ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಚುನಾವಣೆ : ಗೊತ್ತಿಲ್ಲದ ಕುತೂಹಲಕಾರಿ ಸಂಗತಿ

By Kiran B Hegde
|
Google Oneindia Kannada News

ನವದೆಹಲಿ, ಫೆ. 7: ರಾಜ್ಯ ವಿಧಾನಸಭೆ ಚುನಾವಣೆ ರಾಷ್ಟ್ರದ ಗಮನ ಸೆಳೆದಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಪ್ರಬಲ ಸೆಡ್ಡು ಹೊಡೆದಿರುವ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಮತ್ತೆ ಅಧಿಕಾರಕ್ಕೇರುವ ಕನಸು ಕಾಣುತ್ತಿದೆ. ದೆಹಲಿ ಗೆಲುವನ್ನು ಪ್ರತಿಷ್ಠೆಯಾಗಿ ಪಡೆದಿರುವ ಬಿಜೆಪಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ.

delhi

ಆದರೆ, ಪ್ರಸಕ್ತ ನಡೆಯುತ್ತಿರುವ ದೆಹಲಿ ಚುನಾವಣೆ ಕುರಿತು ಹಲವು ವಿಷಯಗಳು ದೇಶದ ಜನರಿಗೆ ತಿಳಿದಿಲ್ಲ. ಏನು ಗೊತ್ತೇ?

  • ನವದೆಹಲಿಯು ಕೇಂದ್ರಾಡಳಿತ ಪ್ರದೇಶವಾದ ಮೇಲೆ ಇದೇ ಪ್ರಥಮ ಬಾರಿಗೆ ರಾಷ್ಟ್ರಪತಿ ಆಳ್ವಿಕೆಯಡಿ ಚುನಾವಣೆ ನಡೆಯುತ್ತಿದೆ. [ನವದೆಹಲಿ ಚುನಾವಣೆ ಲೈವ್]
  • ಸುಮಾರು 1.3 ಕೋಟಿ ಮತದಾರರಲ್ಲಿ 2.2 ಲಕ್ಷ ಜನ ಇನ್ನೂ ಹದಿಹರೆಯದವರು ಅಥವಾ ಪ್ರಥಮ ಬಾರಿಗೆ ಮತ ಚಲಾಯಿಸುತ್ತಿರುವವರು. 37 ಲಕ್ಷ ಜನ 20ರಿಂದ 27 ವರ್ಷ ವಯಸ್ಸಿನವರು.
  • ಈ ಬಾರಿ 300 ಮತದಾರರು 100ಕ್ಕಿಂತ ಹೆಚ್ಚು ವಯಸ್ಸಿನವರು. [ದೆಹಲಿಗರೇ ಬೃಹತ್ ಸಂಖ್ಯೆಯಲ್ಲಿ ಮತದಾನ ಮಾಡಿ]
  • ಉತ್ತರದ ದೆಹಲಿಯಲ್ಲಿರುವ ವಿಕಾಸ್ ಪುರಿ ಮತಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರಿದ್ದಾರೆ.
  • ಹಳೆ ದೆಹಲಿಯ ಚಾಂದನಿ ಚೌಕ್‌ನಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಮತದಾರರಿದ್ದಾರೆ.
  • ದೆಹಲಿಯಲ್ಲಿ 12 ಕ್ಷೇತ್ರಗಳು ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಆದರೆ, ಪ. ಜನಾಂಗಕ್ಕೆ ಒಂದೂ ಕ್ಷೇತ್ರವಿಲ್ಲ.
  • ಚುನಾವಣೆ ಆಯೋಗವೇ ಹೇಳಿರುವಂತೆ ರಾಷ್ಟ್ರ ರಾಜಧಾನಿಯಲ್ಲಿ 9,000 ಮತದಾರರಿಗೆ ಇನ್ನೂ ಮನೆಯಿಲ್ಲ. [ದೆಹಲಿ ವಾರ್ : 8 ಅಂಶ ನಿರ್ಣಾಯಕ]
  • ಇಲ್ಲಿಯವರೆಗೆ ನವದೆಹಲಿಯನ್ನು ಕೇವಲ ಏಳು ಮುಖ್ಯಮಂತ್ರಿಗಳು ಆಳಿದ್ದಾರೆ.
  • ಅತ್ಯಂತ ಕಡಿಮೆ ಅವಧಿಗೆ (49 ದಿನಗಳು) ಆಡಳಿತ ನಡೆಸಿದವರು ಆಮ್ ಆದ್ಮಿಯ ಅರವಿಂದ ಕೇಜ್ರಿವಾಲ್. ಇದಕ್ಕೂ ಮೊದಲು ಸುಷ್ಮಾ ಸ್ವರಾಜ್ 52 ದಿನಗಳ ಕಾಲ ಆಳ್ವಿಕೆ ನಡೆಸಿದ್ದರು.
  • ದೆಹಲಿ ಪ್ರಥಮ ಮುಖ್ಯಮಂತ್ರಿ ಚೌಧರಿ ಬ್ರಹ್ಮ ಪ್ರಕಾಶ್ ಅತ್ಯಂತ ಕಡಿಮೆ ವಯಸ್ಸಿನ ಮುಖ್ಯಮಂತ್ರಿ. ಅವರು ಕೇವಲ 34ನೇ ವಯಸ್ಸಿನಲ್ಲಿಯೇ ಈ ಜವಾಬ್ದಾರಿ ನಿಭಾಯಿಸಿದ್ದಾರೆ.
  • ಕಾಂಗ್ರೆಸ್‌ನ ಶೀಲಾ ದೀಕ್ಷಿತ್ (60) ಅತ್ಯಂತ ಹೆಚ್ಚು ವಯಸ್ಸಿನ ಮುಖ್ಯಮಂತ್ರಿ. ಅವರು 15 ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ. [ಚಾಣಕ್ಯ ಮತ ಸಮೀಕ್ಷೆ ಏನು ಹೇಳುತ್ತೆ?]
  • ದೆಹಲಿಗೆ ಸುಮಾರು 37 ವರ್ಷಗಳ ಕಾಲ ಮುಖ್ಯಮಂತ್ರಿಯೇ ಇರಲಿಲ್ಲ. 1956ರ ನವೆಂಬರ್ 1ರಿಂದ 1993ರ ಡಿಸೆಂಬರ್ 2ರ ವರೆಗೆ ಮುಖ್ಯಮಂತ್ರಿ ಇರಲಿಲ್ಲ.
  • ದೆಹಲಿಯಲ್ಲಿ 1952ರಲ್ಲಿ ಮೊದಲ ಬಾರಿಗೆ ವಿಧಾನಸಭೆಯನ್ನು ರಚಿಸಲಾಯಿತು. ಆಗ 48 ಸದಸ್ಯರಿದ್ದರು. ಇದ್ದು 70 ಶಾಸಕರಿದ್ದಾರೆ.
English summary
New Delhi goes to poll on Saturday. But there are many interesting and little-known facts about Delhi's election history.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X