ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಜ್ರಿವಾಲ್ ಮೇಲಿನ ದಾಳಿಯನ್ನು ಗಾಂಧಿ ಹತ್ಯೆಗೆ ಹೋಲಿಸಿದ ಎಎಪಿ

|
Google Oneindia Kannada News

ನವದೆಹಲಿ, ನವೆಂಬರ್ 21: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಮಂಗಳವಾರ ಮುಖ್ಯಮಂತ್ರಿ ಕಚೇರಿ ಹೊರಭಾಗದಲ್ಲಿ ನಡೆದ ಖಾರದ ಪುಡಿ ದಾಳಿಯ ಕೃತ್ಯವನ್ನು ಆಮ್ ಆದ್ಮಿ ಪಕ್ಷ ಮಹಾತ್ಮ ಗಾಂಧಿ ಹತ್ಯೆಯ ಸಂಚಿಗೆ ಹೋಲಿಸಿದೆ.

ಗಾಂಧಿ ಹತ್ಯೆಗೆ ಕೇಜ್ರಿವಾಲ್ ಮೇಲಿನ ದಾಳಿಯನ್ನು ಹೋಲಿಸಿ ಎಎಪಿ ಮಾಡಿರುವ ಟ್ವೀಟ್, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ನನ್ನನ್ನು ಮುಗಿಸಲು 'ಪ್ರಭಾವಿ'ಗಳಿಂದ ಆದೇಶವಾಗಿದೆ ಎಂದ ಕೇಜ್ರಿವಾಲ್ನನ್ನನ್ನು ಮುಗಿಸಲು 'ಪ್ರಭಾವಿ'ಗಳಿಂದ ಆದೇಶವಾಗಿದೆ ಎಂದ ಕೇಜ್ರಿವಾಲ್

ತಾವು ಸಾಯುವುದನ್ನು ಬಯಸುತ್ತಿರುವ ವ್ಯಕ್ತಿಗಳಿಂದ ನಡೆದಿರುವ ಭಾರಿ ಸಂಚಿನ ಭಾಗವಾಗಿ ಈ ದಾಳಿಯ ಪ್ರಯತ್ನ ನಡೆದಿದೆ ಎಂದು ಕೇಜ್ರಿವಾಲ್ ಹೇಳಿದ್ದರು.

new delhi chilli powder thrown at Arvind Kejriwal aap tweet mahatma gandhi

ಆದರೆ, ಎಎಪಿ ಮಾಡಿರುವ ಟ್ವೀಟ್, ಗಾಂಧಿ ಹತ್ಯೆಯ ಸಂದರ್ಭವನ್ನು ನೆನಪಿಸುವಂತಿದ್ದು ಹತ್ಯೆಗೆ ಘಟನೆಗೆ ಈ ದಾಳಿಯನ್ನು ಹೋಲಿಸಿದೆ.

ಈ ದಾಳಿಯು ಉದ್ದೇಶಪೂರ್ವಕವಾಗಿದ್ದಲ್ಲ ಎಂದು ದೆಹಲಿ ಪೊಲೀಸರು ಹೇಳುವಂತೆ ವ್ಯಂಗ್ಯಚಿತ್ರವನ್ನು ಬಿಡಿಸಲಾಗಿದೆ. ಅದನ್ನು ಎಎಪಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ.

ಅರವಿಂದ್ ಕೇಜ್ರಿವಾಲ್ ಮೇಲೆ ಖಾರದ ಪುಡಿ ಎರಚಿದ ವ್ಯಕ್ತಿಅರವಿಂದ್ ಕೇಜ್ರಿವಾಲ್ ಮೇಲೆ ಖಾರದ ಪುಡಿ ಎರಚಿದ ವ್ಯಕ್ತಿ

ಕೇಜ್ರಿವಾಲ್ ಅವರನ್ನು ಮಹಾತ್ಮ ಗಾಂಧೀಜಿ ಅವರಿಗೆ ಹೋಲಿಕೆ ಮಾಡುವ ಈ ಟ್ವೀಟ್ ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ.

 ಪ್ರಧಾನಿಯ ಹಳೇ ಟ್ವೀಟ್ ರೀಟ್ವೀಟ್ ಮಾಡಿ, ಲೇವಡಿ ಮಾಡಿದ ಕೇಜ್ರಿ ಪ್ರಧಾನಿಯ ಹಳೇ ಟ್ವೀಟ್ ರೀಟ್ವೀಟ್ ಮಾಡಿ, ಲೇವಡಿ ಮಾಡಿದ ಕೇಜ್ರಿ

ಗೋಡ್ಸೆ ಅವರು ಗಾಂಧೀಜಿ ಅವರಿಗೆ ಎರಡೂ ಕೈಗಳನ್ನು ಮುಗಿದು ಗೌರವ ಸಲ್ಲಿಸುತ್ತಿರುವ ಸಂದರ್ಭದಲ್ಲಿ ದೀಪಾವಳಿ ಆಟದ ಪಿಸ್ತೂಲು ಜೇಬಿನಿಂದ ಜಾರಿಬಿದ್ದು ಗುಂಡು ಹಾರಿತು ಎಂದು ಇಂದು ಮಹಾತ್ಮ ಗಾಂಧಿ ಅವರು ಹತ್ಯೆಯಾದರೆ ದೆಹಲಿ ಪೊಲೀಸರು ಹೇಳುತ್ತಿದ್ದರು ಎಂಬುದಾಗಿ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ವ್ಯಂಗ್ಯಚಿತ್ರ ಬರೆದಿದ್ದರು. ಅದನ್ನು ಎಎಪಿ ಕೇಜ್ರಿವಾಲ್ ಅವರ ಮೇಲಿನ ದಾಳಿಯ ವಿರುದ್ಧ ಬಳಸಿಕೊಂಡಿದೆ.

English summary
AAP compared the attack on Dehli Chief Minister Arvind Kejriwal to Mahatma Gandhi's assassination on twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X