲ್ಲೂ ಚಳಿಯ ಅಬ್ಬರ ಜೋರಾಗಿದ್ದು ಕಾಶ್ಮೀರದ ಹಲವೆಡೆ ಹಿಮಪಾತವಾಗುತ್ತಿದೆ.

ಒಂದು ವಾಕ್ ಹೋದರೆ ಹೇಗೆ?

ಒಂದು ವಾಕ್ ಹೋದರೆ ಹೇಗೆ?

ಚಳಿಯ ನಡುವೆಯೇ ದೈನಂದಿನ ಕೆಲಸಗಳು ಸಾಗಬೇಕಿದೆ. ನವದೆಹಲಿಯ ಪ್ರಮುಖ ರಸ್ತೆಯೊಂದರಲ್ಲಿ ಮುಖಕ್ಕೆ ಮಾಸ್ಕ್ ಧರಿಸಿ ಹೊರಟ ವ್ಯಕ್ತಿ ಕಂಡಿದ್ದು ಹೀಗೆ.

ಅಬ್ಬಾ,, ಸ್ವಲ್ಪ ಬೆಚ್ಚಗಾಯಿತು!

ಅಬ್ಬಾ,, ಸ್ವಲ್ಪ ಬೆಚ್ಚಗಾಯಿತು!

ಸೂರತ್ ನಲ್ಲೂ ಚಳಿಯ ಅಬ್ಬರ. ಚಳಿಯಿಂದ ರಕ್ಷಣೆ ಪಡೆದುಕೊಳ್ಳಲು ಬೆಂಕಿಯ ಮೊರೆ ಹೋದ ನಾಗರಿಕರು.

ಅನಂತ್ ನಾಗ್ ಜಿಲ್ಲೆ

ಅನಂತ್ ನಾಗ್ ಜಿಲ್ಲೆ

ಅನಂತ್ ನಾಗ್ ಜಿಲ್ಲೆಯಲ್ಲಿ ಹಿಮಪಾತವಾಗುತ್ತಿದ್ದು ಹಿಮದ ನಡುವೆಯೇ ಸಾಗಿದ ನಾಗರಿಕರು.

English summary
Cold wave swept in several parts of north India. Leh in Ladakh region experiencing the coldest season at minus 12 degree Celsius. Upcoming 3-4 days this kind of cold weather will continue many parts of North India said Meteorological Department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X